ಇಂಗ್ಲೆಂಡ್ ದಾಳಿಗೆ ಗೋಡೆಯಾಗಿ ಎದೆಯೊಡ್ಡಿ ನಿಂತ ಪೂಜಾರ..!

news18
Updated:September 1, 2018, 2:44 PM IST
ಇಂಗ್ಲೆಂಡ್ ದಾಳಿಗೆ ಗೋಡೆಯಾಗಿ ಎದೆಯೊಡ್ಡಿ ನಿಂತ ಪೂಜಾರ..!
news18
Updated: September 1, 2018, 2:44 PM IST
ನ್ಯೂಸ್ 18 ಕನ್ನಡ

ಸೌಂತಾಪ್ಟನ್​​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಆಟಕ್ಕೆ ಆಂಗ್ಲರು ಥಂಡಾ ಹೊಡೆದಿದ್ದಾರೆ. ಮೋಯಿನ್ ಅಲಿ ದಾಳಿಗೆ ಟೀಂ ಇಂಡಿಯಾದ ಅರ್ಧ ಬ್ಯಾಟಿಂಗ್ ಪಡೆಯೇ ಪೆವಿಲಿಯನ್ ಸೇರಿದರೆ, ಏಕಾಂಗಿಯಾಗಿ ತನ್ನ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಚೇತೇಶ್ವರ್ ಕ್ರಿಕೆಟ್ ಜನಕರಿಗೆ ಬ್ಯಾಟಿಂಗ್ ಪಾಠ ಹೇಳಿಕೊಟ್ಟರು.

ಎರಡನೇ ದಿನವಾದ ನಿನ್ನೆ ಭಾರತ 2 ವಿಕೆಟ್ ಉರುಳಿದ ಬಳಿಕ ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಕಟ್ಟುವ ಕಾರ್ಯಕ್ಕೆ ಕೈ ಹಾಕಿದರು. ಹೀಗೆ ಕೊಹ್ಲಿ ಪೂಜಾರ ಜೊತೆಗೂಡಿ ಇನ್ನಿಂಗ್ಸ್ ಕಟ್ಟುತ್ತಿರುವಾಗ 46ರನ್​​ಗೆ ಸ್ಯಾಮ್ ಕುರ್ರನ್ ಬೌಲಿಂಗ್​ನಲ್ಲಿ ಕೊಹ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ 92ರನ್​ಗಳ ಜೊತೆಯಾಟ ಅಂತ್ಯವಾಯಿತು. ಕೊಹ್ಲಿ ಔಟಾದ ಬೆನ್ನಲ್ಲೇ ರಹಾನೆ ಪೆವಿಲಿಯನ್ ಸೇರಿದ್ದಾಗ ಪೂಜಾರ ಏಕಾಂಗಿಯಾಗಿ ಒಂದೆಡೆ ಕ್ರೀಸ್​​ನಲ್ಲಿ ರನ್ ಕಲೆಹಾಕುತ್ತ ಹೊರಟರು. ಮತ್ತೊಂದೆಡೆ 5 ವಿಕೆಟ್ ಕಬಳಿಸಿದ ಮೋಯಿನ್ ಅಲಿ ಟೀಂ ಇಂಡಿಯಾಕ್ಕೆ ಕಂಠಕವಾದರು. ಭಾರತ 195 ರನ್​​ಗೆ 8 ವಿಕೆಟ್ ಕಳೆದುಕೊಂಡಿತು. ಇಂತಹ ಸಂದರ್ಭದಲ್ಲಿ ಬಾಲಂಗೋಚಿಗಳ ನಡುವೆ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾರ ಟೆಸ್ಟ್ ಕ್ರಿಕೆಟ್​​ನಲ್ಲಿ ಅತ್ಯಮೂಲ್ಯವಾದ ಶತಕ ಸಿಡಿಸಿದರು. ಇದು ಚೇತೇಶ್ವರ್​ನ​ 15ನೇ ಹಾಗೂ ಇಂಗ್ಲೆಂಡ್ ವಿರುದ್ಧ 5ನೇ ಶತಕವಾಗಿದೆ.

ತಂಡದ ಒಟ್ಟಾರೆ ಶೇಕಡಾ 51 ರಷ್ಟು ಎಸೆತಗಳನ್ನು ಎದುರಿಸಿದ ಪೂಜಾರ ತನ್ನ ಕಲಾತ್ಮಕ ಬ್ಯಾಟಿಂಗ್ ಹಾಗೂ ತಾಳ್ಮೆಗೆ ಸಾಕ್ಷಿಯಂತೆ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮವಾಗಿ ಬೂಮ್ರಾ ಔಟಾದರೆ ಹೊರತು ಪೂಜಾರ ಔಟಾಗಲಿಲ್ಲ. 257 ಎಸೆತಗಳಲ್ಲಿ 16 ಬೌಂಡರಿ ಜೊತೆಗೆ ಅಜೇಯ 132 ರನ್ ಕಲೆಹಾಕಿ ಟೀಂ ಇಂಡಿಯಾಗೆ 27 ರನ್​ಗಳ ಮುನ್ನಡೆ ತಂದುಕೊಟ್ಟರು. ಭಾರತ 273 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ 6 ರನ್ ಕಲೆಹಾಕಿದ್ದು ಇನ್ನೂ 21 ರನ್​​ಗಳ ಹಿನ್ನೆಡೆಯಲ್ಲಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...