PV Sindhu: ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು; ಇತಿಹಾಸ ನಿರ್ಮಿಸಿದ ಆಟಗಾರ್ತಿ!

Commonwealth Games 2022 Day 11: ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಸೆಟ್‌ಗಳಿಂದ ಸೋಲಿಸಿದ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ.

ಪಿವಿ ಸಿಂಧು

ಪಿವಿ ಸಿಂಧು

  • Share this:
    ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ಕಾಮನ್​ವೆಲ್ತ್ ಗೇಮ್ಸ್​ನಲ್ಲಿ (Commonwealth Games 2022 Day 11) ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. 2014ರಲ್ಲಿ ಕಂಚು, 2018ರಲ್ಲಿ ಬೆಳ್ಳಿ ಗೆದ್ದಿದ್ದ ಪಿವಿ ಸಿಂಧು ಇದೀಗ ಚಿನ್ನ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಸೆಟ್‌ಗಳಿಂದ ಸೋಲಿಸಿದ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. ಇದು ಕಾಮನ್​ವೆಲ್ತ್ ಗೇಮ್ಸ್​ನ 2022 ರ ಅಂತಿಮ ದಿನವಾಗಿದ್ದು ಭಾರತವು ಇನ್ನೂ ಐದು ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ.

    ಇದೇ ವೇಳೆ ಕಾಮನ್​ವೆಲ್ತ್ ಗೇಮ್ಸ್​ 2022ರ 11 ನೇ ದಿನದಂದು ಪುರುಷರ ಡಬಲ್ಸ್​ನಲ್ಲಿ  ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಕೂಡ ಫೈನಲ್‌ನಲ್ಲಿ ಆಡಲಿದ್ದಾರೆ. ಸಂಜೆ ವೇಳೆಗೆ ನಡೆಯಲಿರುವ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಚಿನ್ನದ ಪದಕಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಟೇಬಲ್ ಟೆನಿಸ್‌ನಲ್ಲಿ ಅಚಂತ ಶರತ್ ಕಮಲ್ ಅವರು ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಆಡುವ ಮೂಲಕ ಅಂತಿಮ ಪದಕಕ್ಕಾಗಿ ಸೆಣಸಲಿದ್ದಾರೆ. ಕಾಮನ್​ವೆಲ್ತ್ ಗೇಮ್ಸ್ 2022 ಮುಗಿಯುವ ವೇಳೆ ಭಾರತ ಒಟ್ಟು ಎಷ್ಟು ಪದಕ ಗಳಿಸಲಿದೆ ಎಂದು ಕಾದುನೋಡಬೇಕಿದೆ.

    ಭಾರತದ ತೆಕ್ಕೆಯಲ್ಲಿ ಎಷ್ಟು ಪದಕಗಳಿವೆ?
    ಭಾರತವು ಈವರೆಗೆ ಕಾಮನ್​ವೆಲ್ತ್ ಗೇಮ್ಸ್ 2022ರಲ್ಲಿ  56 ಪದಕಗಳನ್ನು (19 ಚಿನ್ನ, 15 ಬೆಳ್ಳಿ, 22 ಕಂಚು) ಪದಗಳನ್ನು ಗಳಿಸಿದೆ. ಅಲ್ಲದೇ ಭಾರತದ ಪದಕದ ಬೇಟೆ ಇನ್ನಷ್ಟು ಮುಂದುವರೆಯುವ ಎಲ್ಲ ಸಾಧ್ಯತೆಗಳಿವೆ

    ಭಾರತೀಯ ಆಟಗಾರರ ಸಾಧನೆ ಕಡಿಮೆಯೇನಿಲ್ಲ
    ಇತ್ತ ಬಾಕ್ಸಿಂಗ್​ನಲ್ಲಿ ನಿತು ಘಂಘಾಸ್ ಮತ್ತು ಅಮಿತ್ ಪಂಘಾಲ್ ಚಿನ್ನದ ಪದಕ ಗೆದ್ದಿದ್ದರೆ, 16 ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದು ಸಂಭ್ರಮಿಸಿದೆ. ಇತ್ತ ಭಾರತದ ಮಹಿಳಾ ಹಾಕಿ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಕಂಚು ಗೆದಿದ್ದು, ಪೆನಾಲ್ಟಿ ಶೂಟೌಟ್ ನಲ್ಲಿ 2-1 ಅಂತರದ ಗೋಲುಗಳನ್ನು ಹೊಡೆಯುವ ಮೂಲಕ ಹಾಕಿ ಪದಕ ಗೆದ್ದಿದೆ. ಸದ್ಯ ಇವಕ್ಕೆ ಮತ್ತೊಂದು ಸೇರ್ಪಡೆ ಎಂದರೆ ಟ್ರಿಪಲ್ ಜಂಪ್ನಲ್ಲಿ ಪುರುಷರಿಬ್ಬರ ಅಸಾಧಾರಣ ಸಾಧನೆ.

    ಇದನ್ನೂ ಓದಿ: CWG 2022: ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಫೈಟಿಂಗ್! ಹೊಡೆದಾಡಿಕೊಂಡ ಹಾಕಿ ಆಟಗಾರರು

    ಟ್ರಿಪಲ್ಜಂಪ್​ನಲ್ಲಿ ಚಿನ್ನ-ಬೆಳ್ಳಿ ಎರಡೂ ಪದಕಗಳು ಭಾರತದ ತೆಕ್ಕೆಗೆ
    ಹೌದು ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಗೆಲುವು ಎನ್ನಬಹುದು. ಟ್ರಿಪಲ್ ಜಂಪ್ನಲ್ಲಿ ಭಾರತದ ಪಟುಗಳು ಇತಿಹಾಸ ನಿರ್ಮಿಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಎಲ್ದೋಸ್ ಪೌಲ್ ತಂದು ಕೊಟ್ಟಿದ್ದಾರೆ. ಕೇವಲ 0.01 ಸೆಂಟಿಮೀಟರ್ ವ್ಯತ್ಯಾಸದಲ್ಲಿ ಕೇರಳದ ಸಹ ಆಟಗಾರ ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಗೆದ್ದರೆ, ಪ್ರವೀಣ್ ಚಿತ್ರವೆಲ್ ಕಂಚಿನ ಪದಕದಿಂದ ವಂಚಿತರಾದರು.

    ಇದನ್ನೂ ಓದಿ: Sanket Sargar: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ ಖಾತೆ ತೆರೆದ ಸಂಕೇತ್ ಸರ್ಗರ್; ವೇಟ್‌ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ

    ಟ್ರಿಪಲ್ ಜಂಪ್ ಗೆ ಇದೇ ಮೊದಲು ಚಿನ್ನದ ಪದಕ ಬಂದಿದ್ದು
    ಕಳೆದ ಆವೃತ್ತಿಗಳಲ್ಲಿ ಭಾರತ ನಾಲ್ಕು ಟ್ರಿಪಲ್ ಜಂಪ್ ಪದಕಗಳನ್ನು ಗೆದ್ದಿದೆ ಆದರೆ ದೇಶದ ಇಬ್ಬರು ಅಥ್ಲೀಟ್‌ಗಳು ಪೋಡಿಯಂ ಫಿನಿಶ್‌ಗಳನ್ನು ಪಡೆದಿರುವುದು ಇದೇ ಮೊದಲು. ಮೊಹಿಂದರ್ ಸಿಂಗ್ ಗಿಲ್ 1970 ಮತ್ತು 1974 ಆವೃತ್ತಿಗಳಲ್ಲಿ ಕಂಚು ಮತ್ತು ಬೆಳ್ಳಿ ಗೆದ್ದಿದ್ದರೆ, ರೆಂಜಿತ್ ಮಹೇಶ್ವರಿ ಮತ್ತು ಅರ್ಪಿಂದರ್ ಸಿಂಗ್ 2010 ಮತ್ತು 2014 ಆವೃತ್ತಿಗಳಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಆದರೆ ಈ ಇಬ್ಬರು ಅಥ್ಲೆಟಿಕ್ ಗಳು ಭಾರತಕ್ಕೆ ಚಿನ್ನ-ಬೆಳ್ಳಿ ಎರಡನ್ನೂ ಸಹ ಗೆದ್ದಿರುವುದು ವಿಶೇಷವಾಗಿದೆ.
    Published by:guruganesh bhat
    First published: