ರಣಜಿ ಟ್ರೋಫಿ: ಕರ್ನಾಟಕ, ಕೇರಳ ಸೇರಿ 8 ತಂಡಗಳು ಕ್ವಾರ್ಟರ್​ಫೈನಲ್​ಗೆ ಲಗ್ಗೆ

2018-19ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ವಿದರ್ಭ, ಸೌರಾಷ್ಟ್ರ, ಕರ್ನಾಟಕ, ಗುಜರಾತ್, ಕೇರಳ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ತಂಡಗಳು ನಾಕೌಟ್ ಹಂತಕ್ಕೇರಿವೆ.

Vijayasarthy SN | cricketnext
Updated:January 10, 2019, 6:27 PM IST
ರಣಜಿ ಟ್ರೋಫಿ: ಕರ್ನಾಟಕ, ಕೇರಳ ಸೇರಿ 8 ತಂಡಗಳು ಕ್ವಾರ್ಟರ್​ಫೈನಲ್​ಗೆ ಲಗ್ಗೆ
ಕ್ರಿಕೆಟ್ ಮೈದಾನದ ಪ್ರಾತಿನಿಧಿಕ ಚಿತ್ರ
Vijayasarthy SN | cricketnext
Updated: January 10, 2019, 6:27 PM IST
ಬೆಂಗಳೂರು(ಜ. 10): ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಕೊನೆಯ ಸುತ್ತಿನಲ್ಲಿ ಎರಡೇ ದಿನಕ್ಕೆ ಸೋತರೂ ಎಂಟರ ಘಟ್ಟ ಪ್ರವೇಶಿಸುವಲ್ಲಿ ಸಫಲವಾಗಿದೆ. ಕೊನೆಯ ಸುತ್ತಿನ ಇತರೆ ಪಂದ್ಯಗಳ ಫಲಿತಾಂಶವು ಕರ್ನಾಟಕಕ್ಕೆ ಅನುಕೂಲ ಮಾಡಿಕೊಟ್ಟಿವೆ. ಎ ಗುಂಪಿನಿಂದ ಮೂರನೇ ತಂಡವಾಗಿ ಕರ್ನಾಟಕ ನಾಕೌಟ್ ಪ್ರವೇಶ ಪಡೆದಿದೆ. ಎ ಗುಂಪಿನಲ್ಲಿ ಕರ್ನಾಟಕ ಸೇರಿ 4 ತಂಡಗಳು ಕ್ವಾರ್ಟರ್ ಫೈನಲ್​ಗೆ ಎಂಟ್ರಿ ಪಡೆದಿವೆ. ಬಿ ಗುಂಪಿನಿಂದ 1, ಸಿ ಗುಂಪಿನಿಂದ 2 ಹಾಗೂ ಪ್ಲೇಟ್ ಗುಂಪಿನಿಂದ 1 ತಂಡಗಳು ನಾಕೌಟ್​ಗೆ ಲಗ್ಗೆ ಹಾಕಿವೆ. ಕೊನೆಯ ಸುತ್ತಿನಲ್ಲಿ ಕರ್ನಾಟಕವನ್ನು ಬಗ್ಗುಬಡಿದಿದ್ದ ಬರೋಡಾ ತಂಡವು ಕಡಿಮೆ ರನ್​ರೇಟ್ ಹೊಂದಿದ್ದರಿಂದ ನಾಕೌಟ್ ಪ್ರವೇಶದಿಂದ ವಂಚಿತವಾಯಿತು.

ಕ್ವಾರ್ಟರ್​ಫೈನಲ್ ಪ್ರವೇಶಿಸಿದ ತಂಡಗಳು:
ವಿದರ್ಭ, ಸೌರಾಷ್ಟ್ರ, ಕರ್ನಾಟಕ, ಗುಜರಾತ್, ಕೇರಳ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ್.

ಕರ್ನಾಟಕ, ಗುಜರಾತ್ ಮತ್ತು ಕೇರಳ ಹೊರತುಪಡಿಸಿ ಉಳಿದ ಐದು ತಂಡಗಳು ಲೀಗ್ ಹಂತದಲ್ಲಿ ಒಂದೂ ಸೋಲು ಕಾಣದೆ ಮುಂದಿನ ಹಂತ ಪ್ರವೇಶಿಸಿವೆ. ಎ  ಮತ್ತು ಬಿ ಈ ಎರಡೂ ಗುಂಪು ಸೇರಿ ಅಗ್ರಸ್ಥಾನ ಪಡೆದ ವಿದರ್ಭ ತಂಡವು ಪ್ಲೇಟ್ ಗ್ರೂಪ್​ನ ಟಾಪ್ಪರ್ ಉತ್ತರಾಖಂಡ್ ತಂಡವನ್ನು ಕ್ವಾರ್ಟರ್​ಫೈನಲ್​ನಲ್ಲಿ ಎದುರುಗೊಳ್ಳಲಿದೆ. ಎಂಟು ಪಂದ್ಯಗಳ ಪೈಕಿ ಆರರಲ್ಲಿ ಜಯಿಸಿದ ಉತ್ತರಾಖಂಡ್ ತಂಡ ಕ್ವಾರ್ಟರ್​ಫೈನಲ್ ಪ್ರವೇಶದ ಜೊತೆಗೆ ಮುಂದಿನ ಋತುವಿನ ರಣಜಿಯಲ್ಲಿ ಇಲೈಟ್ ಗುಂಪಿಗೆ ಭಡ್ತಿ ಪಡೆದಿದೆ.

ಇಲೈಟ್ ವಿಭಾಗದ ಮೂರು ಗುಂಪುಗಳಲ್ಲಿ ಕೊನೆಯ ಸ್ಥಾನ ಪಡೆದ ಛತ್ತೀಸ್​ಗಡ, ದೆಹಲಿ ಮತ್ತು ಗೋವಾ ತಂಡಗಳು ಮುಂದಿನ ಋತುವಿನಲ್ಲಿ ಪ್ಲೇಟ್ ಗುಂಪಿಗೆ ಹಿಂಬಡ್ತಿ ಪಡೆದಿವೆ.

ಜನವರಿ 15ರಂದು ನಾಲ್ಕೂ ಕ್ವಾರ್ಟರ್​ಫೈನಲ್ ಪಂದ್ಯಗಳು ನಡೆಯಲಿವೆ. ಜ. 24ರಂದು ಸೆಮಿಫೈನಲ್ ಹಾಗೂ ಫೆ. 3ರಂದು ಫೈನಲ್ ನಡೆಯಲಿದೆ.
First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ