• Home
  • »
  • News
  • »
  • sports
  • »
  • Rahul Dravid: ದ್ರಾವಿಡ್​ ಮಗ ಸೇಮ್​ ಧೋನಿಯಂತೆ ಆಡ್ತಾರಂತೆ, ಡಬಲ್​ ಸೆಂಚುರಿ ಬಾರಿಸಿದ್ರು ಸಮಿತ್​-ಅನ್ವಯ್

Rahul Dravid: ದ್ರಾವಿಡ್​ ಮಗ ಸೇಮ್​ ಧೋನಿಯಂತೆ ಆಡ್ತಾರಂತೆ, ಡಬಲ್​ ಸೆಂಚುರಿ ಬಾರಿಸಿದ್ರು ಸಮಿತ್​-ಅನ್ವಯ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Rahul Dravid: ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಪ್ರಸ್ಥುತ ಭಾರತ ತಂಡದ ಹೆಡ್​ ಕೋಚ್​ ಆಗಿರುವ ರಾಹುಲ್ ದ್ರಾವಿಡ್ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅದೇ ರೀತಿ ಇದೀಗ ಅವರಿಬ್ಬರ ಮಕ್ಕಳೂ ಸಹ ಕ್ರಿಕೆಟ್​ ಲೋಕದಲ್ಲಿ ನಡೆಯುತ್ತಿದ್ದಾರೆ.

  • Share this:

ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಪ್ರಸ್ಥುತ ಭಾರತ ತಂಡದ ಹೆಡ್​ ಕೋಚ್​ ಆಗಿರುವ ರಾಹುಲ್ ದ್ರಾವಿಡ್ (Rahul Dravid) ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಟೀಂ ಇಂಡಿಯಾ ಪರ ಬ್ಯಾಟ್ಸ್‌ಮನ್ ಆಗಿ, ವಿಕೆಟ್ ಕೀಪರ್ ಆಗಿ ಮತ್ತು ನಾಯಕರಾಗಿ ಆಡಿದ್ದಾರೆ. ಪ್ರಸ್ತುತ ತಂಡದ ಕೋಚ್ ಆಗಿದ್ದಾರೆ. ಇದೀಗ ಅವರ ಇಬ್ಬರು ಪುತ್ರರು ತಂದೆಯಂತೆ ಅದ್ಭುತ ಕ್ರಿಕೆಟರ್​ಗಳಾಗುತ್ತಿದ್ದಾರೆ. ಅನ್ವಯ್ ದ್ರಾವಿಡ್ (Anvay Dravid ) ಅವರನ್ನು 14 ವರ್ಷದೊಳಗಿನವರ ಅಂತರ ವಲಯ ಟೂರ್ನಿಯ ಕರ್ನಾಟಕ ತಂಡದ (Karnataka cricket team) ನಾಯಕರನ್ನಾಗಿ ಮಾಡಲಾಗಿದೆ. ಜನವರಿ 23 ರಿಂದ ಫೆಬ್ರವರಿ 11ರ ವರೆಗೆ ಕೇರಳದಲ್ಲಿ ಪಂದ್ಯಾವಳಿ ಪಂದ್ಯಗಳು ನಡೆಯಲಿವೆ. ಟೂರ್ನಿಯಲ್ಲಿ ಎರಡು ದಿನಗಳ ಪಂದ್ಯಗಳು ನಡೆಯಲಿವೆ. ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ಕೂಡ ಕ್ರಿಕೆಟಿಗರಾಗಿದ್ದಾರೆ ಮತ್ತು 14 ವರ್ಷದೊಳಗಿನವರ ಮಟ್ಟದಲ್ಲಿ ದ್ವಿಶತಕವನ್ನೂ ಗಳಿಸಿದ್ದಾರೆ.


ದ್ರಾವಿಡ್​ ಮಗ ಈಗ ನಾಯಕ:


ಅನ್ವಯ್ ದ್ರಾವಿಡ್ ಅವರು ತಮ್ಮ ತಂದೆ ರಾಹುಲ್ ದ್ರಾವಿಡ್ ಮತ್ತು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಹಾದಿಯನ್ನು ಆರಿಸಿಕೊಂಡಿದ್ದಾರೆ. ತಂಡದ ನಾಯಕನಲ್ಲದೆ, ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ದ್ರಾವಿಡ್ ಸುದೀರ್ಘ ಕಾಲ ಭಾರತ ತಂಡದ ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಧೋನಿ ವಿಕೆಟ್ ಕೀಪರ್ ಆಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ನಾಯಕನಾಗಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ನಾಯಕನಾಗಿ ಏಕದಿನ ಹಾಗೂ ಟಿ20 ವಿಶ್ವಕಪ್‌ ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಅನ್ವಯ್ ವಿಕೆಟ್ ಕೀಪರ್ ನಾಯಕನಾಗಿ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.ಸಹೋದರರ ಅದ್ಭುತ ಇನ್ನಿಂಗ್ಸ್​:


ಇನ್ನು, ಅನ್ವಯ್ ದ್ರಾವಿಡ್​ಗೆ ಓರ್ವ ಸಹೋದರ ಸಹ ಇದ್ದಾರೆ. ಸಮಿತ್ ದ್ರಾವಿಡ್ aವರು ದ್ರಾವಿಡ್​ ಅವರ ಹಿರಿಯ ಪುತ್ರ. ಇವರೂ ಸಹ ಕ್ರಿಕೆಟ್​ ಆಡುತ್ತಾರೆ. ಒಮ್ಮೆ ಝೋನಲ್ ಪಂದ್ಯವೊಂದರಲ್ಲಿ ದ್ರಾವಿಡ್ ಸಹೋದರರಿಬ್ಬರೂ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯವು ಬಿಟಿಆರ್ ಶೀಲ್ಡ್ ಅಂಡರ್ 14 ಸ್ಕೂಲ್ ಟೂರ್ನಮೆಂಟ್‌ನ ಭಾಗವಾಗಿತ್ತು, ಇದರಲ್ಲಿ ಇಬ್ಬರೂ 200 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಅನ್ವಯ್ ದ್ರಾವಿಡ್​ ಆ ಪಂದ್ಯದಲ್ಲಿ 90 ರನ್ ಗಳಿಸಿದ್ದರು. ಇಬ್ಬರೂ ಸಹೋದರರ ಪ್ರದರ್ಶನವು ಅವರ ಶಾಲೆಯನ್ನು ಸೆಮಿಫೈನಲ್ ತಲುಪಲು ಸಹಾಯ ಮಾಡಿತ್ತು.


ಇದನ್ನೂ ಓದಿ: IND vs NZ ODI: ಭಾರತ-ನ್ಯೂಜಿಲ್ಯಾಂಡ್ ಪಂದ್ಯಕ್ಕೆ ವಿವಾದದ ಬಿಸಿ, ಲಾಸ್ಟ್‌ ಮ್ಯಾಚ್‌ಗೆ ತಡೆಯಾಜ್ಞೆ ನೀಡುತ್ತಾ ಹೈಕೋರ್ಟ್?


ಟೀಂ ಇಂಡಿಯಾಗೆ ದ್ರಾವಿಡ್​ ಕೋಚ್​:


ಅನ್ವಯ್​ ದ್ರಾವಿಡ್ ಮೈದಾನದಲ್ಲಿ ನಾಯಕನಾಗಿ ಆಡುತ್ತಿರುವಾಗ, ಅವರ ತಂದೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾಕ್ಕೆ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ತಂಡ ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ಏಕದಿನ ಸರಣಿಯನ್ನು ಆಡುತ್ತಿದೆ. ಎರಡನೇ ಪಂದ್ಯ 21 ರಂದು ನಡೆಯಲಿದ್ದು, ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಜನವರಿ 24 ರಂದು ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ಭಾರತ ತಂಡ ಟೆಸ್ಟ್ ಸರಣಿಗೆ ಕಣಕ್ಕಿಳಿಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 9 ರಂದು ಆರಂಭವಾಗಲಿದೆ.
ದ್ರಾವಿಡ್​ ಸಾಧನೆ:


ರಾಹುಲ್ ದ್ರಾವಿಡ್ ವಿಕೆಟ್ ಕೀಪರ್ ಆಗಿ ಏಕದಿನದಲ್ಲಿ 73 ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರು 44ರ ಸರಾಸರಿಯಲ್ಲಿ 2300 ರನ್ ಗಳಿಸಿದ್ದಾರೆ. 4 ಶತಕ ಮತ್ತು 14 ಅರ್ಧ ಶತಕಗಳನ್ನು ಗಳಿಸಿದ್ದಾರೆ. 145 ರನ್ ಅತ್ಯುತ್ತಮ ಸ್ಕೋರ್ ಆಗಿದೆ. ನಾಯಕತ್ವದ ಬಗ್ಗೆ ಮಾತನಾಡುತ್ತಾ, ದ್ರಾವಿಡ್ 25 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದಾರೆ. 8ರಲ್ಲಿ ಗೆದ್ದರೆ 6ರಲ್ಲಿ ಸೋತಿದ್ದಾರೆ. ಏಕದಿನ ದಾಖಲೆಯನ್ನು ನೋಡಿದರೆ ದ್ರಾವಿಡ್ 79 ಪಂದ್ಯಗಳಲ್ಲಿ ನಾಯಕರಾಗಿದ್ದರು. ಭಾರತ 42ರಲ್ಲಿ ಗೆದ್ದರೆ, 33ರಲ್ಲಿ ಸೋತಿತ್ತು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು