IPL​ 2019: ಐಪಿಎಲ್​ ಆರಂಭಕ್ಕೂ ಮುನ್ನವೇ ಬಣ್ಣ ಬದಲಿಸಿದ ರಾಜಸ್ಥಾನ್ ರಾಯಲ್ಸ್

ಸಮವಸ್ತ್ರದೊಂದಿಗೆ ರಾಜಸ್ಥಾನ ರಾಯಲ್ಸ್​ ತಂಡದ ರಾಯಭಾರಿ ಕೂಡ ಬದಲಾಗಿದ್ದು, ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್​​ ವಾರ್ನ್​ರನ್ನು ನೂತನ ರಾಯಭಾರಿಯಾಗಿ ನೇಮಿಸಲಾಗಿದೆ.

zahir | news18
Updated:February 11, 2019, 10:52 PM IST
IPL​ 2019: ಐಪಿಎಲ್​ ಆರಂಭಕ್ಕೂ ಮುನ್ನವೇ ಬಣ್ಣ ಬದಲಿಸಿದ ರಾಜಸ್ಥಾನ್ ರಾಯಲ್ಸ್
ಸಾಂದರ್ಭಿಕ ಚಿತ್ರ
zahir | news18
Updated: February 11, 2019, 10:52 PM IST
ವರ್ಣರಂಜಿತ ಕ್ರಿಕೆಟ್​ ಲೀಗ್ ಐಪಿಎಲ್​ಗೆ ದಿನಗಣನೆ ಆರಂಭವಾಗಿದೆ. 12ನೇ ಆವೃತ್ತಿಯ ಚುಟುಕು ಕದನಕ್ಕಾಗಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸೇರಿದಂತೆ ಹಲವು ತಂಡಗಳು ತಾಲೀಮು ಆರಂಭಿಸಿದೆ. ಇನ್ನೊಂದೆಡೆ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಲು ಅತ್ತ ರಾಜಸ್ಥಾನ್ ರಾಯಲ್ಸ್​ ಹೊಸ ಲುಕ್​ನಲ್ಲಿ ಮೈದಾನಕ್ಕಿಳಿಯುವುದಾಗಿ ತಿಳಿಸಿದೆ. ಈ ಹಿಂದಿನ ನೀಲಿ ಬಣ್ಣದ ಸಮವಸ್ತ್ರದ ಬದಲಾಗಿ ಪಿಂಕ್​ ಬಣ್ಣದ ಜೆರ್ಸಿಯೊಂದಿಗೆ  ಕಣಕ್ಕಿಳಿಯಲಿದೆ.

ಇಂಡಿಯನ್ ಪ್ರೀಮಿಯರ್​ ಲೀಗ್​ನ 11ನೇ ಆವೃತ್ತಿಯಲ್ಲಿ ರಾಜಸ್ಥಾನ್ ತಂಡ ಪಿಂಕ್​ ಧಿರಿಸಿನಲ್ಲಿ ಕಾಣಿಸಿಕೊಂಡಿತ್ತು. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಯಲ್ಸ್​ ಆಟಗಾರರು ಗುಲಾಬಿ ಜೆರ್ಸಿ ಧರಿಸಿದ್ದರು. ಈ ಸಮವಸ್ತ್ರಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಂಡದ ಸಮವಸ್ತ್ರವನ್ನು ಅದೇ ಬಣ್ಣಕ್ಕೆ ಬದಲಿಸುವ ನಿರ್ಧಾರವನ್ನು ರಾಜಸ್ಥಾನ್ ರಾಯಲ್ಸ್​ ಆಡಳಿತ ಮಂಡಳಿ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ ರಾಜಸ್ಥಾನ್ ರಾಯಲ್ಸ್​ ತಂಡದ ಹೋಮ್​ಗ್ರೌಂಡ್ ಜೈಪುರವಾಗಿದ್ದು, ಈ ನಗರ ಪಿಂಕ್​ ಸಿಟಿ ಎಂದೇ ಫೇಮಸ್ಸು. ಹೀಗಾಗಿ ತಂಡಕ್ಕೆ ಇದೇ ಬಣ್ಣ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.


Loading...

ಸಮವಸ್ತ್ರದೊಂದಿಗೆ ರಾಜಸ್ಥಾನ ರಾಯಲ್ಸ್​ ತಂಡದ ರಾಯಭಾರಿ ಕೂಡ ಬದಲಾಗಿದ್ದು, ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್​​ ವಾರ್ನ್​ರನ್ನು ನೂತನ ರಾಯಭಾರಿಯಾಗಿ ನೇಮಿಸಲಾಗಿದೆ. ಐಪಿಎಲ್​ ಮೊದಲ ಆವೃತ್ತಿಯಲ್ಲಿ ಶೇನ್​ ವಾರ್ನ್​ ತಂಡವನ್ನು ಮುನ್ನೆಡೆಸಿದ್ದಲ್ಲದೆ, ಚಾಂಪಿಯನ್​ ಪಟ್ಟವನ್ನು ತಂದುಕೊಟ್ಟಿದ್ದರು.


ಈಗ ಮತ್ತೊಮ್ಮೆ ಸ್ಪಿನ್​ ಮಾಂತ್ರಿಕ ತಂಡದೊಂದಿಗೆ ಕೂಡಿಕೊಳ್ಳುವುದರಿಂದ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್​ ಮತ್ತೊಮ್ಮೆ ಟ್ರೋಫಿಯನ್ನು ಎತ್ತಿ ಹಿಡಿಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಎಚ್ಚರ: ಅತಿ ಹೆಚ್ಚು ರೇಡಿಯೇಷನ್​ ಹೊಂದಿರುವ ​ಫೋನ್ ಪಟ್ಟಿ ಬಿಡುಗಡೆ: ನಿಮ್ಮ ಮೊಬೈಲ್​ ಇದರಲ್ಲಿದೆಯೇ?

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626