ವೈರಲ್​: ಸಾನಿಯಾ ಮಿರ್ಜಾ ಪಿಟಿ ಉಷಾ ಆದಾಗ; ಆಂಧ್ರಪ್ರದೇಶದಲ್ಲೊಂದು ಎಡವಟ್ಟು

ರಾಷ್ಟ್ರೀಯಾ ಕ್ರೀಡಾದಿನದಂದು ವಿಶಾಖಪಟ್ಟಣದಲ್ಲಿ ಕಂಡು ಬಂದ ಪೋಸ್ಟರ್​

ರಾಷ್ಟ್ರೀಯಾ ಕ್ರೀಡಾದಿನದಂದು ವಿಶಾಖಪಟ್ಟಣದಲ್ಲಿ ಕಂಡು ಬಂದ ಪೋಸ್ಟರ್​

ಕ್ರೀಡಾ ದಿನವಾದ ನಿನ್ನೆ ಕ್ರೀಡಾಪಟುಗಳ ದೊಡ್ಡ ದೊಡ್ಡ ಪೋಸ್ಟರ್​ ಅನ್ನು ವಿಶಾಖಪಟ್ಟಣದ ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿತ್ತು. ಅದರಲ್ಲಿ ಬೀಚ್​ ರಸ್ತೆಯ ಸಬ್​ಮೆರೀನಾ ಬಳಿ ಹಾಕಿರುವ ಪೋಸ್ಟ್​ವೊಂದು ನಗೆಪಾಟಲಿಗೆ ಇಡಾಗಿದೆ.

  • Share this:

ವಿಶಾಖಪಟ್ಟಣಂ (ಆ.30): ಸಾನಿಯಾಮಿರ್ಜಾ, ಪಿವಿ ಸಿಂಧು, ಸೈನಾ ನೆಹ್ವಾಲ್​ರಂತಹ ಅದ್ಭುತ ಕ್ರೀಡಾ ಪ್ರತಿಭೆಗಳನ್ನು ನೀಡಿದ ರಾಜ್ಯ ಆಂಧ್ರಪ್ರದೇಶ. ಆದರೆ ಈ ಆಂಧ್ರಪ್ರದೇಶ ಸರ್ಕಾರದ ಅಧಿಕಾರಿಗಳು ಮಾಡಿರುವ ಎಡವಟ್ಟು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕ್ರೀಡಾ ದಿನವಾದ ನಿನ್ನೆ ಕ್ರೀಡಾಪಟುಗಳ ದೊಡ್ಡ ದೊಡ್ಡ ಪೋಸ್ಟರ್​ ಅನ್ನು ವಿಶಾಖಪಟ್ಟಣದ ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿತ್ತು. ಅದರಲ್ಲಿ ಬೀಚ್​ ರಸ್ತೆಯ ಸಬ್​ಮೆರೀನಾ ಬಳಿ ಹಾಕಿರುವ ಪೋಸ್ಟ್​ವೊಂದು ನಗೆಪಾಟಲಿಗೆ ಇಡಾಗಿದೆ.

ಸಾನಿಯಾ ಮಿರ್ಜಾ ಭಾವ ಚಿತ್ರ ಹಾಕಿ ಅದಕ್ಕೆ ಪಿಟಿ ಉಷಾ ಹೆಸರನ್ನು ಬರೆಯಲಾಗಿದೆ. ಹಿಂದೆ ಆಂಧ್ರಪ್ರದೇಶದಲ್ಲಿಯೇ ನೆಲೆಸಿದ್ದ, ತೆಲಂಗಾಣ ರಾಯಭಾರಿಯಾಗಿರುವ ಸಾನಿಯಾ ಮಿರ್ಜಾ ಯಾರೆಂಬುದು ತಿಳಿಯದೇ ಇಂತಹ ಎಡವಟ್ಟು ನಡೆಯಿತೆ ಎಂಬ ಪ್ರಶ್ನೆ ಮೂಡಿದೆ.

ಇದನ್ನು ಓದಿ: ಟ್ವಿಟ್ಟರ್​ನಲ್ಲಿ ಫೋಟೋ ಹಂಚಿಕೊಂಡು ಈ ಪಾಟಿ ಟ್ರೋಲ್ ಆದ ರವಿಶಾಸ್ತ್ರಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ಪ್ರಮಾದವಾಗಿದ್ದು, ಈ ಬಗ್ಗೆ ತಪ್ಪನ್ನು ಸರಿಪಡಿಸಲು ಮುಂದಾಗದ ಅಧಿಕಾರಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

First published: