ಗೌತಮ್ ದಾಳಿಗೆ ರೈಲ್ವೇಸ್ ಧೂಳೀಪಟ: ಕರ್ನಾಟಕಕ್ಕೆ 176 ರನ್ ಭರ್ಜರಿ ಜಯ

6ನೇ ಸುತ್ತಿನ ಬಳಿಕ ಕರ್ನಾಟಕ ಒಟ್ಟು 21 ಅಂಕಗಳೊಂದಿಗೆ ಎ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ಇನ್ನೆರಡು ಪಂದ್ಯಗಳು ಬಾಕಿ ಇದ್ದು ಕರ್ನಾಟಕ ನೌಕೌಟ್ ಹಂತಕ್ಕೇರುವ ಅವಕಾಶ ದಟ್ಟವಾಗಿದೆ.

Vijayasarthy SN | news18
Updated:December 25, 2018, 6:32 PM IST
ಗೌತಮ್ ದಾಳಿಗೆ ರೈಲ್ವೇಸ್ ಧೂಳೀಪಟ: ಕರ್ನಾಟಕಕ್ಕೆ 176 ರನ್ ಭರ್ಜರಿ ಜಯ
ಕೃಷ್ಣಪ್ಪ ಗೌತಮ್
  • News18
  • Last Updated: December 25, 2018, 6:32 PM IST
  • Share this:
ಶಿವಮೊಗ್ಗ(ಡಿ. 25): ಕರ್ನಾಟಕ ತಂಡ ನಿರೀಕ್ಷೆಯಂತೆ ರಣಜಿ ಟ್ರೋಫಿ 6ನೇ ಸುತ್ತಿನಲ್ಲಿ ರೈಲ್ವೇಸ್ ವಿರುದ್ಧ ಜಯಭೇರಿ ಭಾರಿಸಿದೆ. ಇಂದು ಮುಕ್ತಾಯಗೊಂಡ ಪಂದ್ಯದಲ್ಲಿ ಕರ್ನಾಟಕ 176 ರನ್​ಗಳಿಂದ ಎದುರಾಳಿಗಳನ್ನು ಸದೆಬಡಿದಿದೆ. ಗೆಲ್ಲಲು 362 ರನ್ ಟಾರ್ಗೆಟ್ ಪಡೆದಿದ್ದ ರೈಲ್ವೇಸ್ ತಂಡದ ಎರಡನೇ ಇನ್ನಿಂಗ್ಸ್ 185 ರನ್​ಗೆ ಅಂತ್ಯಗೊಂಡಿತು. ಕೃಷ್ಣಪ್ಪ ಗೌತಮ್ ಅವರ ಸ್ಪಿನ್ ಗಾಳಕ್ಕೆ ಸಿಲುಕಿದ ರೈಲ್ವೇಸ್ ಬ್ಯಾಟುಗಾರರು ತರಗೆಲೆಗಳಂತೆ ಉದುರಿಹೋದರು. ಸೌರಭ್ ವಾಕಸ್ಕರ್, ನಿತಿನ್ ಭಿಲ್ಲೆ, ಪ್ರಥಮ್ ಸಿಂಗ್ ಮತ್ತು ಅರಿಂಧಮ್ ಘೋಷ್ ಅವರನ್ನು ಹೊರತುಪಡಿಸಿ ಉಳಿದ ಬ್ಯಾಟುಗಾರರು ಎರಡಂಕಿ ಮೊತ್ತದ ಗಡಿ ದಾಟಲೂ ವಿಫಲರಾದರು. ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಗಡಿ ದಾಟಿದ್ದ ರೈಲ್ವೇಸ್ ತಂಡವು ಗೆದ್ದರೂ ಗೆಲ್ಲಬಹುದೆಂಬ ಸಣ್ಣ ನಿರೀಕ್ಷೆ ಮೂಡಿತ್ತು. ಆದರೆ, ಪ್ರಥಮ್ ಸಿಂಗ್ ನಾಲ್ಕನೆಯವರಾಗಿ ಔಟಾಗುತ್ತಿದ್ದಂತೆಯೇ ರೈಲ್ವೇಸ್ ದಿಢೀರ್ ಕುಸಿತ ಕಂಡಿತು. 27 ರನ್ ಅಂತರದಲ್ಲಿ 7 ವಿಕೆಟ್ ಉದುರಿದವು.

ಇದಕ್ಕೆ ಮೊದಲು ಕರ್ನಾಟಕ ತಂಡ ಮೊದಲ ಇನ್ನಿಂಗ್ಸಲ್ಲಿ 214 ರನ್ ಗಳಿಸಿ ನಂತರ ಎದುರಾಳಿಗಳನ್ನು 143 ರನ್​ಗೆ ಆಲೌಟ್ ಮಾಡಿತು. 71 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸಲ್ಲಿ 2 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಕರ್ನಾಟಕ ತಂಡ ಒಟ್ಟಾರೆ 361 ರನ್ ಮುನ್ನಡೆ ಪಡೆದಿತ್ತು.

ಈ ಪಂದ್ಯದಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಭಾರಿಸಿದ ಡೇಗಾ ನಿಶ್ಚಲ್ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಬಾಜನರಾದರು. ಕರ್ನಾಟಕದ ರೋನಿತ್ ಮೋರೆ ಹಾಗೂ ಕೃಷ್ಣಪ್ಪ ಗೌತಮ್ ಅವರು ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಈ ರಣಜಿ ಋತುವಿನಲ್ಲಿ ಕರ್ನಾಟಕಕ್ಕೆ ಇದು 2ನೇ ಗೆಲುವಾಗಿದೆ. ಎ ಗುಂಪಿನಲ್ಲಿ ಕರ್ನಾಟಕ ಒಟ್ಟು 21 ಅಂಕಗಳೊಂದಿಗೆ 3ನೇ ಸ್ಥಾನಕ್ಕೇರಿದೆ. ಕರ್ನಾಟಕದಂತೆ ವಿದರ್ಭ ಕೂಡ 6 ಪಂದ್ಯಗಳಿಂದ 21 ಅಂಕ ಕಲೆಹಾಕಿ ರನ್ ರೇಟ್ ಆಧಾರದ ಮೇಲೆ 2ನೇ ಸ್ಥಾನದಲ್ಲಿದೆ. ಸೌರಾಷ್ಟ್ರ ತಂಡ 7 ಪಂದ್ಯಗಳಿಂದ 26 ಅಂಕ ಗಿಟ್ಟಿಸಿ ಅಗ್ರಸ್ಥಾನದಲ್ಲಿದೆ.

ಕರ್ನಾಟಕಕ್ಕೆ ಇನ್ನೆರಡು ಪಂದ್ಯಗಳು ಬಾಕಿ ಇವೆ. ಸೌರಾಷ್ಟ್ರ ಮತ್ತು ಛತ್ತೀಸ್​ಗಡ ವಿರುದ್ಧದ ಮುಂಬರುವ ಪಂದ್ಯಗಳನ್ನ ಸೆಣಸಲಿರುವ ಕರ್ನಾಟಕಕ್ಕೆ ನಾಕೌಟ್ ಹಂತಕ್ಕೇರುವ ಅವಕಾಶ ದಟ್ಟವಾಗಿದೆ. ಆ ಎರಡರಲ್ಲಿ ಒಂದು ಪಂದ್ಯ ಗೆದ್ದರೂ ಕರ್ನಾಟಕ ಮುಂದಿನ ಹಂತಕ್ಕೇರುವುದು ನಿಶ್ಚಿತವಾಗಲಿದೆ.

ಸಂಕ್ಷಿಪ್ತ ಸ್ಕೋರು:

ಕರ್ನಾಟಕ ಮೊದಲ ಇನ್ನಿಂಗ್ಸ್ 91.4 ಓವರ್ 214/10ರೈಲ್ವೇಸ್ ಮೊದಲ ಇನ್ನಿಂಗ್ಸ್ 60.2 ಓವರ್ 143/10

ಕರ್ನಾಟಕ ಎರಡನೇ ಇನ್ನಿಂಗ್ಸ್ 84 ಓವರ್ 290/2 (ಡಿಕ್ಲೇರ್)

ರೈಲ್ವೇಸ್ ಎರಡನೇ ಇನ್ನಿಂಗ್ಸ್ 86 ಓವರ್ 185/10
(ಎಸ್. ವಾಕಸ್ಕರ್ 43, ಪ್ರಥಮ್ ಸಿಂಗ್ 48, ನಿತಿನ್ ಭಿಲ್ಲೆ 39, ಎ. ಘೋಷ್ 24 ರನ್ – ಕೆ. ಗೌತಮ್ 30/6, ಶ್ರೇಯಸ್ ಗೋಪಾಲ್ 39/2)
First published:December 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading