ಸಾಂದರ್ಭಿಕ ಚಿತ್ರ
- News18
- Last Updated:
May 2, 2019, 3:22 PM IST
ಹೊಸದಿಲ್ಲಿ (ಫೆ. 15): ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ 30 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದ್ದು, ಈ ಘಟನೆಯಲ್ಲಿ ನಲ್ವತ್ತಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ.
ಸ್ಕ್ರಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರರು ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್ಪಿಎಫ್ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದಾರೆ.
ಈ ಭಯೋತ್ಪಾದನೆ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಮಧ್ಯೆ ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ರದ್ದು ಮಾಡುವಂತೆ ಕೂಗು ಕೇಳಿಬರುತ್ತಿದೆ.
ಇದನ್ನೂ ಓದಿ: ಪುಲ್ವಾಮ ದಾಳಿಗೆ ದೇಶವೇ ಕಂಬನಿ; ಇತ್ತ ಕೊಹ್ಲಿ ಮಾತ್ರ ಜಾಹೀರಾತುವಿನಲ್ಲಿ ಬ್ಯುಸಿ
ವಿಶ್ವಕಪ್ ಟೂರ್ನಮೆಂಟ್ ಮೇ 30 ರಿಂದ ಆರಂಭವಾಗಲಿದ್ದು, ಇದರಲ್ಲಿ ಭಾರತ ತಂಡ ಜೂನ್ 16 ರಂದು ಪಾಕಿಸ್ತಾನ ವಿರುದ್ಧ ಸೆಣೆಸಾಟ ನಡೆಸಲಿದೆ.
ತಕ್ಷಣವೇ ಈ ಪಂದ್ಯದಿಂದ ಭಾರತ ಹಿಂದೆ ಸರಿಯಬೇಕು. ಪಾಪಿ ಪಾಕಿಸ್ತಾನ ಮಾಡಿದ ರಕ್ತಪಾತಕ್ಕೆ ರಕ್ತದಿಂದಲೇ ಉತ್ತರ ನೀಡಬೇಕು ಎಂದು ಅಭಿಮನಿಗಳು ಸಿಡಿದೆದ್ದಿದ್ದಾರೆ. ಟ್ವಿಟ್ಟರ್ನಲ್ಲಿ ಈ ಬಗ್ಗೆ ಅಭಿಯಾನವೇ ಆರಂಭವಾಗಿದ್ದು, ಬಿಸಿಸಿಐಗೆ ಪಂದ್ಯವನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.
First published:
February 15, 2019, 3:48 PM IST