ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಶುಭ ಶುಕ್ರವಾರ; ದಿನದ ಆರಂಭದಲ್ಲೇ 2 ಚಿನ್ನ; ಕಬಡ್ಡಿಯಲ್ಲಿ ಬೆಳ್ಳಿ

news18
Updated:August 24, 2018, 3:02 PM IST
ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಶುಭ ಶುಕ್ರವಾರ; ದಿನದ ಆರಂಭದಲ್ಲೇ 2 ಚಿನ್ನ; ಕಬಡ್ಡಿಯಲ್ಲಿ ಬೆಳ್ಳಿ
news18
Updated: August 24, 2018, 3:02 PM IST
ನ್ಯೂಸ್ 18 ಕನ್ನಡ

ಏಷ್ಯನ್ ಗೇಮ್ಸ್​​ನಲ್ಲಿ ಭಾರತ ದಿನದ ಆರಂಭದಲ್ಲೇ ಮತ್ತೆರಡು ಸ್ವರ್ಣಪದಕ ತನ್ನದಾಗಿಸಿದೆ. ಪುರುಷರ ರೋಯಿಂಗ್ ತಂಡ ಇಂದು ಬೆಳಗ್ಗೆಯೇ ಮೂರು ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಹೊಸ ದಾಖಲೆ ಬರೆದಿದೆ. ಜೊತೆಗೆ ಪುರುಷರ ಟೆನಿಸ್​​​ನ ಡಬಲ್ಸ್​​​ ಫೈನಲ್ ಪಂದ್ಯದಲ್ಲಿ ಕರ್ನಾಟಕದ ರೋಹನ್ ಬೋಪಣ್ಣ ಜೋಡಿ ಜಯ ಸಾಧಿಸಿದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಭಾರತದ ಮಹಿಳಾ ಕಬಡ್ಡಿ ತಂಡ ಇರಾನ್ ವಿರುದ್ಧ ಸೋತಿದ್ದು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.

ಇರಾನ್ ವಿರುದ್ಧ ನಡೆದ ಕಬಡ್ಡಿ ಪಂದ್ಯದಲ್ಲಿ ಭಾರತದ ವನಿತೆಯರು 24-27 ಅಂತರದಿಂದ ಸೋತಿದ್ದು ಬೆಳ್ಳಿ ಪದಕ ಗೆದ್ದರೆ, ಇರಾನ್ ಚಿನ್ನದ ಪದಕ ತನ್ನದಾಗಿಸಿದೆ. ಇನ್ನು ಲೈಟ್​​​ವೇಟ್​​​​​​ ಡಬಲ್ ಸ್ಕಲ್ಸ್​​ನಲ್ಲಿ ರೋಹಿತ್ ಕುಮಾರ್, ಭಗವಾನ್ ಅವರು ಕಂಚಿನ ಪದಕಕ್ಕೆ ಮುತ್ತಿಕ್ಕಿದರೆ, ರೋಯಿಂಗ್ ತಂಡ 6:17:13 ನಿಮಿಷದಲ್ಲಿ ಸವರ್ಣ್ ಸಿಂಗ್, ಭೋಕ್ನಲ್, ಓಂ ಪ್ರಕಾಶ್, ಹಾಗೂ ಸುಖ್​​ಮಿತ್ ಜೋಡಿ ಗುರಿ ತಲುಪಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದ್ದಾರೆ.

ಇನ್ನು ಭಾರತದ ಬೋಪಣ್ಣ-ಶರಣ್ ಜೋಡಿ ಖಜಕಿಸ್ತಾನದ ಬುಬಿಕ್-ಯನೆಸೆವ ಅವರ ವಿರುದ್ಧ 6-3, 6-4 ಸೆಟ್​ಗಳಿಂದ ಗೆದ್ದು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಜೊತೆಗೆ ಪುರುಷರ ಹ್ಯಾಂಡ್​​​ಬಾಲ್​​ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದೆ. ರೋಚಕ ಪಂದ್ಯದಲ್ಲಿ ಭಾರತ 28-27 ಅಂಕಗಳಿಂದ ಪಾಕ್ ಅನ್ನು ಮಣಿಸಿ ಜಯ ಸಾಧಿಸಿದೆ.

ಭಾರತ ಅರ್ಚರಿ ತಂಡ ಮಿಶ್ರ ತಂಡ ವಿಭಾಗದಲ್ಲಿ ಜಯ ಸಾಧಿಸಿದ್ದು, ಅರ್ಹತಾ ಸುತ್ತಿನ ಪಂದ್ಯದಲ್ಲಿ 155-147ರಿಂದ ಇರಾಕ್ ವಿರುದ್ಧ ಜಯ ಕಂಡಿದೆ.

ಮಹಿಳೆಯರ ಶೂಟಿಂಗ್​​ನ 10 ಮೀ. ರೈಫಲ್ ವಿಭಾಗದಲ್ಲೂ ಭಾರತದ ಮನು ಭಾಕರ್ ಮತ್ತು ಹೀನಾ ಸಿಧು ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ.

ಇದೀಗ ಭಾರತ 6 ಚಿನ್ನ, 5 ಬೆಳ್ಳಿ ಹಾಗೂ 13 ಕಂಚಿನೊಂದಿಗೆ ಒಟ್ಟು 24 ಪದಕಗಳೊಂದಿಗೆ 7ನೇ ಸ್ಥಾನದಲ್ಲಿದೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ