ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಗಿ ರಮೇಶ್ ಪವಾರ್ ಆಯ್ಕೆ

news18
Updated:August 14, 2018, 4:49 PM IST
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಗಿ ರಮೇಶ್ ಪವಾರ್ ಆಯ್ಕೆ
news18
Updated: August 14, 2018, 4:49 PM IST
ನ್ಯೂಸ್ 18 ಕನ್ನಡ

ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ರಮೇಶ್ ಪವಾರ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪೂರ್ಣವಧಿಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ತುಷಾರ್ ಆರೋತೆ ಅವರು ಟೀಂ ಇಂಡಿಯಾ ಮಹಿಳಾ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದರ ಬೆನ್ನಲ್ಲೆ ಬಿಸಿಸಿಐ ರಮೇಶ್ ಪವಾರ್ ಅವರನ್ನು ಹಂಗಾಮಿ ಕೋಚ್ ಆಗಿ ಆಯ್ಕೆ ಮಾಡಿತ್ತು. ಬಳಿಕ ಬಿಸಿಸಿಐ ಫುಲ್ ಟೈಮ್ ಕೋಚ್ ಸ್ಥಾನಕ್ಕಾಗಿ ಅರ್ಜಿಯನ್ನು ಆಹ್ವಾನಿಸಿತ್ತು. ಕೋಚ್ ರೇಸ್​ನಲ್ಲಿ ಸುಮಾರು 6 ಸದಸ್ಯರ ಹೆಸರು ಕೇಳಿಬಂದಿದ್ದವು. ಸುನಿಲ್ ಜೋಶಿ, ಭಾರತ ತಂಡದ ಮಾಜಿ ನಾಯಕಿ ಮಮತಾ ಮಾಬೆನ್, ಸನತ್ ಕುಮಾರ್ ಹೆಸರು ಕೇಳಿಬಂದಿತ್ತು. ಆದರೆ ಸದ್ಯ ಬಿಸಿಸಿಐ ಅಂತಿಮವಾಗಿ ರಮೇಶ್ ಪವಾರ್ ಅವರನ್ನೇ ಕೋಚ್ ಆಗಿ ಅಂತಿಮಗೊಳಿಸಿದೆ. ಮುಂಬರುವ ಶ್ರೀಲಂಕಾ ಹಾಗೂ ವೆಸ್ಟ್​ ಇಂಡೀಸ್ ಪ್ರವಾಸ ಮತ್ತು ನವೆಂಬರ್​​ನಲ್ಲಿ ನಡೆಯಲಿರುವ ಟಿ-20 ಮಹಿಳಾ ವಿಶ್ವಕಪ್ ವರೆಗೆ ಪವಾರ್ ಅವರೇ ಟೀಂ ಇಂಡಿಯಾ ಮಹಿಳಾ ತಂಡದ ಕೋಚ್ ಆಗಿ ಕಾರ್ಯನಿವರ್ಹಿಸಲಿದ್ದಾರೆ.

40 ವರ್ಷ ಪ್ರಾಯದ ರಮೇಶ್ ಪವಾರ್ ಅವರು ಭಾರತ ಪರ 2 ಟೆಸ್ಟ್ ಪಂದ್ಯವನ್ನಾಡಿದ್ದು, 6 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆಯ ಕ್ರಿಕೆಟ್​​ನಲ್ಲಿ 470 ವಿಕೆಟ್ ಕಿತ್ತಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...