• Home
  • »
  • News
  • »
  • sports
  • »
  • Ranji Trophy 2023: ಆರ್​​​ಸಿಬಿ ಬೌಲರ್​ ಅಬ್ಬರ, ಒಂದೇ ಪಂದ್ಯದಲ್ಲಿ 10 ವಿಕೆಟ್​ ಕಬಳಿಸಿದ ಸ್ಟಾರ್​ ಆಟಗಾರ!

Ranji Trophy 2023: ಆರ್​​​ಸಿಬಿ ಬೌಲರ್​ ಅಬ್ಬರ, ಒಂದೇ ಪಂದ್ಯದಲ್ಲಿ 10 ವಿಕೆಟ್​ ಕಬಳಿಸಿದ ಸ್ಟಾರ್​ ಆಟಗಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ranji Trophy 2023: ರಣಜಿ ಟ್ರೋಫಿ ಪಂದ್ಯದಲ್ಲಿ ಹರಿಯಾಣ ತಂಡ ಬಂಗಾಳದ ವಿರುದ್ಧ ಹೀನಾಯ ಸೋಲು ಎದುರಿಸಿದೆ. ಆಕಾಶ್ ದೀಪ್ ಈ ವೇಳೆ ಅದ್ಭುತ ಬೌಲಿಂಗ್​​ ಮಾಡಿದರು.

  • Share this:

ಇತ್ತೀಚಿನ ದಿನಗಳಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸುತ್ತಿರುವುದು ಉತ್ತಮ ಬೆಳವಣಿಗೆ ಆಗಿದೆ. ವಿದೇಶಿ ತಂಡವಾಗಲಿ ಅಥವಾ ದೇಶಿ ಟೂರ್ನಿಯಾಗಲಿ ಎಲ್ಲೆಡೆ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸುತ್ತಿದ್ದಾರೆ. ಅದೇ ರೀತಿ ರಣಜಿ ಟ್ರೋಫಿ 2023ರ (Ranji Trophy 2023) ಪಂದ್ಯದಲ್ಲಿ ಹರಿಯಾಣ (Haryana) ತಂಡ ಬಂಗಾಳದ (West Bengal) ವಿರುದ್ಧ ಹೀನಾಯ ಸೋಲು ಎದುರಿಸಿದೆ. ಆಕಾಶ್ ದೀಪ್ (Akash Deep) ಒಟ್ಟು 10 ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡ ಇನಿಂಗ್ಸ್ ಹಾಗೂ 50 ರನ್ ಗಳಿಂದ ಹೀನಾಯ ಸೋಲು ಕಾಣಲು ಕಾರಣರಾದರು.


ಆರ್​ಸಿಬಿ ಆಟಗಾರನ ಅದ್ಭುತ ಬೌಲಿಂಗ್:


ರಣಜಿ ಟ್ರೋಫಿಯ ಎಲೈಟ್ ಗುಂಪಿನಲ್ಲಿ ಬೆಂಗಾಲ್ ಮತ್ತು ಹರಿಯಾಣ ನಡುವೆ ನಡೆದ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಆಕಾಶ್ ದೀಪ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಹರಿಯಾಣ ಬ್ಯಾಟ್ಸ್‌ಮನ್‌ಗಳ ವಿಕೆಟ್​ ತೆಗೆಯುವಲ್ಲಿ ಯಶಸ್ವಿಯಾದರು. ಮೊದಲು ಬ್ಯಾಟ್ ಮಾಡಿದ ಬಂಗಾಳ ತಂಡ ಅನುಸ್ತುಪ್ ಮಜುಂದಾರ್ ಅವರ 145, ಅಭಿಮನ್ಯು ಈಶ್ವರನ್ ಅವರ 57 ಮತ್ತು ಅಭಿಷೇಕ್ ಅವರ 49 ರನ್ ಗಳ ನೆರವಿನಿಂದ 419 ರನ್ ಗಳಿಸಿತು. ಬಂಗಾಳದ ಬೌಲರ್‌ಗಳು ಹರಿಯಾಣ ತಂಡದ ಮೇಲೆ ಎಂತಹ ವಿನಾಶವನ್ನು ಉಂಟುಮಾಡಿದರು ಎಂದರೆ ಎರಡೂ ಇನ್ನಿಂಗ್ಸ್‌ಗಳ ಒಟ್ಟು ಸ್ಕೋರ್ ಮೂಲಕ 419 ರನ್​ ತಲುಪಲು ಸಾಧ್ಯವಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 163 ರನ್ ಗಳಿಸಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ ತಂಡ 206 ರನ್ ಗಳಿಸಲಷ್ಟೇ ಶಕ್ತವಾಯಿತು.


ಆಕಾಶ್ ದೀಪ್ 10 ವಿಕೆಟ್:


ಈ ಪಂದ್ಯದ ಹೀರೋ ಆಗಿದ್ದ ಆಕಾಶ್ ದೀಪ್ ಒಟ್ಟು 10 ವಿಕೆಟ್ ಪಡೆದು ಹರಿಯಾಣ ತಂಡದ ಗೆಲುವಿನಲ್ಲಿ ಪ್ರಮುಖರಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 13 ಓವರ್‌ಗಳಲ್ಲಿ 61 ರನ್‌ಗಳಿಗೆ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಎದುರಾಳಿ ತಂಡವು ಕೇವಲ 163 ರನ್‌ಗಳಿಗೆ ಆಲೌಟ್ ಆದ ನಂತರ ಫಾಲೋ-ಆನ್ ಆಡಬೇಕಾಯಿತು. ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲೂ ಆಕಾಶ್ ಕೇವಲ 21 ಓವರ್‌ ಬೌಲಿಂಗ್‌ನಲ್ಲಿ 51 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು.


ಇದನ್ನೂ ಓದಿ: Kaviya Maran: ಐಪಿಎಲ್‌ ಸುಂದರಿಗೆ ಮೈದಾನದಲ್ಲಿಯೇ ಮದುವೆ ಪ್ರಪೋಸಲ್! ಓಕೆ ಅಂತಾರಾ ಕೋಟಿ ಸಂಪತ್ತಿನ ಒಡತಿ?


ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಈ ಆಟಗಾರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ಐಪಿಎಲ್ ಸೀಸನ್ ನಲ್ಲಿ 5 ಪಂದ್ಯಗಳಲ್ಲಿ ಒಟ್ಟು 5 ವಿಕೆಟ್ ಪಡೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಆಕಾಶ್ 20 ಪಂದ್ಯಗಳಲ್ಲಿ ಒಟ್ಟು 73 ವಿಕೆಟ್‌ಗಳನ್ನು ಹೊಂದಿದ್ದು, ಅವರು 53 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ 339 ರನ್‌ಗಳನ್ನು ಗಳಿಸಿದ್ದಾರೆ.


ಆರ್​ಸಿಬಿ ಟ್ವಿಟರ್ ಖಾತೆ ಹ್ಯಾಕ್:


ಇನ್ನು, ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಟ್ವಿಟರ್ ಖಾತೆಯನ್ನು ಶನಿವಾರ (ಜನವರಿ 21) ಹ್ಯಾಕ್ ಮಾಡಲಾಗಿದೆ. ಈ ಸಮಯದಲ್ಲಿ, ಹ್ಯಾಕರ್‌ಗಳು ಆರ್‌ಸಿಬಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನ ಹೆಸರನ್ನು ಬದಲಾಯಿಸಿದ್ದಾರೆ.
2023ಕ್ಕೆ RCB ಸಂಪೂರ್ಣ ತಂಡ:


ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ , ವಿಲ್ ಜಾಕ್ಸ್ , ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್.

Published by:shrikrishna bhat
First published: