ಭಾರತದ ದೇಶೀಯ ಕ್ರಿಕೆಟ್ನ ಪ್ರಮುಖ ಟೂರ್ನಿಯಾದ ರಣಜಿ ಟ್ರೋಫಿಯಲ್ಲಿ (Ranji Trophy) ಆಡಲು ತೆರಳಿದ್ದ ಕ್ರಿಕೆಟಿಗರೊಬ್ಬರು ಇಹಲೋಕ ತ್ಯಜಿಸಿದ್ದಾರೆ. ಹಿಮಾಚಲ ಪ್ರದೇಶದ ಯುವ ಕ್ರಿಕೆಟಿಗ ಸಿದ್ಧಾರ್ಥ್ ಶರ್ಮಾ (Siddharth Sharma) ಗುರುವಾರ ರಣಜಿ ಟ್ರೋಫಿ ಪಂದ್ಯಕ್ಕಾಗಿ ಗುಜರಾತ್ಗೆ ತೆರಳಿದ್ದರು. ಆದರೆ ಅವರು ಅಸ್ವಸ್ಥರಾಗಿ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಇದಕ್ಕೂ ಮುನ್ನ ಒಡಿಶಾದ ಮಹಿಳಾ ಕ್ರಿಕೆಟ್ ಆಟರ್ಗಾತಿ ರಾಜಶ್ರೀ ಸ್ವೈನಿ (Rajashree) ಜನವರಿ 11 ರಿಂದ ನಾಪತ್ತೆಯಾಗಿದ್ದು, ಶುಕ್ರವಾರ, ಜನವರಿ 13ರಂದು ಕಟಕ್ (Cuttack) ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಿಭಾವಂತ ಕ್ರಿಕೆಟಿಗ ನಿಧನ:
ಎರಡು ವಾರಗಳ ಹಿಂದೆ ಸಿದ್ಧಾರ್ಥ್ ಶರ್ಮಾ ವೆಂಟಿಲೇಟರ್ನಲ್ಲಿದ್ದರು ಎಂದು ಹೇಳಲಾಗುತ್ತಿದೆ. ವೇಗದ ಬೌಲರ್ ಸಿದ್ಧಾರ್ಥ್ ಸಾವಿನ ಬಗ್ಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಕಚೇರಿಯೂ ಮಾಹಿತಿ ನೀಡಿದೆ. ಸಿದ್ಧಾರ್ಥ್ ಶರ್ಮಾ ತಮ್ಮ ಕೊನೆಯ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳನ್ನು ಕಬಳಿಸಿದ್ದರು. ಅವರ ಸ್ಥಿತಿ ಸರಿಯಿಲ್ಲದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
हिमाचल की विजय हजारे ट्रॉफी विजेता क्रिकेट टीम के सदस्य रहे और प्रदेश के स्टार तेज गेंदबाज सिद्धार्थ शर्मा के निधन की अति दुःखद खबर है।
मैं भगवान से प्रार्थना करता हूं कि वह दिवंगत आत्मा को शांति प्रदान करें व
प्रियजनों को इस दारुण दुख सहने की शक्ति प्रदान करें । pic.twitter.com/31rwMswXQX
— Sukhvinder Singh Sukhu (@SukhuSukhvinder) January 13, 2023
ಇದನ್ನೂ ಓದಿ: Team India Squad: ನ್ಯೂಜಿಲ್ಯಾಂಡ್ ವಿರುದ್ಧದ ಟಿ20-ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ, ತಂಡದಲ್ಲಿ ಮಹತ್ವದ ಬದಲಾವಣೆ
ಯಾರು ಈ ಸಿದ್ಧಾರ್ಥ ಶರ್ಮಾ?:
ಉನಾದಲ್ಲಿ ಜನಿಸಿದ ಸಿದ್ಧಾರ್ಥ್ ದೇಶೀಯ ಕ್ರಿಕೆಟ್ನಲ್ಲಿ ಕೇವಲ ಐದು ವರ್ಷಗಳಿಂದ ಸಕ್ರಿಯರಾಗಿದ್ದರು. ಅವರು ಒಂದು ಟಿ20 ಪಂದ್ಯ ಸೇರಿದಂತೆ 6 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 6 ಲಿಸ್ಟ್ ಎ ಪಂದ್ಯಗಳಲ್ಲಿ ಹಿಮಾಚಲ ತಂಡವನ್ನು ಪ್ರತಿನಿಧಿಸಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಅವರು ತಮ್ಮ ಕೊನೆಯ ಪಂದ್ಯವನ್ನು ಬಂಗಾಳದ ವಿರುದ್ಧ ಆಡಿದ್ದರು. ಇನ್ನು, ವಿಜಯ್ ಹಜಾರೆ ಟ್ರೋಫಿಯಲ್ಲಿನ ಅವರ ಅದ್ಭುತ ಪ್ರದರ್ಶನವು ಅವರನ್ನು ಮನೆಮಾತಾಗಿಸಿತ್ತು.
ಅವರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬಸ್ದೇರಾ ಪ್ರದೇಶದ ನಿವಾಸಿಯಾಗಿದ್ದರು. ಅವರ ನಿಧನದ ನಂತರ, ಅವರ ಮೃತ ದೇಹವನ್ನು ವಡೋದರಾದಿಂದ ಉನಾದಲ್ಲಿರುವ ಅವರ ಗ್ರಾಮಕ್ಕೆ ತರಲಾಗಿದ್ದು, ಇಂದು ಸಂಜೆಯ ವೇಳೆಗೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ. ಕ್ರಿಕೆಟಿಗನ ನಿಧನಕ್ಕೆ ಕ್ರಿಕೆಟ್ ಸಂಸ್ಥೆಯ ಆಡಳಿತಗಾರರು ಹಾಗೂ ಕ್ರಿಕೆಟ್ ಸಮುದಾಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ