ಇಂಗ್ಲೆಂಡ್ ಟೆಸ್ಟ್​​ ಸರಣಿಗೂ ಮುನ್ನ ಭಾರತ ತಂಡಕ್ಕೆ ಮತ್ತೊಂದು ಶಾಕ್

news18
Updated:July 27, 2018, 2:31 PM IST
ಇಂಗ್ಲೆಂಡ್ ಟೆಸ್ಟ್​​ ಸರಣಿಗೂ ಮುನ್ನ ಭಾರತ ತಂಡಕ್ಕೆ ಮತ್ತೊಂದು ಶಾಕ್
news18
Updated: July 27, 2018, 2:31 PM IST
ನ್ಯೂಸ್ 18 ಕನ್ನಡ

ಲಂಡನ್ (ಜುಲೈ. 27): ಆಗಸ್ಟ್​ 1 ರಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್​ ಸರಣಿ ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಿದೆ. ಜಿದ್ದಾಜಿದ್ದಿಯ ಫೈಟ್ ಎಂದೇ ಬಿಂಬಿತವಾಗುತ್ತಿರುವ ಇಂಡೋ-ಆಂಗ್ಲೋ ಕದನಕ್ಕೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸುತ್ತಿರುವಾಗಲೇ, ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಈಗಾಗಲೇ ಇಂಗ್ಲೆಂಡ್ ತನ್ನ ತಂಡಕ್ಕೆ ಮಾಜಿ ಆಟಗಾರ, ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ಬರಮಾಡಿಕೊಂಡಿದೆ. ಇದರ ಮಧ್ಯೆಯೇ ಭಾರತದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮೊದಲ ಟೆಸ್ಟ್​ನಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.

ಟೀಂ ಇಂಡಿಯಾ ಆಟಗಾರರಿಗೆ ಇತ್ತೀಚಿನ ದಿನಗಳಲ್ಲಿ ಇಂಜುರಿ ಎಡಬಿಡದೆ ಕಾಡುತ್ತಿದೆ. ಆಂಗ್ಲರ ನಾಡಿಗೆ ಕಾಲಿಟ್ಟಾಗಿನಿಂದ ಮೊದಲಿಗೆ ಜಸ್​​ಪ್ರೀತ್ ಬುಮ್ರಾ ಹೆಬ್ಬರಳನೋವಿಂದ ಏಕದಿನ ಸರಣಿಗೆ ಅಲಭ್ಯರಾಗಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಬೆನ್ನಿನ ಗಾಯದ ಸಮಸ್ಯೆ ಉಲ್ಬಣಿಸಿತ್ತು. ಸದ್ಯ ಈ ಸಾಲಿಗೆ ಅಶ್ವಿನ್ ಕೂಡ ಸೇರ್ಪಡೆಯಾಗಿದ್ದು ಕೊಹ್ಲಿ ಪಡೆಗೆ ತಲೆನೋವಾಗಿ ಪರಿಣಮಿಸಿದೆ. ಎಸೆಕ್ಸ್​ ತಂಡದ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ತರಬೇತಿಯ ವೇಳೆ ಅಶ್ವಿನ್ ತಮ್ಮ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದು, ಎರಡನೇ ದಿನದ ಅಭ್ಯಾಸಕ್ಕೆ ಹಾಜರಾಗಿಲ್ಲ. ಹೀಗಾಗಿ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಬಿಸಿಸಿಐ ಈಗಾಗಲೇ ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಸರಣಿಯ ಪಂದ್ಯಕ್ಕೆ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಅವರನ್ನು ಸಹ ಆಯ್ಕೆ ಮಾಡಿದ್ದು, ಅಶ್ವಿನ್ ಗೈರು ಈ ಆಟಗಾರರಿಗೆ ವರವಾಗಲಿದೆ ನೋಡಬೇಕಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ