Ross Taylor: ಖ್ಯಾತ ಕ್ರಿಕೆಟಿಗ ರಾಸ್​ ಟೇಲರ್​ಗೆ ಕಪಾಳಮೋಕ್ಷ, IPLನ ಕರಾಳಮುಖ ತೆರೆದಿಟ್ಟ ಕಿವೀಸ್​ ಆಟಗಾರ

ಐಪಿಎಲ್ ಪ್ರಸ್ತುತ ಶ್ರೀಮಂತ ಕ್ರಿಕೆಟ್ ಲೀಗ್​. ಈ ಟೂರ್ನಿಯಲ್ಲಿ ಆಡಲು ಎಲ್ಲಾ ಕ್ರಿಕೆಟ್​ ಆಟಗಾರರೂ ಕಾಯುತ್ತಿರುತ್ತಾರೆ. ಹಣದ ಹೊಳೆಯೇ ಇಲ್ಲಿ ಹರಿಯುತ್ತದೆ. ಆದರೆ ಇದರ ನಡುವೆ ಇರುವ ಕರಾಳಮುಖವನ್ನು ಇದೀಗ ನ್ಯೂಜಿಲ್ಯಾಂಡ್​ನ ಸ್ಟಾರ್​ ಆಟಗಾರರೊಬ್ಬರು ಬಹಿರಂಗಪಡಿಸಿದ್ದಾರೆ.

ರಾಸ್​ ಟೇಲರ್

ರಾಸ್​ ಟೇಲರ್

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿಶ್ವ ಕ್ರಿಕೆಟ್‌ನ (Cricket) ಚೊಚ್ಚಲ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್. 2008ರಲ್ಲಿ ಪ್ರಾರಂಭವಾದ ಈ ರಂಗಿನ ಟೂರ್ನಿಮೆಂಟ್​ ಈವರೆಗೂ ತನ್ನ ಖ್ಯಾತಿಯನ್ನು ಉಳಿಸಿಕೊಂಡು ಬಂದಿದೆ. ಯಾರೂ ಸಹ ಊಹಿಸಲಾಗದ ರೀತಿಯಲ್ಲಿ IPL ​ ಅನ್ನು ಪರಿಚಯಿಸಿದ ಬಿಸಿಸಿಐ (BCCI) ಇಂದು ಶ್ರೀಮಂತ ಲೀಗ್​ನ ಹುಟ್ಟಿಗೆ ಕಾರಣವಾದಂತಾಗಿದೆ. ಇದು ಎಷ್ಟರಮಟ್ಟಿಗೆ ತನ್ನ ಖ್ಯಾತಿ ಹೆಚ್ಚಿಸಿಕೊಂಡಿದೆ ಎಂದರೆ ಸ್ವತಃ ICC  ಐಪಿಎಲ್​ಗಾಗಿ ತನ್ನ ವರ್ಷದ ಕ್ಯಾಲೆಂಡರ್​ನಲ್ಲಿ ಬರೋಬ್ಬರಿ 2 ತಿಂಗಳುಗಳನ್ನು ಬಿಟ್ಟುಕೊಡುತ್ತದೆ. ಹಣದ ಹೊಳೆಯೇ ಹರಿಯುವ ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿದೇಶಿ ಆಟಗಾರರು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆಗ್ಗಾಗ್ಗೆ ಬೇಡದ ವಿಚಾರಗಳಿಗೂ ಸದ್ದು ಮಾಡುತ್ತಿರುವ IPL ಮೊದಲಿಗೆ ಲಲಿತ್ ಮೋದಿಯ ಹಗರಣದಿಂದ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಅದಾದ ಬಳಿಕ ಫಿಕ್ಸಿಂಗ್ ಎಲ್ಲರೂ ಮಾತಾಡುವಂತೆ ಮಾಡಿತ್ತು.

ಇದೀಗ ಅದೇ ರೀತಿ ಮತ್ತೊಂದು ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು, ನ್ಯೂಜಿಲ್ಯಾಂಡ್​ನ ರಾಸ್​ ಟೇಲರ್ ಐಪಿಎಲ್​ ನಲ್ಲಿ ತಮಗಾದ ಕಹಿ ಅನುಭವವನನ್ನು ಹಂಚಿಕೊಂಡಿದ್ದು, ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

RR ತಂಡದ ಮಾಲೀಕನಿಂದ ರಾಸ್​ ಟೇಲರ್​ಗೆ ಕಪಾಳಮೋಕ್ಷ:

ಹೌದು, ಇದೇನಪ್ಪಾ ಹೊಸ ವಿವಾದ ಎಂದು ಅಚ್ಚರಿಗೊಳ್ಳಬೇಡಿ. ಇದನ್ನು ಸ್ವತಃ ಕಿವೀಸ್ ಆಟಗಾರ ರಾಸ್ ಟೇಲರ್ ತಮ್ಮ ಆತ್ಮಚರಿತ್ರೆ ‘ಬ್ಲ್ಯಾಕ್ ಅಂಡ್ ವೈಟ್’ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಅಂದಿನ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರೊಬ್ಬರು ನಾನು ಶೂನ್ಯಕ್ಕೆ ಔಟಾದೇ ಎಂಬ ಕಾರಣಕ್ಕೆ ನನ್ನ ಕೆನ್ನೆಗೆ ಹೊಡೆದಿದ್ದರು. ಅದು 4 ಬಾರಿ ಕಪಾಳಮೋಕ್ಷ ಮಾಡಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs ZIM: ಮೊದಲು ಕ್ಯಾಪ್ಟನ್, ಈಗ ಕೋಚ್! ಈ ಕೊನೆಯ ಕ್ಷಣದ ಬದಲಾವಣೆಗಳು ಏಕೆ?

ಈ ಕುರಿತು ಬರೆದುಕೊಂಡಿರುವ ಟೇಲರ್​, ‘ರಾಜಸ್ಥಾನ ಮತ್ತು ಪಂಜಾಬ್ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 195 ರನ್​ ಗಳಿಸಿತ್ತು. ಇದನ್ನು ಬೆನ್ನಟ್ಟಿದ ರಾಜಸ್ತಾನ್, ತಂಡದಲ್ಲಿ ನಾನು ಓಫನರ್ ಆಗಿ ಕಣಕ್ಕಿಳಿದಿದ್ದೆ, ಆದರೆ ನಾನು ಶೂನ್ಯಕ್ಕೆ ಔಟಾದೆ. ರಾಜಸ್ಥಾನ ರಾಯಲ್ಸ್‌ ತಂಡದ ಮಾಲೀಕರಲ್ಲಿ ಒಬ್ಬರು ರಾಸ್ ನೀನು ಸೊನ್ನೆಗೆ ಔಟಾಗಲೆಂದು ನಿನಗೆ ಮಿಲಿಯನ್ ಡಾಲರ್ ಹಣ ನೀಡಿಲ್ಲ ಎಂದು ಹೇಳಿ, ಕೆನ್ನೆಗೆ ಮೂರು-ನಾಲ್ಕು ಬಾರಿ ಹೊಡೆದರು‘ ಎಂದು ಹೇಳಿದರು.

ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದೆ:

ಇನ್ನು ಮುಂದುವರೆದು ಹೇಳಿರುವ ಅವರು, ಈ ಘಟನೆಯಿಂದ ಒಂದು ಕ್ಷಣ ಆಘಾತಕ್ಕೊಳಗಾದೆ. ಆದರೆ ಅವರು ನನಗೆ ನಗುತ್ತಾ ಕಪಾಳಮೋಕ್ಷ ಮಾಡಿದ್ದರು. ಇದು ತಮಾಷೆಗೆ ಎಂದು ನನಗೆ ಇಂದಿಗೂ ಅನಿಸಿಲ್ಲ. ಅಲ್ಲದೇ ಇದು ವೃತ್ತಿಪರ ಕ್ರೀಡಾ ಪರಿಸರದಲ್ಲಿ ಇದು ಸಂಭವಿಸುವುದನ್ನು ನಾನು ಊಹಿಸಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು, ರಾಸ್ ಟೇಲರ್ 2008 ರಿಂದ 2010ರ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. 2011ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್ ತಂಡದ ಪರವೂ ಆಡಿದ್ದರು. ಇದೀಗ ಅವರು ಕ್ರಿಕೆಟ್​ ಗೆ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ: Asia Cup 2022: ಹೊಸ ಸ್ವರೂಪದಲ್ಲಿ ಏಷ್ಯಾ ಕಪ್ ಟೂರ್ನಿ, ಏನೆಲ್ಲಾ ಬದಲಾವಣೆ ಆಗಿದೆ ನೋಡಿ

ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದ ಹರ್ಭಜನ್:

ಹೌದು, ಈ ಘಟನೆಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಮೈದಾನದಲ್ಲಿಯೇ ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಶ್ರೀಶಾಂತ್​ಗೆ ಕಪಾಳಮೋಕ್ಷ ಮಾಡಿದ್ದರು ಶ್ರೀಶಾಂತ್ ಮೈದಾನದಲ್ಲಿ ಕಣ್ಮೀrಉ ಹಾಕಿದ್ದರು.
Published by:shrikrishna bhat
First published: