• Home
  • »
  • News
  • »
  • sports
  • »
  • PT Usha: 'ಓಟದ ರಾಣಿ' ಹೆಗಲ ಮೇಲೆ ಮತ್ತೊಂದು ಜವಾಬ್ದಾರಿ, ಭಾರತ ಒಲಿಂಪಿಕ್ ಸಂಸ್ಥೆ ಮೊದಲ ಮಹಿಳಾ ಅಧ್ಯಕ್ಷೆಯಾದ ಪಿಟಿ ಉಷಾ

PT Usha: 'ಓಟದ ರಾಣಿ' ಹೆಗಲ ಮೇಲೆ ಮತ್ತೊಂದು ಜವಾಬ್ದಾರಿ, ಭಾರತ ಒಲಿಂಪಿಕ್ ಸಂಸ್ಥೆ ಮೊದಲ ಮಹಿಳಾ ಅಧ್ಯಕ್ಷೆಯಾದ ಪಿಟಿ ಉಷಾ

ಪಿ.ಟಿ ಉಷಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ ನೂತನ ಅಧ್ಯಕ್ಷೆ

ಪಿ.ಟಿ ಉಷಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ ನೂತನ ಅಧ್ಯಕ್ಷೆ

ಪಿ.ಟಿ ಉಷಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ)ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ

  • Share this:

ದಿಗ್ಗಜ ಅಥ್ಲೀಟ್​ ಪಿ.ಟಿ. ಉಷಾ (PT Usha) ಅವರ ಹೆಸರು ಬಂದಾಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಒಲಿಂಪಿಕ್ಸ್​ ( Olympic). ಒಮ್ಮೆ ತಲೆಯಲ್ಲಿಟ್ಟುಕೊಂಡ ಗುರಿಯನ್ನು ತಲುಪುವವರೆಗೂ ಅವರು ಹಿಂದೆ ಹೆಜ್ಜೆ ಇಡುವುದಿಲ್ಲ. 1964ರ ಜೂನ್​ 27ರಂದು ಕೇರಳದಲ್ಲಿ (Kerala) ಜನಿಸಿದ ಪಿಲವುಲ್ಲಕಂಡಿ ತೆಕ್ಕಪರಂಬಿಲ್ ಉಷಾ ಉರುಫ್​ (Pilavullakandi Thekkeparambil Usha) ಪಿ.ಟಿ. ಉಷಾ ಬಾಲ್ಯದಲ್ಲಿ ಕಡು ಬಡತನದಲ್ಲಿ ಬೆಳೆದರು. ಆದರೆ ಒಲಂಪಿಕ್ಸ್​ನಲ್ಲಿ ಇವರು ಮಾಡಿದ ಸಾಧನೆ ದೇಶಕ್ಕಾಗಿ ನೀಡಿದ ಕೊಡುಗೆ ಅಪಾರ, ಸದ್ಯ ಪಿ.ಟಿ ಉಷಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ) (Indian Olympic Association) (IOA)ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.


400 ಮೀ ಹರ್ಡಲ್ಸ್ ಫೈನಲ್‌ನಲ್ಲಿ ಜಿಂಕೆಯಂತೆ ಓಡಿದ್ದ ಪಿ.ಟಿ. ಉಷಾ


58 ವರ್ಷ ವಯಸ್ಸಿನ ಪಿಟಿ ಉಷಾ ಅವರು ಅನೇಕ ಏಷ್ಯನ್ ಗೇಮ್ಸ್ ಆಡಿ ಚಿನ್ನದ ಪದಕ ಗೆದ್ದಿದ್ದಾರೆ. 1984 ಲಾಸ್ ಏಂಜಲೀಸ್​​ನ ಒಲಿಂಪಿಕ್ಸ್​​ನಲ್ಲಿ 400 ಮೀ ಹರ್ಡಲ್ಸ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದರು. ಸುಮಾರು  ಎರಡು ದಶಕಗಳ ಕಾಲ ಭಾರತ ಮತ್ತು ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ್ದ ಅವರು 2000ನೇ ಇಸವಿಯಲ್ಲಿ ಹಲವು ಪದಕಗಳೊಂದಿಗೆ ನಿವೃತ್ತರಾಗಿದ್ದರು.




ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ ಅವಿರೋಧವಾಗಿ ಆಯ್ಕೆಯಾದ ಪಿ.ಟಿ. ಉಷಾ


ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ನಿವೃತ್ತ ಎಸ್‌ಸಿ ನ್ಯಾಯಾಧೀಶ ಎಲ್. ನಾಗೇಶ್ವರ ರಾವ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಚುನಾವಣೆಯಲ್ಲಿ ಪಿ.ಟಿ. ಉಷಾ ಅವರು ಅವಿರೋಧವಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ) ಆಗಿ ಆಯ್ಕೆಯಾಗಿದರು.


ಡಿಸೆಂಬರ್ 2021 ರಲ್ಲಿಯೇ ನಡೆಯಬೇಕಿದ್ದ ಚುನಾವಣೆ


ದೀರ್ಘಕಾಲದಿಂದ ಐಒಸಿ ಆಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೆ ಇದೀಗ ಪಿ.ಟಿ. ಉಷಾ ಅವರನ್ನು ನೇಮಕಗೊಳಿಸುವ ಮೂಲಕ ಎಲ್ಲಾ ರೀತಿಯ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ಒಂದು ವೇಳೆ ಈ ತಿಂಗಳು ಚುನಾವಣೆಹೋಗಿದ್ದರೆ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಸ್ಥಾನವನ್ನು ಅಮಾನತು ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿತ್ತು. ಅಷ್ಟಕ್ಕೂ ಈ ಚುನಾವಣೆ ಡಿಸೆಂಬರ್ 2021 ರಲ್ಲಿಯೇ ನಡೆಯಬೇಕಾಗಿತ್ತು.




ಆದರೆ ಕಳೆದ ತಿಂಗಳ ಕೊನೆಯಲ್ಲಿ ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಯ ನೂತನ ಅಧ್ಯಕ್ಷರಾಗಿ ಪಿಟಿ ಉಷಾ ಅವರು ಆಯ್ಕೆಯಾದರು. ಅಲ್ಲದೇ ಐಒಎ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಿಟಿ ಉಷಾ ಅವರು ಪಾತ್ರರಾಗಿದ್ದಾರೆ.


ಜುಲೈನಲ್ಲಿ ಭಾರತೀಯ ಜನತಾ ಪಕ್ಷದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಉಷಾ ವಿರುದ್ಧ ಯಾರೂ ಕಣಕ್ಕಿಳಿಯಲು ಸಿದ್ಧರಿರಲಿಲ್ಲ.


ಪಯ್ಯೋಲಿ ಎಕ್ಸ್‌ಪ್ರೆಸ್' ಎಂದು ಗುರುತಿಸಿಕೊಂಡಿರುವ ಪಿ.ಟಿ. ಉಷಾ


'ಪಯ್ಯೋಲಿ ಎಕ್ಸ್‌ಪ್ರೆಸ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಪಿ.ಟಿ. ಉಷಾ ಸದ್ಯ ರಾಜ್ಯಸಭೆ ಸದಸ್ಯೆಯೂ ಹೌದು, ಕಳೆದ ಜುಲೈನಲ್ಲಿ ರಾಜ್ಯಸಭೆಗೆ ಅವರನ್ನು ಕೇಂದ್ರ ಸರ್ಕಾರವೇ ನಾಮನಿರ್ದೇಶನ ಮಾಡಿತ್ತು.




95 ವರ್ಷದ ಇತಿಹಾಸದಲ್ಲಿಯೇ ಮೊದಲ ಬಾರಿಗೆ IOA ಮುಖ್ಯಸ್ಥರಾದ ಪಿ.ಟಿ. ಉಷಾ ಅವರು, ಒಲಿಂಪಿಯನ್ ಮತ್ತು ಮೊದಲ ಅಂತರರಾಷ್ಟ್ರೀಯ ಪದಕ ಗೆದ್ದಿದ್ದಾರೆ.


ಇದನ್ನೂ ಓದಿ: 1984ರ ಒಲಿಂಪಿಕ್ಸ್​ನಲ್ಲಿ ಪಿಟಿ ಉಷಾ ಮೆಡಲ್ ಮಿಸ್ ಮಾಡಿಕೊಳ್ಳಲು ಗಂಜಿ ಕಾರಣವಾಯ್ತಾ?


ಮಹಾರಾಜ ಯಾದವೀಂದ್ರ ಸಿಂಗ್ ಬಳಿಕ ಐಒಎ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಮೊದಲ ಕ್ರೀಡಾಪಟು ಎಂಬ ಶ್ರೇಯವೂ ಉಷಾ ಅವರಿಗಿದೆ. 1938 ರಿಂದ1960ರ ಅವಧಿಯಲ್ಲಿ ಯಾದವೀಂದ್ರ ಸಿಂಗ್ ಅಧ್ಯಕ್ಷ ಸ್ಥಾನ ನಿಭಾಯಿಸಿದ್ದರು. ಕ್ರಿಕೆಟಿಗರಾಗಿದ್ದ ಅವರು 1934ರಲ್ಲಿ ಟೆಸ್ಟ್ ಪಂದ್ಯವೊಂದನ್ನು ಆಡಿದ್ದರು.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು