ಕುತೂಹಲದತ್ತ ರಣಜಿ ಫೈನಲ್: ಸೌರಾಷ್ಟ್ರ 4ನೇ ದಿನದಾಟದಂತ್ಯಕ್ಕೆ 58/5, ಗೆಲುವಿಗೆ ಬೇಕು 148 ರನ್​​​

ಇಂದು ಡಿ. ಜಡೇಜಾ ಬೌಲಿಂಗ್ ದಾಳಿಗೆ ತತ್ತರಿಸಿ ವಿದರ್ಭ 200 ರನ್​ಗೆ ಆಲೌಟ್ ಆಯಿತು. ತಂಡದ ಪರ ಆದಿತ್ಯ ಸರ್ವತ್ 49 ರನ್ ಗಳಿಸಿದ್ದು ಬಿಟ್ಟರೆ, ಮೋಹಿತ್ ಕೇಲ್ 38 ಹಾಗೂ ಗಣೇಶ್ ಸತೀಶ್ 35 ರನ್ ಬಾರಿಸಿದ್ದೆ ಹೆಚ್ಚು.

Vinay Bhat | news18
Updated:February 6, 2019, 7:12 PM IST
ಕುತೂಹಲದತ್ತ ರಣಜಿ ಫೈನಲ್: ಸೌರಾಷ್ಟ್ರ 4ನೇ ದಿನದಾಟದಂತ್ಯಕ್ಕೆ 58/5, ಗೆಲುವಿಗೆ ಬೇಕು 148 ರನ್​​​
ಚೇತೇಶ್ವರ್​ ಪೂಜಾರ
Vinay Bhat | news18
Updated: February 6, 2019, 7:12 PM IST
ನಾಗ್ಪುರ (ಫೆ. 06): ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಸಾಗುತ್ತಿರುವ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಫೈನಲ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ತಲುಪಿದ್ದು, ಅಂತಿಮ ದಿನ ಫಲಿತಾಂಶ ಹೊರಬೀಳಲಿದೆ.

206 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ಸೌರಾಷ್ಟ್ರ ತಂಡ 4ನೇ ದಿನದಾಟಕ್ಕೆ 5 ವಿಕೆಟ್ ಕಳೆದುಕೊಂಡು 58 ರನ್ ಕಲೆಹಾಕಿದೆ. ಇನ್ನು ಒಂದು ದಿನದ ಆಟ ಬಾಕಿ ಉಳಿದಿದ್ದು ಸೌರಾಷ್ಟ್ರ ಗೆಲುವಿಗೆ 148 ರನ್​​ಗಳ ಅವಶ್ಯಕತೆಯಿದೆ. ಅಂತೆಯೆ ವಿದರ್ಭ ಗೆಲುವಿಗೆ ಸೌರಾಷ್ಟ್ರದ 5 ವಿಕೆಟ್​​ಗಳನ್ನು ಕೀಳಬೇಕಿದೆ. ಹೀಗಾಗಿ ಅಂತಿಮ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ.

ಮೊದಲ ಇನ್ನಿಂಗ್ಸ್​​ನಲ್ಲಿ 312 ರನ್​​ಗೆ ಆಲೌಟ್ ಆಗಿ, ಸೌರಾಷ್ಟ್ರವನ್ನು 307 ರನ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ವಿದರ್ಭ 5 ರನ್​ಗಳ ಮುನ್ನಡೆ ಸಾಧಿಸಿತ್ತು. ಬಳಿಕ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ವಿದರ್ಭ ನಿನ್ನೆ 3ನೇ ದಿನದಾಟಕ್ಕೆ ದಿನದಾಟಕ್ಕೆ 55 ರನ್​ಗೆ 2 ವಿಕೆಟ್ ಕಳೆದುಕೊಂಡಿತ್ತು.

ಇದನ್ನೂ ಓದಿ: 8 ಬ್ಯಾಟ್ಸ್​ಮನ್​​ಗಳಿದ್ದರು ಭಾರತದ ಮೊತ್ತ 150ರ ಗಡಿ ದಾಟಲಿಲ್ಲ: ಇಲ್ಲಿದೆ ಪಂದ್ಯದ ಹೈಲೈಟ್ಸ್​

ಆದರೆ, ಇಂದು ಡಿ. ಜಡೇಜಾ ಬೌಲಿಂಗ್ ದಾಳಿಗೆ ತತ್ತರಿಸಿ ವಿದರ್ಭ 200 ರನ್​ಗೆ ಆಲೌಟ್ ಆಯಿತು. ತಂಡದ ಪರ ಆದಿತ್ಯ ಸರ್ವತ್ 49 ರನ್ ಗಳಿಸಿದ್ದು ಬಿಟ್ಟರೆ, ಮೋಹಿತ್ ಕೇಲ್ 38 ಹಾಗೂ ಗಣೇಶ್ ಸತೀಶ್ 35 ರನ್ ಬಾರಿಸಿದ್ದೆ ಹೆಚ್ಚು. ಪರಿಣಾಮ 5 ರನ್​ಗಳ ಮುನ್ನಡೆಯೊಂದಿಗೆ ಸೌರಾಷ್ಟ್ರ ತಂಡಕ್ಕೆ ಗೆಲ್ಲಲು ವಿದರ್ಭ 206 ರನ್​ಗಳ ಟಾರ್ಗೆಟ್ ನೀಡಿತು.

ಈ ಗುರಿ ಬೆನ್ನಟ್ಟಿದ ಸೌರಾಷ್ಟ್ರ ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಓಪನರ್​​​ ಹರ್ವಿಕ್ ದೇಸಾಯ್ 8 ಹಾಗೂ ಸ್ನೆಲ್ ಪಟೇಲ್ 12 ರನ್​ ನಿರ್ಗಮಿಸಿದರೆ, ಚೇತೇಶ್ವರ್ ಪೂಜಾರ ಸೊನ್ನೆ ಸುತ್ತಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ಅಂತೆಯೆ ಬಂದ ಬೆನ್ನಲ್ಲೆ ಅರ್ಪಿತ್ 5 ಹಾಗೂ ಶೆಲ್ಡನ್ ಜಾಕ್ಸನ್ 7 ರನ್​ಗೆ ಬ್ಯಾಟ್ ಕೆಳಗಿಟ್ಟರು. ಪರಿಣಮ 4ನೇ ದಿನದಾಟಕ್ಕೆ 5 ವಿಕೆಟ್ ಕಳೆದುಕೊಂಡು ಸೌರಾಷ್ಟ್ರ 58 ರನ್ ಗಳಿಸಿದೆ. ವಿಶ್ವರಾಜ್ ಜಡೇಜಾ 23 ಹಾಗೂ ಕಮಲೇಶ್ ಮಕ್ವಾನ 2 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: (VIDEO): ಬೌಂಡರಿ ಲೈನ್​​​ ಬಳಿ ದಿನೇಶ್ ಕಾರ್ತಿಕ್​​​ರಿಂದ ಸೂಪರ್ ಕ್ಯಾಚ್
Loading...

ಆದಿತ್ಯ ಸರ್ವರ್ 3 ವಿಕೆಟ್ ಕಿತ್ತರೆ, ಉಮೇಶ್ ಯಾದವ್ ಹಾಗೂ ಅಕ್ಷಯ್ ತಲಾ 1 ವಿಕೆಟ್ ಪಡೆದರು. ಇನ್ನು ಕೇವಲ ಒಂದು ದಿನದ ಆಟ ಬಾಕಿ ಉಳಿದಿದ್ದು, ಸೌರಾಷ್ಟ್ರದ ಗೆಲುವಿಗೆ 148 ರನ್​​ಗಳ ಅವಶ್ಯಕತೆಯಿದೆ.

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...