ಭಾರತ-ಇಂಗ್ಲೆಂಡ್ 4ನೇ ಟೆಸ್ಟ್​: ಪೂಜಾರ ಭರ್ಜರಿ ಶತಕ: ಟೀಂ ಇಂಡಿಯಾ 273ಕ್ಕೆ ಆಲೌಟ್

news18
Updated:August 31, 2018, 11:13 PM IST
ಭಾರತ-ಇಂಗ್ಲೆಂಡ್ 4ನೇ ಟೆಸ್ಟ್​: ಪೂಜಾರ ಭರ್ಜರಿ ಶತಕ: ಟೀಂ ಇಂಡಿಯಾ 273ಕ್ಕೆ ಆಲೌಟ್
news18
Updated: August 31, 2018, 11:13 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ಭಾರತ ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಮೊಯೀನ್ ಅಲಿ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 273 ರನ್​ಗೆ ಆಲೌಟ್ ಆಗಿದೆ. ಭಾರತ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಚೇತೇಶ್ವರ್ ಪೂಜಾರ ಅಜೇಯ 132 ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿ ಭಾರತ 27 ರನ್​​ಗಳ ಮುನ್ನಡೆ ಸಾಧಿಸಿದೆ. ಬಳಿಕ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 6 ರನ್ ಕಲೆಹಾಕಿದೆ.

ಇಂದು 2ನೇ ದಿನದ ಆರಂಭದಲ್ಲೇ ರಾಹುಲ್(19) ಹಾಗೂ ಧವನ್(23) ವಿಕೆಟ್ ಕಳೆದುಕೊಂಡಿತಾದರು, ಬಳಿಕ ಒಂದಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಎಚ್ಚರಿಕೆ ಆಟ ಪ್ರದರ್ಶಿಸಿದರು. ಈ ಜೋಡಿ 3 ವಿಕೆಟ್​ಗೆ 92 ರನ್​ಗಳ ಜೊತೆಯಾಟ ನೀಡಿದರು. ಆದರೆ 46 ರನ್ ಬಾರಿಸಿರುವಾಗ ಕೊಹ್ಲಿ ಕುರ್ರನ್​ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರೆ, ಬಂದ ಬೆನ್ನಲ್ಲೆ ರಹಾನೆ ಕೂಡ ಕೇವಲ 12 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಔಟ್ ಆಗಿ ಆಘಾತ ನೀಡಿದರು. ರಿಷಭ್ ಪಂತ್ ಶೂನ್ಯಕ್ಕೆ ಔಟ್ ಆದರೆ, ಹಾರ್ದಿಕ್ ಪಾಂಡ್ಯ 4, ಆರ್. ಅಶ್ವಿನ್ 1, ಮೊಹಮ್ಮದ್ ಶಮಿ 0, ಇಶಾಂತ್ ಶರ್ಮಾ 14 ರನ್​ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಕೊನೆಯಲ್ಲಿ ಜಸ್​​ಪ್ರೀತ್ ಬುಮ್ರಾ 6 ಗಳಿಸಿ ಔಟ್ ಆಗುವ ಮೂಲಕ ಭಾರತ 27 ರನ್​ಗಳ ಮುನ್ನಡೆಯೊಂದಿಗೆ 273 ರನ್​​ಗಳಿಸಿ ಆಲೌಟ್ ಆಯಿತು. ಆದರೆ ಚೇತೇಶ್ವರ್ ಪೂಜಾರ ಶತಕ ಬಾರಿಸಿ ಕ್ರೀಸ್​ಗೆ ಕಚ್ಚಿ ನಿಂತಿದ್ದೇ ತಂಡದ ಸ್ಕೋರ್ 273 ತಲುಪಲು ನೆರವಾಯಿತು. 257 ಬೌಲ್​ಗಳಲ್ಲಿ ಪೂಜಾರ 132 ರನ್ ಬಾರಿಸಿ ಅಜೇಯರಾಗಿ ಉಳಿದರು.

ಇಂಗ್ಲೆಂಡ್ ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಯೀನ್ ಅಲಿ 5 ವಿಕೆಟ್ ಕಿತ್ತು ಮಿಂಚಿದರೆ ಸ್ಟುವರ್ಟ್​ ಬ್ರಾಡ್ 3, ಸ್ಯಾಮ್ ಕುರ್ರನ್ ಹಾಗೂ ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್ (ಮೊದಲ ಇನ್ನಿಂಗ್ಸ್​): (ಸ್ಯಾಮ್ ಕುರ್ರನ್ 78, ಮೊಯೀನ್ ಅಲಿ 40, ಜಸ್​ಪ್ರೀತ್ ಬುಮ್ರಾ 46/3, ಇಶಾಂತ್ ಶರ್ಮಾ 26/2)

ಭಾರತ (ಮೊದಲ ಇನ್ನಿಂಗ್ಸ್​​): (ಚೇತೇಶ್ವರ ಪೂಜಾರ 132*, ವಿರಾಟ್ ಕೊಹ್ಲಿ 46, ಮೊಯೀನ್ ಅಲಿ 62/5, ಸ್ಟುವರ್ಟ್​ ಬ್ರಾಡ್ 63/3)
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ