Sindhu Loses Semi-final: ಒಲಿಂಪಿಕ್ಸ್​​ನಲ್ಲಿ ಪಿ.ವಿ.ಸಿಂಧು ಚಿನ್ನದ ಕನಸು ಭಗ್ನ, ಕಂಚಿನ ಪದಕದ ನಿರೀಕ್ಷೆ

ಮಹಿಳಾ ಸಿಂಗಲ್​​​ನಲ್ಲಿ ಸೆಮಿಸ್​ ಪ್ರವೇಶಿಸಿದ್ದ ಸಿಂಧು ಚಿನ್ನದ ಪದಕ ನಿರೀಕ್ಷೆಯನ್ನು ಹುಟ್ಟಿಸಿದ್ದರು. ಆದರೆ  ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ 21-18, 21-12 ನೇರ ಸೆಟ್ ಗಳಲ್ಲಿ ಸಿಂಧು ಸೋಲನುಭವಿಸಿದರು.

ಪಿ.ವಿ.ಸಿಂಧು

ಪಿ.ವಿ.ಸಿಂಧು

  • Share this:
    ಟೊಕಿಯೋ ಒಲಿಂಪಿಕ್ಸ್​​ ಬ್ಯಾಡ್ಮಿಂಟನ್​​ ವಿಭಾಗದಲ್ಲಿ ಸೆಮಿ ಫೈನಲ್​ ತಲುಪಿಸಿದ್ದ ಪಿ.ವಿ.ಸಿಂಧು ಚಿನ್ನದ ಪದಕದ ಬೇಟೆ ಕೊನೆಯಾಗಿದೆ. ಸೆಮಿ ಫೈನಲ್​ನಲ್ಲಿ ಚೈನೀಸ್ ತೈಪೆಯ ತೈ ವಿರುದ್ಧ ಪರಾಭವಗೊಂಡಿದ್ದಾರೆ. ಚಿನ್ನದ ಪದಕ ಸಿಂಧು ಕೈ ತಪ್ಪಿದ್ದು ಕಂಚಿನ ಪದಕ್ಕಾಗಿ ಸೆಣಸಲಿದ್ದಾರೆ. ಮಹಿಳಾ ಸಿಂಗಲ್​​​ನಲ್ಲಿ ಸೆಮಿಸ್​ ಪ್ರವೇಶಿಸಿದ್ದ ಸಿಂಧು ಚಿನ್ನದ ಪದಕ ನಿರೀಕ್ಷೆಯನ್ನು ಹುಟ್ಟಿಸಿದ್ದರು. ಆದರೆ  ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ 21-18, 21-12 ನೇರ ಸೆಟ್ ಗಳಲ್ಲಿ ಸಿಂಧು ಸೋಲನುಭವಿಸಿದರು.

    ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಆಸೆ ಮೂಡಿಸಿದ್ದರು. ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ವಿಶ್ವದ ನಂಬರ್ 1 ಆಟಗಾರ್ತಿ ತೈ ಜು ಯಿಂಗ್ ಆಕ್ರಮಣಕಾರಿಯಾಗಿ ಆಡಿದರು. ಮೊದಲ ಸೆಟ್ ನ ಆರಂಭದಲ್ಲಿ ಸಿಂಧು ಮುನ್ನಡೆ ಸಾಧಿಸಿದ್ದರೂ ನಂತರ ತೈ ಜು ಯಿಂಗ್ ಪಂದ್ಯದಲ್ಲಿ ಸಂಪೂರ್ಣ ತನ್ನ ಹಿಡಿತ ಸಾಧಿಸಿದರು.

    ಈ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಗೆ ಪ್ರವೇಶ ಪಡೆದರು. ಪಿ.ವಿ.ಸಿಂಧು ಅವರು ಕಂಚಿನ ಪದಕಕ್ಕಾಗಿ ಸ್ಪರ್ಧೆ ನಡೆಸಲಿದ್ದಾರೆಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ಜಪಾನ್‌ನ ಮೂರನೇ ಶ್ರೇಯಾಂಕದ ಅಕಾನೆ ಯಮಗುಚಿ ಅವರನ್ನು 2-0 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ನಾಳೆ ನಡೆಯುವ ಪಂದ್ಯದಲ್ಲಿ ಸಿಂಧು ಜಯಶಾಲಿಯಾದರೆ ಭಾರತಕ್ಕೆ ಕಂಚಿನ ಪದಕ ಸಿಗುವ ನಿರೀಕ್ಷೆ ಇದೆ.
    Published by:Kavya V
    First published: