ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಹಂಗಾಮಿ ಕೋಚ್ ಆಗಿ 'ರಮೇಶ್ ಪವಾರ್' ಆಯ್ಕೆ

news18
Updated:July 16, 2018, 4:27 PM IST
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಹಂಗಾಮಿ ಕೋಚ್ ಆಗಿ 'ರಮೇಶ್ ಪವಾರ್' ಆಯ್ಕೆ
news18
Updated: July 16, 2018, 4:27 PM IST
ನ್ಯೂಸ್ 18 ಕನ್ನಡ

ಮುಂಬೈ (ಜುಲೈ. 16): ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ರಮೇಶ್ ಪವಾರ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹಂಗಾಮಿ ಕೋಚ್ ಆಗಿ ಬಿಸಿಸಿಐ ಆಯ್ಕೆ ಮಾಡಿದೆ. ರಮೇಶ್ ಪವಾರ್ ಅವರು ಜುಲೈ 25ರಿಂದ ಬೆಂಗಳೂರಿನಲ್ಲಿ ನಡೆಯುವ ಕ್ಯಾಂಪ್ ವೇಳೆ ತಂಡದ ಕೋಚ್ ಆಗಿ ತಮ್ಮ ಕಾರ್ಯಾರಂಭ ಮಾಡಲಿದ್ದಾರೆ.

ಈ ಹಿಂದೆ ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿದ್ದ ತುಷಾರ್ ಆರೋತೆ ಅವರು ಇತ್ತೀಚೆಗಷ್ಟೆ ತಮ್ಮ ಜವಾಬ್ದಾರಿಯಿಂದ ಕೇಳಗಿಳಿದಿದ್ದರು. ರಾಜಿನಾಮೆ ಪತ್ರದಲ್ಲಿ ವೈಯಕ್ತಿಕ ಕಾರಣಗಳಿಂದ ಈ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಇದರ ಬೆನ್ನಲ್ಲೆ ಬಿಸಿಸಿಐ ಸದ್ಯ ರಮೇಶ್ ಪವಾರ್ ಅವರನ್ನು ಹಂಗಾಮಿ ಕೋಚ್ ಆಗಿ ಆಯ್ಕೆ ಮಾಡಿದೆ. 40 ವರ್ಷ ಪ್ರಾಯದ ಪವಾರ್ ಬಾರತ ಪರ 2 ಟೆಸ್ಟ್ ಪಂದ್ಯವನ್ನಾಡಿದ್ದು, 6 ವಿಕೆಟ್ ಪಡೆದಿದ್ದರು. ಮೊದಲ ದರ್ಜೆಯ ಕ್ರಿಕೆಟ್​ನಲ್ಲಿ ಪವಾರ್ ಅವರು 470 ವಿಕೆಟ್ ಕಿತ್ತಿದ್ದಾರೆ.

ಈಗಾಗಲೇ ಬಿಸಿಸಿಐ ಫುಲ್ ಟೈಮ್ ಕೋಚ್ ಸ್ಥಾನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದ್ದು, ಜುಲೈ 20ರ ಒಳಗೆ ಅರ್ಜೆ ಸಲ್ಲಿಸುವಂತೆ ಹೇಳಿದೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ