ವಿಶ್ವದ ನಂ.1 ಆಟಗಾರನನ್ನು ಸೋಲಿಸಿ ಇಟಾಲಿಯನ್ ಒಪನ್ ಪ್ರಶಸ್ತಿ ಮುಡಿಗೇರಿಸಿದ ರಫೆಲ್ ನಡಾಲ್

ಇನ್ನು ಮಹಿಳೆಯರ ಸಿಂಗಲ್ಸ್​ನಲ್ಲಿ ಕರೊಲಿನಾ ಪ್ಲಿಸ್ಕೋವಾ 6-3, 6-4 ನೇರ ಸೆಟ್‌ಗಳಿಂದ ಗ್ರೇಟ್‌ ಬ್ರಿಟನ್‌ನ ಜೊಹಾನ್ನ ಕೊಂಟಾ ವಿರುದ್ಧ ಗೆದ್ದ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

zahir | news18
Updated:May 20, 2019, 7:01 PM IST
ವಿಶ್ವದ ನಂ.1 ಆಟಗಾರನನ್ನು ಸೋಲಿಸಿ ಇಟಾಲಿಯನ್ ಒಪನ್ ಪ್ರಶಸ್ತಿ ಮುಡಿಗೇರಿಸಿದ ರಫೆಲ್ ನಡಾಲ್
REUTERS/Matteo Ciambelli
  • News18
  • Last Updated: May 20, 2019, 7:01 PM IST
  • Share this:
2019ರ ಇಟಾಲಿಯನ್ ಒಪನ್ ಟೆನಿಸ್ ಟೂರ್ನಿಯಲ್ಲಿ  ಸ್ಪೇನ್​ನ ಶ್ರೇಷ್ಠ ಆಟಗಾರ ರಫೆಲ್ ನಡಾಲ್ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ವಿಶ್ವದ ಅಗ್ರ ಶೇಯಾಂಕದ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್​ರನ್ನು 2ನೇ ಶ್ರೇಯಾಂಕಿತ ನಡಾಲ್  6-0, 4-6, 6-1 ಸೆಟ್‌ಗಳಿಂದ ಪರಾಭವಗೊಳಿಸಿದರು.

ಭಾರೀ ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯವು ರೋಚಕತೆಯಿಂದ ಕೂಡಿತ್ತು. ಎರಡು ಗಂಟೆ 25 ನಿಮಿಷಗಳವರೆಗೆ ಮುಂದುವರೆದ ಈ ಪಂದ್ಯದಲ್ಲಿ ಮೊದಲ ಸೆಟ್​ಅನ್ನು ನಡಾಲ್  6-0 ಗೆದ್ದರೆ, ಎರಡನೇ ಸೆಟ್​ನಲ್ಲಿ ಜೊಕೆವಿಚ್ ಕಂಬ್ಯಾಕ್ ಮಾಡಿ 4-6 ಅಂತರದಿಂದ ಗೆದ್ದುಕೊಂಡರು.  ಆದರೆ ಅತ್ಯುತ್ತಮ ಸರ್ವ್​ಗಳ ಮೂಲಕ ವಿಶ್ವದ ನಂಬರ್ ಒನ್ ಆಟಗಾರರನ್ನು ಕಾಡಿದ ನಡಾಲ್ ಮೂರನೇ ಸೆಟ್​ಅನ್ನು  6-1 ಅಂತರದಿಂದ ಸೋಲಿಸಿ ಇಟಾಲಿಯನ್ ಒಪನ್ ಚಾಂಪಿಯನ್​ ಆಗಿ ಕಿರೀಟ ಮುಡಿಗೇರಿಸಿದರು.

ಜೊಕೊವಿಚ್ - ನಡಾಲ್


ಇದು ವಿಶ್ವ ಚಾಂಪಿಯನ್ ನಡಾಲ್​ರ 9ನೇ ಇಟಲಿಯನ್ ಓಪನ್ ಪ್ರಶಸ್ತಿಯಾಗಿದ್ದು, ಹಾಗೆಯೇ ವರ್ಷದ ಮೊದಲ ಟೆನಿಸ್ ಕಿರೀಟವಾಗಿದೆ. ಇನ್ನು ಮಹಿಳೆಯರ ಸಿಂಗಲ್ಸ್​ನಲ್ಲಿ ಕರೊಲಿನಾ ಪ್ಲಿಸ್ಕೋವಾ  ಗ್ರೇಟ್‌ ಬ್ರಿಟನ್‌ನ ಜೊಹಾನ್ನ ಕೊಂಟಾ ವಿರುದ್ಧ 6-3, 6-4 ನೇರ ಸೆಟ್‌ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

First published:May 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...