ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M. Chinnaswamy Stadium) ನಡೆಯುತ್ತಿರುವ ರಣಜಿ ಟ್ರೋಫಿಯ (Ranji Trophy 2023) 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ್ (Karnataka vs Uttarakhand) ತಂಡಗಳು ಮುಖಾಮುಖಿ ಆಗಿವೆ. ಈ ಪಂದ್ಯದಲ್ಲಿ ಈಗಾಗಲೇ ಮೊದಲ ದಿನ ಕರ್ನಾಟಕ ತಂಡ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಕರ್ನಾಟಕ ತಂಡ ಉತ್ತರಾಖಂಡ ತಂಡದ ವಿರುದ್ಧ ಭರ್ಜರಿ ಬೌಲಿಂಗ್ ದಾಳಿ ನಡೆಸಿತು. 55.4 ಓವರ್‌ಗಳಲ್ಲಿ ಕೇವಲ 116 ರನ್‌ಗಳಿಗೆ ಉತ್ತರಾಖಂಡ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಇದೇ ವೇಳೆ ಕರ್ನಾಟಕದ ಪರ ಮಿಂಚಿದ ಎಂ. ವೆಎಂಕಟೇಶ್ 5 ವಿಕೆಟ್ ಪಡೆದರು.
ವೆಂಕಟೇಶ್ ಅದ್ಭುತ ಬೌಲಿಂಗ್:
ಇನ್ನು, ಕರ್ನಾಟಕದ ಯುವ ಆಟಗಾರ ಎಂ. ವೆಂಕಟೇಶ್ ಅವರು ಅದ್ಭುತ ಬೌಲಿಂಗ್ ಮಾಡುವ ಮೂಲಕ 5 ವಿಕೆಟ್ ಕಬಳಿಸಿದರು. ಕರ್ನಾಟಕ ಪರ 22ರ ಹರೆಯದ ಯುವ ವೇಗಿ ಮುರಳೀಧರ ವೆಂಕಟೇಶ್ ಅವರು 14 ಓವರ್‌ಗಳಲ್ಲಿ 36 ರನ್ ನೀಡಿ ಬರೋಬ್ಬರಿ 5 ವಿಕೆಟ್ ಪಡೆದು ಉತ್ತರಾಂಡ್ ಕುಸಿತಕ್ಕೆ ಪ್ರಮುಖ ಕಾರಣರಾದರು. ಇವರೊಂದಿಗೆ ವಿಧ್ವತ್ ಕಾವೇರಪ್ಪ ಹಾಗೂ ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು.
22 year old M Venkatesh who took Five Wickets in his debut Ranji match against Uttarakhand on Monday in Bengaluru is a trained Carnatic musician! His grandmother Vidushi G Saroja is a prominent Carnatic musician. His mother Dakshayini is a classical dancer. Amazing! #Karnataka
— DP SATISH (@dp_satish) February 1, 2023
ಇದನ್ನೂ ಓದಿ: Womens IPL 2023: ಮಹಿಳಾ ಐಪಿಎಲ್‌ಗೆ ತಲೆನೋವು ತಂದ ಮದುವೆ ಕಾಲ, ಬಿಸಿಸಿಐ ಈಗ ವಿಲವಿಲ!
ವೆಂಕಿ ಹಿನ್ನಲೆಯೇ ರೋಚಕ:
ಇನ್ನು, ಎಂ. ವೆಂಕಟೇಶ್ ಅವರು ಈ ಸಾಧನೆ ಮಾಡುವ ಮೂಲಕ ಮುನ್ನಲೆಗೆ ಬಂದಿದ್ದಾರೆ. ಹಾಗಿದ್ದರೆ ಈ ಅದ್ಭುತ ಪ್ರತಿಭೆ ಯಾರೆಂದು ನೋಡುವುದಾದರೆ, ಕರ್ನಾಟಕ ಸಂಗೀತಗಾರರಲ್ಲಿ ಪ್ರಮುಖರಾದ ಜಿ. ಸರೋಜಾ ಅವರ ಮೊಮ್ಮಗ ಈ ವೆಂಕಟೇಶ್ ಅವರು. ಇರೂ ಸಹ ಬಾಲ್ಯದಲ್ಲಿ ಹೆಚ್ಚು ಸಂಗೀತದತ್ತ ಆಸಸಕ್ತಿ ಹೊಂದಿದ್ದರಂತೆ. ಅಲ್ಲದೇ ವೆಂಕಟೇಶ್ ಅವರು ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕರ್ನಾಟಕ ಮತ್ತು ಉತ್ತರಾಖಂಡ ತಂಡ:
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ), ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಮುರಳೀಧರ ವೆಂಕಟೇಶ್ , ಶರತ್ ಬಿಆರ್ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.
ಉತ್ತರಾಖಂಡ್ ಪ್ಲೇಯಿಂಗ್ 11: ಜೀವನ್ಜೋತ್ ಸಿಂಗ್ (ನಾಯಕ), ಆದಿತ್ಯ ತಾರೆ (ವಿಕೆಟ್ ಕೀಪರ್), ಕುನಾಲ್ ಚಂಡೇಲಾ , ಅಖಿಲ್ ರಾವತ್ , ಅವನೀಶ್ ಸುಧಾ , ಅಭಯ್ ನೇಗಿ , ಸ್ವಪ್ನಿಲ್ ಸಿಂಗ್ , ದಿಕ್ಷಾಂಶು ನೇಗಿ , ಮಯಾಂಕ್ ಮಿಶ್ರಾ , ದೀಪಕ್ ಧಪೋಲಾ , ನಿಖಿಲ್ ಕೊಹ್ಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ