ಅತಿ ಹೆಚ್ಚು ಬಾರಿ ರಣಜಿ ಟ್ರೋಫಿ (Ranji Trophy) ಗೆದ್ದ ಮುಂಬೈ ಇದೀಗ ವಿಶ್ವ ದಾಖಲೆ ನಿರ್ಮಿಸಿದೆ. ಇಲ್ಲಿಯವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ಸಾಧನೆಯನ್ನು ಮುಂಬೈ (Mumbai) ರಣಜಿ ತಂಡ ಮಾಡುವ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದೆ. ಹೌದು, ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ತಂಡವು ಉತ್ತರಾಖಂಡ್ (Uttarakhand Cricket Team) ವಿರುದ್ಧಇತಿಹಾಸ ಅಳಿಸಿ ಹಾಕಿದ ಬರೋಬ್ಬರಿ 725 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನ ಇತಿಹಾಸದಲ್ಲೇ ಅತಿ ದೊಡ್ಡ ಗೆಲುವಾಗಿದೆ. ಮುಂಬೈ ಈ ಬಾರಿ ಆಸ್ಟ್ರೇಲಿಯಾ ತಂಡ ನ್ಯೂ ಸೌತ್ ವೇಲ್ಸ್ ದಾಖಲೆಯನ್ನು ಮುರಿದಿದ್ದು, ನೂತನ ದಾಖಲೆಯನ್ನು ಬರೆದಿದೆ. ಇನ್ನು, ನ್ಯೂ ಸೌತ್ ವೇಲ್ಸ್ (New South Wales) ತಂಡವು 1929-30 ಋತುವಿನಲ್ಲಿ ಕ್ವೀನ್ಸ್‌ಲ್ಯಾಂಡ್ ಅನ್ನು 685 ರನ್‌ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಈ ದಾಖಲೆಯನ್ನು ನಿರ್ಮಿಸಿತ್ತು.
ದಾಖಲೆಯ ಗೆಲುವು ದಾಖಲಿಸಿದ ಮುಂಬೈ:
ಪ್ರಥ್ವಿ ಶಾ ನಾಯಕತ್ವದ ಮುಂಬೈ ನೀಡಿದ 795 ರನ್ ಗುರಿಯನ್ನು ಉತ್ತರಾಖಂಡ ಚೇಸ್ ಮಾಡುವಲ್ಲಿ ಎಡವಿದೆ. ಉತ್ತರಾಖಂಡ್ ತಂಡ ಕೇವಲ 69 ರನ್‌ಗಳಿಗೆ ಆಲೌಟ್ ಆಯಿತು. ಇಡೀ ಪಂದ್ಯದಲ್ಲಿ ಮುಂಬೈ ಮೇಲುಗೈ ಸಾಧಿಸಿತು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 647 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಉತ್ತರಾಖಂಡ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಎರಡನೇ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
Mumbai Won by 725 Run(s) (Qualified) #MUMvCAU #RanjiTrophy #QF2 Scorecard:https://t.co/9IGODqlOPD
— BCCI Domestic (@BCCIdomestic) June 9, 2022
ಇನ್ನು, ಈ ಪಂದ್ಯದಲ್ಲಿ ಮುಂಬೈನ ಸುವೇದ್ ಪರ್ಕರ್ 10 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ 252 ರನ್ ಗಳ ಮ್ಯಾರಥಾನ್ ಮ್ಯಾಚ್ ಆಡಿದರು. 21ರ ಹರೆಯದ ಸುವೇದ್ ಪರ್ಕರ್ ಅವರ ಚೊಚ್ಚಲ ಪಂದ್ಯದಲ್ಲಿಯೇ ಅದ್ಭುತವಾಗಿ ಆಡುವ ಮೂಲಕ ಎಲ್ಲರ ಗಮನ ಸೆಳೆದರು. ಪ್ರಥಮ ದರ್ಜೆ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಸುವೇದ್ 250 ರನ್ ಗಳಿಸಿದ 12ನೇ ಹಾಗೂ ಐದನೇ ಆಟಗಾರ ಎನಿಸಿಕೊಂಡರು. ಸರ್ಫರಾಜ್ ಖಾನ್ ಕೂಡ ಬಲಿಷ್ಠ ಫಾರ್ಮ್ ಕಾಯ್ದುಕೊಂಡು ಶತಕ ಬಾರಿಸಿದರು.
ಇದನ್ನೂ ಓದಿ: IND vs SA: ಇಂದಿನಿಂದ ಭಾರತ- ದಕ್ಷಿಣ ಆಫ್ರಿಕಾ ಟಿ20 ಸರಣಿ ಆರಂಭ; ಯುವಪಡೆ ಮೇಲೆ ಹೆಚ್ಚಿನ ನಿರೀಕ್ಷೆ
ಅದರಂತೆ ಮುಂಬೈ ಪರ ಧವಳ್ ಕುಲಕರ್ಣಿ, ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ತಲಾ 3 ವಿಕೆಟ್ ಪಡೆದರು. ಮೋಹಿತ್ ಅವಸ್ತಿ ಒಂದು ವಿಕೆಟ್ ಪಡೆದರು. ಉತ್ತರಾಖಂಡ ಪರ ಕುನಾಲ್ ಚಂಡೇಲಾ 21 ರನ್ ಗಳಿಸಿದ್ದು ಹೊರತು ಪಡಿಸಿ 6 ಆಟಗಾರರು ಎರಡಂಕಿಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.
ಮತ್ತೊಂದೆಡೆ ದಾಖಲೆ ಬರೆದ ಬೆಂಗಾಲ್:
ಇನ್ನು, ರಣಜಿ ಟ್ರೋಪಿಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಮತ್ತು ಜಾರ್ಖಂಡ್ ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಬೆಂಗಾಲ್ ಪರ ಬ್ಯಾಂಟಿಗ್ ಮಾಡಿದ 9 ಆಟಗಾರರು 50+ ರನ್ ಗಳಿಸುವ ಮೂಲಕ ವಿಶೇಷ ದಾಖಲೆಯನ್ನು ಬೆಂಗಾಲ್ ತಂಡ ನಿರ್ಮಿಸಿದೆ. ಇದರ ನಡುವೆ ಸದೀಪ್ ಘರಾಮಿ 186 ಮತ್ತು ಅನುಸ್ತಪ್ ಮಂಜುದಾರ್ 117 ರನ್ ಗಳಿಸುವ ಮೂಲಕ ಆಕರ್ಷಕ ಶರಕ ಸಿಡಿಸಿದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಒಂದು ತಂಡದ ಪರ ಬರೋಬ್ಬರಿ 9 ಆಟಗಾರರು 50+ ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ