ಆಂಗ್ಲರ ನಾಡಲ್ಲಿ ದೂಳೆಬ್ಬಿಸುತ್ತಿರುವ ದ್ರಾವಿಡ್ ಶಿಷ್ಯಂದಿರು

news18
Updated:August 24, 2018, 5:01 PM IST
ಆಂಗ್ಲರ ನಾಡಲ್ಲಿ ದೂಳೆಬ್ಬಿಸುತ್ತಿರುವ ದ್ರಾವಿಡ್ ಶಿಷ್ಯಂದಿರು
news18
Updated: August 24, 2018, 5:01 PM IST
ನ್ಯೂಸ್ 18 ಕನ್ನಡ

ಆಂಗ್ಲರ ನಾಡಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ 2-1ರ ಹಿನ್ನಡೆಯಲ್ಲಿದೆ. ನ್ಯಾಟಿಂಗ್​ಹ್ಯಾಮ್​​ನ​ ಟ್ರೆಂಟ್ ಬ್ರಿಡ್ಜ್​​ನಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಪಡೆ 203 ರನ್​ಗಳಿಂದ ಭರ್ಜರಿ ಗೆಲುವು ಕಂಡು ಸರಣಿಯನ್ನಂತು ಜೀವಂತವಾಗಿರಿಸಿದೆ. ಉಳಿದ 2 ಪಂದ್ಯದಲ್ಲಿ ಜಯ ಸಾಧಿಸಿದರೆ ಭಾರತ ಸರಣಿ ಗೆದ್ದ ದಾಖಲೆ ಬರೆಯಲಿದೆ. ಅಂತೆಯೇ ಭಾರತ ತಂಡದಲ್ಲೀಗ ಯುವ ಆಟಗಾರರದ್ದೆ ಕಾರುಬಾರು ಎನ್ನಬಹುದು. ಅದರಲ್ಲು ರಾಹುಲ್ ದ್ರಾವಿಡ್ ಅವರ ಶಿಷ್ಯರ ಸಂಖ್ಯೆಯೇ ಟೀಂ ಇಂಡಿಯಾದಲ್ಲಿ ಅಧಿಕವಾಗಿದೆ.

ಈಗಾಗಲೇ 3ನೇ ಹಾಗೂ 4ನೇ ಟೆಸ್ಟ್​ಗೆ ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಿದೆ. ಇದರಲ್ಲಿ ಕಳಪೆ ಫಾರ್ಮ್​​​ನಲ್ಲಿರುವ ಮುರಳಿ ವಿಜಯ್ ಹಾಗೂ ಕುಲ್ದೀಪ್ ಯಾದವ್ ಅವರನ್ನು ತಂಡದಿಂದ ಕೈ ಬಿಟ್ಟು, ಯುವ ಆಟಗಾರರಾದ ಪೃಥ್ವಿ ಷಾ ಹಾಗೂ ಹನುಮಾ ವಿಹಾರಿ ಅವರನ್ನು ಆಯ್ಕೆ ಮಾಡಿದೆ. ಷಾ ಹಾಗೂ ವಿಹಾರಿ ಅವರು ರಾಹುಲ್ ದ್ರಾವಿಡ್ ಕೋಚ್ ಆಗಿರುವ ಭಾರತ ಎ ತಂಡದಿಂದ ಬಂದವರಾಗಿದ್ದಾರೆ. ಈಗಾಗಲೇ ಟಿಂ ಇಂಡಿಯಾದಲ್ಲಿರುವ ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಕೂಡ ದ್ರಾವಿಡ್ ಶಿಷ್ಯಂದಿರೇ ಆಗಿದ್ದು, ಇವರ ಜೊತೆ ಸದ್ಯ ಷಾ ಹಾಗೂ ವಿಹಾರಿ ಕೂಡ ಸೇರಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಈಗಾಗಲೇ ಭರ್ಜರಿ ಫಾರ್ಮ್​​ನಲ್ಲಿದ್ದು ಆಲ್ರೌಂಡರ್ ಪ್ರದರ್ಶನ ತೋರುತ್ತಿದ್ದಾರೆ. 3ನೇ ಟೆಸ್ಟ್​​ನ ಮೊದಲ ಇನ್ನಿಂಗ್ಸ್​​ನಲ್ಲಿ ತನ್ನ ಬೌಲಿಂಗ್ ಕಮಾಲ್ ತೋರಿಸಿ ಕೇವಲ 28 ರನ್​ಗೆ 5 ವಿಕೆಟ್ ಕಿತ್ತು ಸಾಧನೆ ಮಾಡಿದ್ದರು, 2ನೇ ಇನ್ನಿಂಗ್ಸ್​​ನಲ್ಲು ತನ್ನ ಬ್ಯಾಟಿಂಗ್ ವೈಖರಿ ತೋರಿದ್ದು 52 ರನ್​ ಚಚ್ಚಿ ತಾನೊಬ್ಬ ಉತ್ತಮ ಆಲ್ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದರು. ಇನ್ನು ರಿಷಭ್ ಪಂತ್ ಅಂತರಾಷ್ಟ್ರೀಯಾ ಟೆಸ್ಟ್​​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, ಚೊಚ್ಚಲ ಪಂದ್ಯದಲ್ಲೇ 6 ಕ್ಯಾಚ್ ತಮ್ಮ ಖಾತೆಗೆ ಸೇರಿಸಿ ಸಾಧನೆ ಮಾಡಿದ್ದಾರೆ. ಹೀಗೆ ಇವರೆಲ್ಲರು ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಕಲಿಸಿದ ವಿಧ್ಯೆಯನ್ನು ಚೆನ್ನಾಗಿಯೇ ಕಾರ್ಯರೂಪಕ್ಕೆ ತರುತ್ತಿದ್ದು, ಇದೇ ಸಾಲಿಗೆ ಸೇರುವ ಹುಮ್ಮಸ್ಸಿನಲ್ಲಿ ಪೃಥ್ವಿ ಷಾ ಹಾಗೂ ವಿಹಾರಿ ಕೂಡ ಇದ್ದಾರೆ. ಜೊತೆಗೆ ದ್ರಾವಿಡ್ ಅವರು ಕೆ. ಎಲ್ ರಾಹುಲ್​​ಗೆ ಕೂಡ ಅನೇಕ ಸಲಹೆಗಳನ್ನು ಈ ಹಿಂದೆ ನೀಡಿದ್ದರು. ಬ್ಯಾಟಿಂಗ್ ಟೆಕ್ನಿಕ್ ಕೂಡ ದ್ರಾವಿಡ್​ರಿಂದ ಕಲಿತುಕೊಂಡಿದ್ದಾರೆ. ಕೆ. ಎಲ್ ರಾಹುಲ್ ಅವರ ಯಶಸ್ಸಿನಲ್ಲಿ ದ್ರಾವಿಡ್ ಅವರ ಪಾತ್ರ ಕೂಡ ಪ್ರಮುಖವಾಗಿದೆ. ಹೀಗಾಗಿ ಸದ್ಯ ದ್ರಾವಿಡ್ ಶಿಷ್ಯಂದಿರ ದಂಡು ಟೀಂ ಇಂಡಿಯಾದಲ್ಲಿದ್ದು, ಆಂಗ್ಲರ ನಾಡಲ್ಲಿ ತಮ್ಮ ಕೌಶಲ್ಯವನ್ನು ತೋರುತ್ತಿದ್ದಾರೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...