PV Sindhu: ವಿಶ್ವ ಚಾಂಪಿಯನ್‌ಶಿಪ್​ನಿಂದ ಚಿನ್ನದ ಹುಡುಗಿ ಪಿವಿ ಸಿಂಧು ಔಟ್​

ಪಿ ವಿ ಸಿಂಧು

ಪಿ ವಿ ಸಿಂಧು

ಚಿನ್ನ ಗೆಲ್ಲುವ ಪ್ರಯತ್ನದಲ್ಲಿ ಗಾಯಗೊಂಡಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ.

  • Share this:

ಇತ್ತೀಚಿಗೆ ಮುಗಿದ ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ (CWG 2o22) ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu)  ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. 2014ರಲ್ಲಿ ಕಂಚು, 2018ರಲ್ಲಿ ಬೆಳ್ಳಿ ಗೆದ್ದಿದ್ದ ಪಿವಿ ಸಿಂಧು ಈ ಬಾರಿ ಚಿನ್ನ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಸೆಟ್‌ಗಳಿಂದ ಸೋಲಿಸಿದ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದರು. ಇವರ ಈ ಸಾಧನೆಗೆ ದೇಶವೇ ಹೆಮ್ಮೆ ಪಡುತ್ತಿದೆ. ಅಲ್ಲದೇ ಈ ರೀತಿ ಅನೇಕ ಚಿನ್ನದ ಪದಕವನ್ನು ಗೆಲ್ಲುವಂತಾಗಿ ಎಂದು ಅದೆಷ್ಟೋ ಜನ ಹಾರೈಸಿದ್ದಾರೆ. ಆದರೆ ಚಿನ್ನ ಗೆಲ್ಲುವ ಪ್ರಯತ್ನದಲ್ಲಿ, ಗಾಯಗೊಂಡಿದ್ದು,  ಈ ಗಾಯವು ಗಂಭೀರವಾಗಿದೆ ಎಮದು ತಿಳಿದುಬಂದಿದೆ. ಈ ಕಾರಣದಿಂದಾಗಿ ಅವರು ಈ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ.


ವಿಶ್ವ ಚಾಂಪಿಯನ್‌ಶಿಪ್​ನಿಂದ ಹಿಂದೆ ಸರಿದ ಸಿಂಧು:


ಹೌದು, ಕಾಮನ್​ವೆಲ್ತ್ ಗೇಮ್ಸ್ 2022ರಲ್ಲಿ ಪಿವಿ ಸಿಂಧು ಗಾಯದ ನಡುವೆಯೇ ಫೈನಲ್ ಪಂದ್ಯವನ್ನು ಆಡಿ ದೇಶಕ್ಕಾಗಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಆದರೆ ಇದೀಗ ಇದೇ ಸಮಸ್ಯೆ ಆಗಿದೆ. ಗಾಯದ ನಡುವೆಯೇ ಅವರು ಪಂದ್ಯವನ್ನು ಆಡಿರುವುದುರಿಂದ ಗಾಯದ ತೀರ್ವತೆಯು ಹೆಚ್ಚಿದ್ದು, ಇದೀಗ ಮುಂಬರುವ BWF ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಸಿಂಧು ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಈ ಬಾರಿಯ BWF ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್ 22 ರಿಂದ ಆಗಸ್ಟ್ 28ರ ವರೆಗೆ ನಡೆಯಲಿದೆ.


2 ತಿಂಗಳುಗಳ ಕಾಲ ವಿಶ್ರಾಂತಿ:


ಇನ್ನು, ಗಾಯದ ಸಮಸ್ಯೆ ಹೆಚ್ಚಾಗಿರುವುದರಿಂದಾಗಿ ಪಿವಿ ಸಿಂಧು ಅವರು ಇನ್ನೂ ಚೇತರಿಸಿಕೊಂಡಿಲ್ಲ. ವಿಶ್ವ ಚಾಂಪಿಯನ್​ ಶಿಪ್​ ಬರುವರವೆಗೂ ಇದು ಕಡಿಮೆ ಆಗದ ಹಿನ್ನಲೆ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಸಿಂಧು ಅವರ ಎಡ ಹಿಮ್ಮಡಿಯಲ್ಲಿ ಮೂಳೆ ಮುರಿತವಾಗಿದೆ ಎಂದು ಸಿಂಧು ಅವರ ತಂದೆ ಪಿವಿ ರಾಮಣ್ಣ ಹೇಳಿದ್ದಾಗಿ ವರದಿಯಾಗಿದೆ. ಹೀಗಾಗಿ ಅವರು ಅಕ್ಟೋಬರ್​ವರೆಗೆ ವಿಶ್ರಾಂತಿ ಪಡೆಯಲಿದ್ದಾರೆ.


ಇದನ್ನೂ ಓದಿ: IND vs ZIM: ಮೊದಲು ಕ್ಯಾಪ್ಟನ್, ಈಗ ಕೋಚ್! ಈ ಕೊನೆಯ ಕ್ಷಣದ ಬದಲಾವಣೆಗಳು ಏಕೆ?


ಪಿ.ವಿ ಸಿಂಧು ಫೋಟೋ ಹಂಚಿಕೊಂಡ ವಾರ್ನರ್​:


ಹೌದು, ಭಾರತೀಯ ಹಾಡುಗಳಿಗೆ, ರೀಲ್ಸ್ ಗಳನ್ನು ಮಾಡುವ ಮೂಲಕ ಸಖತ್ ಚರ್ಚೆಯಲ್ಲಿರುತ್ತಿದ್ದ ಆಸೀಸ್​ನ ಡೇವಿಡ್​ ವಾರ್ನರ್​ ಇದೀಗ ಮತ್ತೊಂದು ಪೋಸ್ಟ್ ಮಾಡುವ ಮೂಲಕ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಈ ಬಾರಿ  ಕಾಮನ್​ವೆಲ್ತ್ 2022ರಲ್ಲಿ ಚಿನ್ನ ಗೆದ್ದ ಭಾರತೀಯ ಆಟಗಾರ್ತಿಯಾದ ಪಿ.ವಿ ಸಿಂಧು ಅವರ ಫೋಟೋವನ್ನು ಹಂಚಿಕೊಂಡು ಶುಭಾಷಯವನ್ನು ಕೋರಿದ್ದಾರೆ. ಅಲ್ಲದೇ ‘ವೆಲ್​ ಡನ್​ ಪಿವಿ ಸಿಂಧು. ಅದ್ಭುತವಾದ ಪ್ರದರ್ಶನ‘ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: PV Sindhu: ಎಲ್ಲಾ ಓಕೆ, ಪಿವಿ ಸಿಂಧು ಫೋಟೋ ವಾರ್ನರ್​ ಹಾಕಿದ್ಯಾಕೆ?


ಆಸ್ಟ್ರೇಲಿಯಾ ಅಗ್ರಸ್ಥಾನ, ಭಾರತಕ್ಕೆ 4ನೇ ಸ್ಥಾನ:


ಅದು ಕ್ರಿಕೆಟ್ ಮೈದಾನವಾಗಲಿ ಅಥವಾ ಇತರ ಅಂತಾರಾಷ್ಟ್ರೀಯ ಸ್ಪರ್ಧೆಯಾಗಲಿ. ಆಸ್ಟ್ರೇಲಿಯಾ ಆಟಗಾರರು ಎಲ್ಲೆಡೆ ಪ್ರಾಬಲ್ಯ ಹೊಂದಿದ್ದಾರೆ. ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಆಸ್ಟ್ರೇಲಿಯಾದ ಅಥ್ಲೀಟ್ ಗಳು ಅಕ್ಷರಶಃ ಪದಕದ ಮಳೆ ಸುರಿಸಿದರು. 67 ಚಿನ್ನ, 57 ಬೆಳ್ಳಿ ಮತ್ತು 54 ಕಂಚಿನ ಪದಕಗಳೊಂದಿಗೆ ಆಸ್ಟ್ರೇಲಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಕಿ ಮತ್ತು ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಆದರೂ ಭಾರತ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರಿದ್ದು, 61 ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ.

top videos
    First published: