• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Rahul Dravid: ಟೀಂ ಇಂಡಿಯಾಗೆ ಬಿಗ್​ ಶಾಕ್, ಏಷ್ಯಾ ಕಪ್‌ಗೆ ರಾಹುಲ್ ದ್ರಾವಿಡ್ ಅನುಮಾನ?

Rahul Dravid: ಟೀಂ ಇಂಡಿಯಾಗೆ ಬಿಗ್​ ಶಾಕ್, ಏಷ್ಯಾ ಕಪ್‌ಗೆ ರಾಹುಲ್ ದ್ರಾವಿಡ್ ಅನುಮಾನ?

ರಾಹುಲ್ ಡ್ರಾವಿಡ್

ರಾಹುಲ್ ಡ್ರಾವಿಡ್

ರಾಹುಲ್ ದ್ರಾವಿಡ್​ ಅವರಿಗೆ ಕೋವಿಡ್-19 (Covid 19) ಪಾಸಿಟಿವ್ ದೃಢಪಟ್ಟಿದ್ದು, ಮುಂಬರುವ ಏಷ್ಯಾ ಕಪ್ 2022ರಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನವಾಗಿದೆ.

  • Share this:

ಏಷ್ಯಾ ಕಪ್ 2022 (Asia Cup 2022) ಟೂರ್ನಿಯನ್ನು ಈ ಬಾರಿ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಇಂದು ಟೀಂ ಇಂಡಿಯಾ ದುಬೈಗೆ ತೆರಳಿದ್ದು, ಏಷ್ಯಾ ಕಪ್​ಗಾಗಿ ಭರ್ಜರಿ ತಯರಿ ನಡೆಸಲಿದೆ. ಇನ್ನು, ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ್ದು, ರೋಹಿತ್​ ಶರ್ಮಾ (Rohit Sharma) ಅವರನ್ನು ಭಾರತ ತಂಡದ ನಾಯಕರನ್ನಾಗಿ ಮತ್ತು ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ. ಅಲ್ಲದೇ ಭಾರತ ತಂಡದ ಪ್ರಮುಖ ಕೋಚ್​ ಆಗಿ ರಾಹುಲ್ ದ್ರಾವಿಡ್​ (Rahul Dravid) ಆಯ್ಕೆ ಆಗಿದ್ದರು. ಆದರೆ ಇದೀಗ ರಾಹುಲ್ ದ್ರಾವಿಡ್​ ಅವರಿಗೆ ಕೋವಿಡ್-19 (Covid 19) ಪಾಸಿಟಿವ್ ದೃಢಪಟ್ಟಿದ್ದು, ಮುಂಬರುವ ಏಷ್ಯಾ ಕಪ್ 2022ರಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನವಾಗಿದೆ.


ರಾಹುಲ್​ ಡ್ರಾವಿಡ್​ಗೆ ಕೊರೋನಾ :


ಹೌದು, ಸದ್ಯ ಟೀಂ ಇಂಡಿಯಾ ಏಷ್ಯಾ ಕಪ್​ 2022ಗಾಗಿ ದುಬೈಗೆ ಇಂದು ತೆರಳಿದೆ. ಆದರೆ ಇದರ ನಡುವೆ ಭಾರತ ತಂಡದ ಪ್ರಮುಖ ಕೋಚ್​ ಆಗಿರುವ ರಾಹುಲ್ ದ್ರಾವಿಡ್​ ಅವರಿಗೆ ಕೊರೋನಾ ಪಾಸಿಟಿವ್​ ದೃಢಪಟ್ಟಿದೆ. ಹೀಗಾಗಿ ಅವರು ಏಷ್ಯಾ ಕಪ್​ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನವಾಗಿದೆ. ಇದರ ಜೊತೆ ರಾಹುಲ್ ದ್ರಾವಿಡ್ ಅವರಿಗೆ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು.ಹೀಗಾಗಿ ಜಿಂಬಾಬ್ವೆ ಸರಣಿಗೆ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್​ ಲಕ್ಷ್ಮಣ್ ಅವರನ್ನು ಕೋಚ್​ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಅದೇ ರೀತಿ ಏಷ್ಯಾ ಕಪ್​ಗೂ ದ್ರಾವಿಡ್​ ಬದಲಾಗಿ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಆದರೆ ಇದೀಗ ರಾಹುಲ್ ದ್ರಾವಿಡ್​ಗೆ ಕೋವಿಡ್​ 19 ಪಾಸಿಟಿವ್​ ದೃಢಪಟ್ಟಿರುವುದರಿಂದ ಏಷ್ಯಾ ಕಪ್​ 2022ರಲ್ಲಿ ಭಾರತ ತಂಡಕ್ಕೆ ದೊಡ್ಡ ಹಿನ್ನಡೆ ಆಗಿದೆ.


ಇದನ್ನೂ ಓದಿ: Asia Cup 2022: ಭಾರತ-ಪಾಕ್ ಪಂದ್ಯದ 10 ಸೆಕೆಂಡ್​ ಜಾಹೀರಾತಿಗೆ ಎಷ್ಟು ರೇಟ್​? ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!


ಏಷ್ಯಾ ಕಪ್​ಗೆ ಲಕ್ಷ್ಮಣ್​ಗೆ ಕೋಚ್​ ಸಾಧ್ಯತೆ:


ಇನ್ನು, ರಾಹುಲ್ ದ್ರಾವಿಡ್​ ಅವರಿಗೆ ಕೋವಿಡ್​ 19 ದೃಢಪಟ್ಟಿರುವ ಹಿನ್ನಲೆ, ಅವರು ಏಷ್ಯಾ ಕಪ್​ 2022ರಿಂದ ಹೊರಗುಳಿಯಲಿದ್ದಾರೆ. ಇದರಿಂದಾಗಿ ಏಷ್ಯಾ ಕಪ್​ ನಲ್ಲಿ ಟೀಂ ಇಂಡಿಯಾಗೆ ಪ್ರಮುಖ ಕೋಚ್​ ಆಗಿವಿವಿಎಸ್​ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ​ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಭಾರತ ತಂಡವು ಐರ್ಲೆಂಡ್​ ಮತ್ತು ಜಿಂಬಾಬ್ವೆ ಸರಣಿಗಳಲ್ಲಿ ಆಡಿದೆ. ಅಲ್ಲದೇ ಈ 2 ಸರಣಿಯನ್ನೂ ಭಾರತ ತಮಡ ಗೆದ್ದುಕೊಂಡಿರುವುದರಿಂದ ಲಕ್ಷ್ಮಣ್ ಅವರನ್ನು ಮುಖ್ಯ ಕೋಚ್​ ಆಗಿ ಬಿಸಿಸಿಐ ಆಯ್ಕೆ ಮಾಡುವ ಸಾಧ್ಯತೆ ಇದೆ.


ಆಗಸ್ಟ್ 28ಕ್ಕೆ ಭಾರತ-ಪಾಕ್ ಪಂದ್ಯ:


ಈಗಾಗಲೇ ಭಾರತ ತಂಡವನ್ನು ಏಷ್ಯಾ ಕಪ್​ಗಾಗಿ ಪ್ರಕಟಿಸಲಾಗಿದೆ. ಇದರ ನಡುವೆ ಇದೀಗ ಪಾಕ್ ತಂಡವನ್ನೂ ಪ್ರಕಟಿಸಲಾಗಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಣ ಬಿಗ್​ ಪೈಟ್​ ನಡೆಯಲಿದೆ. ಉಭಯ ತಂಡಗಳೆರಡೂ ಸಖತ್​ ಬಲಿಷ್ಠವಾಗಿದ್ದು, ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ಮೊದಲ ಪಂದ್ಯವು ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಎಲ್ಲಡೆ ಏಷ್ಯಾ ಕಪ್​ 2022ರ ಮೇಲೆ ನಿರೀಕ್ಷೆ ಹೆಚ್ಚಿದೆ.


ಇದನ್ನೂ ಓದಿ: India vs Pakistan: ಪಾಕ್​ ಪಂದ್ಯದ ವೇಳೆ ಖಂಡಿತ ಒತ್ತಡ ಇರುತ್ತೆ, ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಹೇಳಿದ್ದೇನು?


ಏಷ್ಯಾ ಕಪ್​ 2022 ಭಾರತ​ ತಂಡ:


 ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.

First published: