PV Sindhu won Bronze Medal: ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು: ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ಸಾಧನೆ

ಪಿ.ವಿ.ಸಿಂಧು ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಪದಕ ಗೆಲ್ಲುವ ಮೂಲಕ ಹೊಸ ಸಾಧನೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​​ನಲ್ಲಿ ಸಿಂಧು ಬೆಳ್ಳಿ ಪದಕವನ್ನು ಗೆದ್ದಿದ್ದರು. ಈಗ ಕಂಚಿನ ಪದಕದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

PV Sindhu

PV Sindhu

 • Share this:
  ಟೊಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ 2ನೇ ಪದಕ ದಕ್ಕಿದೆ. ನಿನ್ನೆ ಸೆಮಿ ಫೈನಲ್​ನಲ್ಲಿ ಸೋಲುಂಡಿದ್ದ ಪಿ.ವಿ.ಸಿಂಧು ಇಂದು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಒಲಿಂಪಿಕ್ಸ್​​​ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. ಬ್ಯಾಡ್ಮಿಂಟನ್​​ ಮಹಿಳಾ ಸಿಂಗಲ್​ ವಿಭಾಗದಲ್ಲಿ ಚೀನಾದ ಹಿ ಬಿಂಗ್​ಜಿಯೋ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಸಿಂಧು ಮುತ್ತಿಟ್ಟಿದ್ದಾರೆ.

  ಇಂದು ನಡೆದ ಮಹಿಳಾ  ಸಿಂಗಲ್ಸ್​​ ಬ್ಯಾಡ್ಮಿಂಟನ್​ ನಲ್ಲಿ ಚೀನಾ ಆಟಗಾರ್ತಿಯನ್ನು 21-13, 21-15 ನೇರ ಸೆಟ್​​ಗಳಿಂದ ಮಣಿಸುವ ಮೂಲಕ ಕಂಚಿನ ಪದಕವನ್ನು ಸಿಂಧು ತಮ್ಮದಾಗಿಸಿಕೊಂಡಿದ್ದಾರೆ. ಪಿ.ವಿ.ಸಿಂಧು ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಪದಕ ಗೆಲ್ಲುವ ಮೂಲಕ ಹೊಸ ಸಾಧನೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್​​ನಲ್ಲಿ ಸಿಂಧು ಬೆಳ್ಳಿ ಪದಕವನ್ನು ಗೆದ್ದಿದ್ದರು. ಈಗ ಕಂಚಿನ ಪದಕದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

  ಟೊಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ 2ನೇ ಪದಕ ತನ್ನದಾಗಿಸಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ 62ನೇ ಸ್ಥಾನಕ್ಕೆ ಏರಿದೆ. ವೇಯ್ಟ್​​ ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.

  ನಿನ್ನೆ  ಸೆಮಿ ಫೈನಲ್​ನಲ್ಲಿ ಚೈನೀಸ್ ತೈಪೆಯ ತೈ ವಿರುದ್ಧ ಪರಾಭವಗೊಂಡಿದ್ದರು. ಚಿನ್ನದ ಪದಕ ಸಿಂಧು ಕೈ ತಪ್ಪಿತ್ತು. ಮಹಿಳಾ ಸಿಂಗಲ್​​​ನಲ್ಲಿ ಸೆಮಿಸ್​ ಪ್ರವೇಶಿಸಿದ್ದ ಸಿಂಧು ಚಿನ್ನದ ಪದಕ ನಿರೀಕ್ಷೆಯನ್ನು ಹುಟ್ಟಿಸಿದ್ದರು. ಆದರೆ  ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ 21-18, 21-12 ನೇರ ಸೆಟ್ ಗಳಲ್ಲಿ ಸಿಂಧು ಸೋಲನುಭವಿಸಿದರು.

  ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲಲು  ಪಿ.ವಿ. ಸಿಂಧುಗೆ ಗೋಪಿಚಂದ್ ದೀರ್ಘಕಾಲ ತರಬೇತಿ  ನೀಡಿದ್ದರು. ಆದರೆ ಈ ಬಾರಿ ಗೋಪಿಚಂದ್‌ ಅಕಾಡೆಮಿ ತೊರೆದು ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ದಕ್ಷಿಣ ಕೊರಿಯಾದ ಪಾರ್ಕ್ ಟೇ ಸಾಂಗ್ ಎಂಬುವರ ಬಳಿ ಸಿಂಧು ಕೋಚಿಂಗ್ ಪಡೆದಿದ್ದಾರೆ.
  Published by:Kavya V
  First published: