ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಂದರೆ ಹೆಲಿಕಾಪ್ಟರ್ ಶಾಟ್ ಕಣ್ಮುಂದೆ ಬರುತ್ತದೆ. ಧೋನಿ ಕ್ರಿಕೆಟ್ ಜಗತ್ತಿಗೆ ಮೊತ್ತ ಮೊದಲ ಬಾರಿಗೆ ಹೆಲಿಕಾಪ್ಟರ್ ಶಾಟ್ ಪರಿಚಯಿಸಿದ್ದರು. ಆ ಬಳಿಕ ಈ ರೀತಿಯ ಶಾಟ್ ಹೊಡೆಯಲು ಆಗಾಗ್ಗೆ ವಿಶ್ವದ ಅನೇಕ ಆಟಗಾರರು ಪ್ರಯತ್ನಿಸಿದುಂಟು. ಆದರೆ ಧೋನಿಯ ಟ್ರೇಡ್ ಮಾರ್ಕ್ನಂತಿರುವ ಈ ಬಿರುಸಿನ ಹೊಡೆತವನ್ನು ಯಾರಿಂದಲೂ ಕಾಪಿ ಮಾಡಲಾಗುವುದಿಲ್ಲ ಎಂದು ಹೇಳಲಾಗಿತ್ತು.
ಆದರೆ ಇದೀಗ ಅಫ್ಘಾನಿಸ್ತಾನದ ಯುವ ಆಲ್ರೌಂಡರ್ ರಶೀದ್ ಖಾನ್ ಅಧ್ಭುತ ಹೆಲಿಕಾಪ್ಟರ್ ಶಾಟ್ ಸಿಡಿಸಿ ಮಿಂಚಿದ್ದಾರೆ. ಧೋನಿಯ ಹೊಡೆತಕ್ಕೆ ಸರಿ ಸಮಾನವಾದ ಹೆಲಿಕಾಪ್ಟರ್ ಶಾಟ್ ಎಂಬ ವಿಶ್ಲೇಷಣೆ ಈ ಸಿಕ್ಸರ್ಗೆ ಲಭಿಸಿದೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಗೂಗ್ಲಿ ಎಸೆತಗಳಿಂದ ಕಮಾಲ್ ಮಾಡಿರುವ ರಶೀದ್ ಖಾನ್ ತಾನು ಅತ್ಯುತ್ತಮ ಬ್ಯಾಟ್ಸಮನ್ ಕೂಡ ಹೌದು ಎಂಬುದನ್ನು ಈ ಮೂಲಕ ನಿರೂಪಿಸಿದಂತಿದೆ.
ಐಪಿಎಲ್ ಟಿ-20ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಿಂಚಿರುವ ರಶೀದ್ ಖಾನ್ ಇದೀಗ ಟಿ- 10 ಲೀಗ್ನಲ್ಲೂ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಧಾರೆಯೆರೆದಿದ್ದಾರೆ. ಶಾರ್ಜಾದಲ್ಲಿ ನಡೆಯುತ್ತಿರುವ ಟಿ-10 ಲೀಗ್ನಲ್ಲಿ ಮರಾಠಿ ಅರೆಬಿಯನ್ಸ್ ಪರ ಕಣಕ್ಕಿಳಿದ ರಶೀದ್ ಸಿಡಿಸಿದ ಹೆಲಿಕಾಪ್ಟರ್ ಸಿಕ್ಸ್ ವೀಡಿಯೊ ಭಾರೀ ವೈರಲ್ ಆಗುತ್ತಿದೆ.
ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್ ಎಸೆತವನ್ನು ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ಗೆ ಅಟ್ಟಿದ ರಶೀದ್ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಯುವ ದಾಂಡಿಗ ಹೊಡೆದ ಚೆಂಡು ಸ್ಟೇಡಿಯಂ ಛಾವಣಿ ಮೇಲೆ ಹೋಗಿ ಬಿದ್ದಿರುವುದು ವಿಶೇಷ. ವಿಶ್ವದ ನಂಬರ್ ಟಿ-20 ಬೌಲರ್ ಇತ್ತೀಚೆಗೆ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದು, ಈ ಹಿಂದೆ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ 7 ಎಸೆತಗಳಿಂದ 21 ರನ್ಗಳಿಸಿದ್ದರು.
😍😍😍👍🏻🙏 #Helicopters #Inventer @msdhoni Bhai 👍🏻👍🏻👍🏻 @T10League @MarathaArabians pic.twitter.com/DH8RdfUnYA
— Rashid Khan (@rashidkhan_19) November 29, 2018
😍😍😍👍🏻🙏 #Helicopters #Inventer @msdhoni Bhai 👍🏻👍🏻👍🏻 @T10League @MarathaArabians pic.twitter.com/DH8RdfUnYA
— Rashid Khan (@rashidkhan_19) November 29, 2018
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ