Olympics 2020 - ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಒಲಿಂಪಿಕ್ ನೆಲದಲ್ಲಿ ಭಾವುಕರಾಗಿದ್ದೇಕೆ?
ಐದಾರು ಸೆಕೆಂಡುಗಲ ಕಾಲ ನನಗೆ ಏನು ಮಾಡಬೇಕೆಂದೇ ತಿಳಿಲಿಲ್ಲ. ಆ ಕ್ಷಣದಲ್ಲಿ ಎಲ್ಲಾ ಭಾವನೆಗಳು ಒಟ್ಟೊಟ್ಟಾಗಿ ಬಂದವು ಎಂದು ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಪಿ ವಿ ಸಿಂಧು ಹೇಳಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಎರಡನೇ ಬಾರಿಗೆ ಒಲಿಂಪಿಕ್ ಪದಕವನ್ನು ಗೆದ್ದ ನಂತರ ಮಾತೇ ಹೊರಡದಂತೆ ಮೌನವಾಗಿದ್ದರು. ಅವರ ಐತಿಹಾಸಿಕ ಸಾಧನೆಯ ಅಗಾಧತೆಯನ್ನು ಅರಿತುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ಹೀಗೆ ಅವರು ಮೌನವಾಗಿ ತಮ್ಮ ಸಂಭ್ರಮವನ್ನು ಮನಸ್ಸಿನಲ್ಲಿಯೇ ಆನಂದಿಸುತ್ತಿದ್ದರು. 26 ವರ್ಷದ ಭಾರತೀಯ ಪ್ರತಿಭೆ ಭಾನುವಾರ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಕಂಚಿನ ಪದಕವನ್ನು ಗೆದ್ದ ನಂತರ ಸಾರ್ವಕಾಲಿಕ ಶ್ರೇಷ್ಠರಲ್ಲಿ ತನ್ನ ಹೆಸರನ್ನು ಉಳಿಸಿಕೊಂಡರು. ಅವರು ಐದು ವರ್ಷಗಳ ಹಿಂದೆ ರಿಯೊ ಡಿ ಜನೈರೊದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಮತ್ತು ಒಟ್ಟಾರೆ ಎರಡನೇ ಮಹಿಳೆ ಎನಿಸಿಕೊಂಡರು.
ನನಗೆ ಮಾತೇ ಹೊರಡದಷ್ಟು ಭಾವುಕಳಾಗಿದ್ದೆ. ನನ್ನ ತರಬೇತುದಾರರು ಕಣ್ಣೀರು ಹಾಕುತ್ತಿದ್ದರು. ಇದು ಮರೆಯಲಾಗದ ಸದಾಕಾಲ ನೆನಪಿನಲ್ಲಿ ಉಳಿಯುವ ಕ್ಷಣ ಎಂದು ಸಿಂಧು ಭಾವುಕರಾಗಿ ನುಡಿದಿದ್ದಾರೆ. 5-6 ಸೆಕೆಂಡುಗಳ ಕಾಲ ಏನು ಮಾಡಬೇಕೆಂದು ನನಗೆ ತಿಯಲಿಲ್ಲ, ನಾನು ಸಂತಸದಿಂದ ಕೂಗಿದೆ. ಆ ಕ್ಷಣದಲ್ಲಿ ಎಲ್ಲಾ ಭಾವನೆಗಳು ಒಟ್ಟಾಗಿ ಬಂದವು" ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಮೂರನೇ ಸ್ಥಾನದ ಪ್ಲೇ-ಆಫ್ನಲ್ಲಿ ಸಿಂಧು ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು ಸೋಲಿಸಿದರು. ಸೆಮಿಫೈನಲ್ನಲ್ಲಿ ವಿಶ್ವದ ನಂಬರ್ 1 ತೈ ತ್ಸು ಯಿಂಗ್ ವಿರುದ್ಧದ ಸೋಲಿನ ನಂತರವೂ ಸಿಂಧು ಅವರು ತೃಪ್ತಿಯ ನಗೆಯನ್ನು ಬೀರಿದ್ದರು. ಸಿಂಧು ಕೋಚ್ ಪಾರ್ಕ್ ಟೇ-ಸಾಂಗ್ ಅವರ ಪ್ರೋತ್ಸಾಹವು ಸೆಮಿಫೈನಲ್ ಸೋಲಿನಿಂದ ಚೇತರಿಸಿಕೊಳ್ಳಲು ಮತ್ತು ದೇಶಕ್ಕೆ ಕಂಚು ಪಡೆಯಲು ಸಹಾಯ ಮಾಡಿತು ಎಂದು ಹೇಳಿದರು.
ಸೆಮಿಫೈನಲ್ ನಂತರ ನಾನು ತುಂಬಾ ದುಃಖಿತಳಾಗಿದ್ದೆ, ಕಣ್ಣೀರಿನಿಂದ ಹತಾಶಳಾಗಿದ್ದ ನನ್ನನ್ನು ಕೋಚ್ ಸಮಾಧಾನ ಪಡಿಸಿ ನಾಲ್ಕನೇ ಸ್ಥಾನ ಹಾಗೂ ಕಂಚಿನ ಪದಕಕ್ಕೆ ಸಾಕಷ್ಟು ಅಂತರವಿದೆ ಎಂದು ತಿಳಿಸಿದ್ದರು. ಆ ಮಾತು ನಿಜಕ್ಕೂ ನನ್ನನ್ನು ಸಾಧಿಸುವಂತೆ ಮಾಡಿತು ಎಂದು ನುಡಿದರು. ನನ್ನ ಮುಂದೆ ಇದ್ದ ಗುರಿ ಒಂದೇ ಆಗಿದ್ದು ಪರಿಶ್ರಮದಿಂದ ಆಡುವುದು ಹಾಗೂ ನನ್ನ 100 ಪಟ್ಟು ಹಾಕಿ ಪದಕ ಗೆಲ್ಲುವುದಾಗಿತ್ತು ಎಂದು ಸಿಂಧು ತಿಳಿಸಿದರು.
ಅಂತೂ ಸಿಂಧು ಅವರ ಪರಿಶ್ರಮಕ್ಕೆ ಉತ್ತಮ ಫಲಿತಾಂಶವೇ ದೊರೆತಿದ್ದು ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ದೊರೆತ ಎರಡನೇ ಪದಕ ಇದಾಗಿದೆ. ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಎರಡನೇ ಶ್ರೇಯಾಂಕಿತೆ ಚೈನಾದ ತೈಜು ಯಿಂಗ್ ವಿರುದ್ಧ ಸೋಲನ್ನು ಅನುಭವಿಸಿ ಕಂಚಿಗೆ ತೃಪ್ತಿ ಪಡೆದಿದ್ದಾರೆ. ಪಿ.ವಿ ಸಿಂಧು ಹಾಗೂ ಮೀರಾಬಾಯಿ ಮಾಡಿದ ಸಾಧನೆಯಿಂದಾಗಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೂ ಇದು ಮಾದರಿಯಾಗಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
- ಏಜೆನ್ಸಿ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ