News18 India World Cup 2019

ಏಷ್ಯನ್ ಗೇಮ್ಸ್ 2018: ಕಂಚು ಗೆದ್ದ ದೀಪಿಕಾ; ಸೈನಾ-ಸಿಂಧು ಕ್ವಾರ್ಟರ್ ಫೈನಲ್​​ಗೆ

news18
Updated:August 25, 2018, 3:31 PM IST
ಏಷ್ಯನ್ ಗೇಮ್ಸ್ 2018: ಕಂಚು ಗೆದ್ದ ದೀಪಿಕಾ; ಸೈನಾ-ಸಿಂಧು ಕ್ವಾರ್ಟರ್ ಫೈನಲ್​​ಗೆ
news18
Updated: August 25, 2018, 3:31 PM IST
ನ್ಯೂಸ್ 18 ಕನ್ನಡ

ಏಷ್ಯನ್ ಗೇಮ್ಸ್​​ನ ಮಹಿಳಾ ಸಿಂಗಲ್ಸ್​ ಸ್ಕ್ವ್ಯಾಷ್​​ನಲ್ಲಿ ಭಾರತದ ದೀಪಿಕಾ ಪಳ್ಳಿಕಲ್ ಅವರು ಸೆಮಿಫೈನಲ್​​​ನಲ್ಲಿ ಸೋತಿದ್ದು ಕಂಚಿಗೆ ತೃಪ್ತಿ ಪಟ್ಟಿದ್ದಾರೆ.

ಮಲೇಷ್ಯನ್ ಆಟಗಾರ್ತಿ ನಿಕೋಲ್ ಡೇವಿಡ್ ವಿರುದ್ದ ದೀಪಿಕಾ ಅವರು 0-3 (7-11 9-11 6-11) ಅಂತರದಿಂದ ಪರಾಭವಗೊಂಡರು. ಇನ್ನು ಬ್ಯಾಡ್ಮಿಂಟನ್​​ನ ಮಹಿಳೆಯರ ಸಿಂಗಲ್ಸ್​ನಲ್ಲಿ ಭಾರತದ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ. 21-6, 21-14 ಅಂತರದಿಂದ ಫಿಟ್ರಿಯಾನಿ ವಿರುದ್ಧ ನೆಹ್ವಾಲ್ ಜಯ ಗಳಿಸಿದರು. ಜೊತೆಗೆ ಪಿ. ವಿ ಸಿಂಧು ಕೂಡ ಕ್ವಾರ್ಟರ್ ಫೈನಲ್​​ಗೆ ಪ್ರವೇಶ ಪಡೆದಿದ್ದಾರೆ.ಇಂಡೋನೇಷ್ಯಾದ ಗ್ರೆಗೊರಿಯಾ ಮಾರಿಸ್ಕ ಜಂಗ್ ವಿರುದ್ಧ ಸಿಂಧು ಅವರು 21-12, 21-15 ಅಂತರದಲ್ಲಿ ಜಯ ಸಾಧಿಸಿದರು.

ಇದೀಗ ಭಾರತ 6 ಚಿನ್ನ, 5 ಬೆಳ್ಳಿ ಹಾಗೂ 15 ಕಂಚಿನೊಂದಿಗೆ ಒಟ್ಟು 26 ಪದಕಗಳೊಂದಿಗೆ 9ನೇ ಸ್ಥಾನದಲ್ಲಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...