PV Sindhu: ದಾಖಲೆ ಬರೆದ ಪಿ.ವಿ.ಸಿಂಧು! ಸ್ವಿಸ್ ಓಪನ್ ಪ್ರಶಸ್ತಿ ಗೆದ್ದ ಆಟಗಾರ್ತಿಗೆ ಪ್ರಧಾನಿ ಮೋದಿ ಅಭಿನಂದನೆ

ಈಮೂಲಕ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್​ನಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಸ್ವಿಸ್ ಓಪನ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ  ಒಲಂಪಿಕ್ ಕಂಚು ಪದಕ ವಿಜೇತೆ ಪಿ.ವಿ.ಸಿಂಧು ಭಾಜನರಾಗಿದ್ದಾರೆ.

ಪಿ ವಿ ಸಿಂಧು

ಪಿ ವಿ ಸಿಂಧು

 • Share this:
  ಭಾರತದ ಜನಪ್ರಿಯ ಷಟ್ಲರ್ ಪಿ.ವಿ.ಸಿಂಧು (PV Sindhu) ಭಾನುವಾರ ಸ್ವಿಜರ್​ಲ್ಯಾಂಡ್​ನ ಬಾಸೆಲ್‌ನ ಸೇಂಟ್ ಜಾಕೋಬ್‌ಶಲ್ಲೆ ಅರೇನಾದಲ್ಲಿ ನಡೆದ ಸ್ವಿಸ್ ಓಪನ್ 2022 ರ (Swiss Open 2022) ಮಹಿಳಾ ಸಿಂಗಲ್ಸ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇದು ಪಿ.ವಿ. ಸಿಂಧು ಅವರಿಗೆ ವರ್ಷದ ಎರಡನೇ ಪ್ರಶಸ್ತಿಯಾಗಿದೆ. ಸ್ವಿಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು 49 ನಿಮಿಷಗಳಲ್ಲಿ 21-16, 21-8 ರಿಂದ ಪಿ.ವಿ.ಸಿಂಧು ಸೋಲಿಸಿದರು. ಈ ಗೆಲುವಿನೊಂದಿಗೆ ಸಿಂಧು ಈಗ ಥಾಯ್ ಆಟಗಾರ್ತಿ ವಿರುದ್ಧ 16-1 ಅಂತರದ ಹೆಡ್ ಟು ಹೆಡ್ ದಾಖಲೆ ಹೊಂದಿದ್ದಾರೆ.

  ಹೊಸ ದಾಖಲೆ ಬರೆದ ಪಿ.ವಿ.ಸಿಂಧು!
  ಈಮೂಲಕ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್​ನಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಸ್ವಿಸ್ ಓಪನ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ  ಒಲಂಪಿಕ್ ಕಂಚು ಪದಕ ವಿಜೇತೆ ಪಿ.ವಿ.ಸಿಂಧು ಭಾಜನರಾಗಿದ್ದಾರೆ. ಪಿ.ವಿ.ಸಿಂಧು ಜನವರಿಯಲ್ಲಿ ಸೈಯದ್ ಮೋದಿ ಇಂಟರ್ನ್ಯಾಷನಲ್ ಸೂಪರ್ 300 ಪದಕವನ್ನು ಸಹ ಗೆದ್ದಿದ್ದರು ಎಂದುದನ್ನು ಇಲ್ಲಿ ಉಲ್ಲೇಖಿಸಬಹುದು.

  ಮ್ಯಾಚ್ ಹೇಗಿತ್ತು?
  ಮೊದಲ ಗೇಮ್‌ನಲ್ಲಿ 3-0 ಮುನ್ನಡೆ ಗಳಿಸಿದ ಸಿಂಧು ಫೈನಲ್‌ನಲ್ಲಿ ವೇಗದ ಆರಂಭ ಪಡೆದರು. ಆದರೆ ಥಾಯ್ ಷಟ್ಲರ್ ಅವರು 3-3 ರಲ್ಲಿ ಗೇಮ್ ಅನ್ನು ಸಮಬಲಗೊಳಿಸಿದ್ದರಿಂದ ಸೋಲಿಸಲು ಸಾಧ್ಯವಾಗಲಿಲ್ಲ.

  ಆದರೆ ಮುಂದಿನ ಹಂತದಲ್ಲಿ ಪಿ.ವಿ.ಸಿಂಧು ಅವರ ಅಬ್ಬರದ ಆಟದ ಮುಂದೆ   ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರು ಮಂಕಾಗಬೇಕಾಯಿತು. ಟೂರ್ನಮೆಂಟ್‌ನಲ್ಲಿ ಸತತ ಎರಡನೇ ಫೈನಲ್‌ನಲ್ಲಿ ಆಡಿದ ಡಬಲ್ ಒಲಿಂಪಿಕ್ ಪದಕ ವಿಜೇತೆ ಸಿಂಧು 49 ನಿಮಿಷಗಳಲ್ಲಿ ಬುಸಾನನ್‌ರನ್ನು 21-16 21-8 ಅಂತರದಲ್ಲಿ ಸೋಲಿಸಿದರು.  ಇದನ್ನೂ ಓದಿ: IPL 2022: RCBಯ ಈ ನಾಲ್ಕು ಆಟಗಾರರ ಮೇಲೆ ಎಲ್ಲರ ಕಣ್ಣು! ಯಾವ ದೃಷ್ಟಿನೂ ಬೀಳದೆ ಇರಲಪ್ಪ ಎಂದ ಫ್ಯಾನ್ಸ್  ವಿಶ್ವ ನಂ. 7 ಸಿಂಧು ಈ ವಿಭಾಗದಲ್ಲಿ ಅತ್ಯುನ್ನತ ಶ್ರೇಯಾಂಕದ ಆಟಗಾರ್ತಿಯಾಗಿದ್ದು ಥಾಯ್ಲೆಂಡ್​ನ ಬುಸಾನನ್ 11 ನೇ ಶ್ರೇಯಾಂಕವನ್ನು ಹೊಂದಿದ್ದರು..

  ಇದನ್ನೂ ಓದಿ: IPL 2022: ಸಾರ್ವಕಾಲಿಕ ಐಪಿಎಲ್ ದಾಖಲೆ ಸರಿಗಟ್ಟುವ ಮೂಲಕ ಇತಿಹಾಸ ನಿರ್ಮಿಸಿದ ಬ್ರಾವೊ

  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಿಸ್ ಓಪನ್ ಗೆದ್ದಿದ್ದಕ್ಕಾಗಿ ಶಟ್ಲರ್ ಪಿ ವಿ ಸಿಂಧು ಅವರನ್ನು ಭಾನುವಾರ ಅಭಿನಂದಿಸಿದ್ದಾರೆ. ಅವರ ಸಾಧನೆಗಳು ಭಾರತದ ಯುವಜನರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

  ಭಾರತದ ಹೆಮ್ಮೆಯ ಆಟಗಾರ್ತಿ ಪಿ.ವಿ.ಸಿಂಧು ಒಲಂಪಿಕ್ ಕಂಚಿನ ಪದಕ ವಿಜೇತೆಯಾಗಿದ್ದಾರೆ. ಅವರು ಇದೇ ವರ್ಷದ ಜನವರಿ ತಿಂಗಳಲ್ಲಿ ಸೈಯದ್ ಮೋದಿ ಇಂಟರ್ನ್ಯಾಷನಲ್ ಸೂಪರ್ 300 ಪದಕವನ್ನು ಸಹ ಗೆದ್ದಿದ್ದರು. ಇದು ಭಾರತೀಯ ಕ್ರೀಡಾ ಪ್ರೇಮಿಗಳ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ನೆಟ್ಟಿಗರು ಅಭಿನಂದಿಸಿದ್ದಾರೆ.
  Published by:guruganesh bhat
  First published: