ಕರ್ನಾಟಕ-ಬರೋಡ ರಣಜಿ ಪಂದ್ಯ: ಒಂದೇ ದಿನದಲ್ಲಿ ಉರುಳಿತು 22 ವಿಕೆಟ್

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ನಾಯಕ ಮನೀಶ್ ಪಾಂಡೆ 43 ಹಾಗೂ ಶರತ್ ಬಿಆರ್ 30 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ.

Vinay Bhat | news18
Updated:January 7, 2019, 5:43 PM IST
ಕರ್ನಾಟಕ-ಬರೋಡ ರಣಜಿ ಪಂದ್ಯ: ಒಂದೇ ದಿನದಲ್ಲಿ ಉರುಳಿತು 22 ವಿಕೆಟ್
ಸಾಂದರ್ಭಿಕ ಚಿತ್ರ
Vinay Bhat | news18
Updated: January 7, 2019, 5:43 PM IST
ವಡೋದರಾ (ಜ. 07): ಇಲ್ಲಿನ ಮೋತಿ ಭಾಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಬರೋಡ ನಡುವಣ ರಣಜಿ ಪಂದ್ಯದ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಮೊದಲ ದಿನವೇ 22 ವಿಕೆಟ್ ಉರುಳಿವೆ.

ಕರ್ನಾಟಕವನ್ನು 112 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ಬರೋಡ 111 ರನ್​ಗಳ ಮುನ್ನಡೆಯೊಂದಿಗೆ 223 ರನ್​ಗೆ ಆಲೌಟ್ ಆಯಿತು. ಬಳಿಕ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 13 ರನ್ ಕಲೆಹಾಕಿದೆ. ರಾಜ್ಯ ತಂಡ ಇನ್ನೂ 98 ರನ್​ಗಳ ಹಿನ್ನಡೆಯಲ್ಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ರಾಜ್ಯ ತಂಡ, ಲುಕ್ಮನ್ ಮೆರಿವಾಲ್ ಹಾಗೂ ಭಾರ್ಗವ್ ತಲಾ 3 ವಿಕೆಟ್, ರಿಷಿ ಅರೋತೆ ಹಾಗೂ ಸೋಯೆಬ್ ತಾಯ್ ತಲಾ 2 ವಿಕೆಟ್ ಕಿತ್ತು ಕರ್ನಾಟಕವನ್ನು ಕೇವಲ 31.2 ಓವರ್​​ನಲ್ಲೆ 112 ರನ್​ಗೆ ಕಟ್ಟಿಹಾಕಿದರು. ನಾಯಕ ಮನೀಶ್ ಪಾಂಡೆ 43 ಹಾಗೂ ಶರತ್ ಬಿಆರ್ 30 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ.

ಇದನ್ನೂ ಓದಿ: (VIDEO): ಐತಿಹಾಸಿಕ ಗೆಲುವಿನ ಖುಷಿಗೆ 'ನಾಗಿನ್ ಡ್ಯಾನ್ಸ್​' ಕಿಕ್: ಕೊಹ್ಲಿ-ಪಾಂಡ್ಯ ಸಖತ್ ಸ್ಟೆಪ್ಸ್

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಬರೋಡ ಆರಂಭದಲ್ಲೆ ಎರಡು ವಿಕೆಟ್ ಕಳೆದುಕೊಂಡಿತಾದರು 3ನೇ ವಿಕೆಟ್​ಗೆ ವಿಷ್ಣು ಸೋಲಂಕಿ ಹಾಗೂ ದೀಪಕ್ ಹೂಡ ಆಸರೆಯಾಗಿ ನಿಂತರು. ಇಬ್ಬರು ಅರ್ಧಶತಕ ಬಾರಿಸಿ 119 ರನ್​ಗಳ ಕಾಣಿಕೆ ನೀಡಿದರು. ಸೋಲಂಕಿ 69 ರನ್​ ಗಳಿಸಿದರೆ, ದೀಪಕ್ 51 ರನ್​ಗೆ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಯೂಸುಫ್ ಪಠಾಣ್ ಅಜೇಯ 36 ರನ್​ಗಳಿಸಿದರೆ, ಸೋಯೆಬ್ ತಾಯ್ 23 ರನ್​ ಬಾರಿಸಿದರಷ್ಟೆ. ಪರಿಣಾಮ ಬರೋಡ ತಂಡ 223 ರನ್​ಗೆ ಆಲೌಟ್ ಆಯಿತು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ ಹಾಗೂ ಶುಭಂಗ್ ಹೆಗ್ಡೆ ತಲಾ 4 ವಿಕೆಟ್ ಕಿತ್ತರೆ, ಪ್ರಸಿದ್ಧ್ ಕೃಷ್ಣ ಹಾಗೂ ಜಗದೀಶ್ ಸುಚತ್ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ: 'ವಿಶ್ವಕಪ್' ವಿಚಾರವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಯುವರಾಜ್ ಸಿಂಗ್

ನಂತರ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಪರ ರವಿಕುಮಾರ್ ಸಮರ್ಥ್​​ ಹಾಗೂ ಶುಭಂಗ್ ಹೆಗ್ಡೆ ಸೊನ್ನೆ ಸುತ್ತಿದರೆ, ಕೃಷ್ಣ ಮೂರ್ತಿ ಸಿದ್ಧಾರ್ಥ್​​ 11 ಹಾಗೂ ಕರುಣ್ ನಾಯರ್ 2 ರನ್​​ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬರೋಡ ಪರ ಭಾರ್ಘವ್ ಭಟ್ 2 ವಿಕೆಟ್ ಪಡೆದಿದ್ದಾರೆ.
Loading...

ಇದನ್ನೂ ಓದಿ: ಆಸೀಸ್ ಸರಣಿಯಲ್ಲಿ ರಿಷಭ್: 'ಕೀಪಿಂಗ್, ಬ್ಯಾಟಿಂಗ್ ಜೊತೆ ಸ್ಲೆಡ್ಜಿಂಗ್'​​​ನಲ್ಲೂ ಮಿಂಚಿದ ಪಂತ್

ರಾಜ್ಯ ತಂಡ ಈ ಪಂದ್ಯದಲ್ಲಿ ಇನ್ನಿಂಗ್ಸ್​ ಮುನ್ನಡೆಯೊಂದಿಗೆ ಡ್ರಾ ಸಾಧಿಸಿದರು ಕ್ವಾರ್ಟರ್ ಫೈನಲ್​ಗೇರುವುದು ಖಚಿತವಾಗಿದೆ. ಇತ್ತ ಬರೋಡ ತಂಡ 20 ಅಂಕವನ್ನಷ್ಟೆ ಗಳಿಸಿದ್ದು, ಮುಂದಿನ ಹಂತಕ್ಕೆ ತಲುಪ ಬೇಕಾದರೆ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

First published:January 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ