IPL​ vs PSL: ಐಪಿಎಲ್​ನ ಒಬ್ಬ ಆಟಗಾರನಿಗೆ ಸಿಗುವ ಮೊತ್ತಕ್ಕೆ ಇಡೀ ಪಾಕ್ ತಂಡವನ್ನೇ ಖರೀದಿಸಬಹುದು..!

ಪರ್ಯಾಯ ಲೀಗ್ ಎಂಬ ಘೋಷಣೆಯೊಂದಿಗೆ ಆರಂಭವಾದ ಪಾಕಿಸ್ತಾನ್ ಕ್ರಿಕೆಟ್​ ಲೀಗ್​ನ ಮುಂದಿನ ವರ್ಷದಿಂದ  ನಡೆಯಲಿದೆಯೇ ಎಂಬುದು ಕೂಡ ಈ ವರ್ಷದ ಆದಾಯವನ್ನು ಅವಲಂಭಿಸಿ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ.

zahir | news18
Updated:January 9, 2019, 6:53 PM IST
IPL​ vs PSL: ಐಪಿಎಲ್​ನ ಒಬ್ಬ ಆಟಗಾರನಿಗೆ ಸಿಗುವ ಮೊತ್ತಕ್ಕೆ ಇಡೀ ಪಾಕ್ ತಂಡವನ್ನೇ ಖರೀದಿಸಬಹುದು..!
ಸಾಂದರ್ಭಿಕ ಚಿತ್ರ
zahir | news18
Updated: January 9, 2019, 6:53 PM IST
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್​ನ 12ನೇ ಆವೃತ್ತಿಯ​ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಎಲ್ಲೆಡೆ ಕ್ರಿಕೆಟ್ ಕಾವು ಏರ ತೊಡಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ ಅನ್ನು ಭಾರತದಂತೆ ಅತ್ತ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳೂ ಎದುರು ನೋಡುತ್ತಿದ್ದಾರೆ. ಈ ಹಿಂದೆ ಐಪಿಎಲ್​ನ ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಇದು ಕೂಡ ಪಾಕ್​ನ ಮೂಲೆ ಮೂಲೆಯಲ್ಲೂ ಇಂಡಿಯನ್ ಪ್ರೀಮಿಯರ್​ ಲೀಗ್​​ ವಿಜೃಂಭಿಸಲು ಒಂದು ಕಾರಣ.

ಆ ಬಳಿಕ ದೇಶದ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ಐಪಿಎಲ್​ನಿಂದ ಪಾಕ್​ ಕ್ರಿಕೆಟಿಗರಿಗೆ ನಿರ್ಬಂಧ ಹೇರಲಾಯಿತು. ಹೀಗಾಗಿ ಐಪಿಎಲ್​ಗೆ ಪರ್ಯಾಯವಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ 'ಪಾಕಿಸ್ತಾನ್ ಸೂಪರ್ ಲೀಗ್'​ ಅನ್ನು ಪ್ರಾರಂಭಿಸಿತ್ತು. ಆದರೆ ಐಪಿಎಲ್​ನ ಮನರಂಜನೆ ಮತ್ತು ಸ್ಟಾರ್ ಆಟಗಾರರ ಮುಂದೆ ಪಿಎಸ್​ಎಲ್​ ಹೇಳ ಹೆಸರಿಲ್ಲದಂತೆ ಮಂಕಾಯಿತು.

ಈಗಲೂ ಸಹ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಪಿಎಸ್​ಎಲ್​ ಅನ್ನು ಜನಪ್ರಿಯಗೊಳಿಸಲು ಹೆಣಗಾಡುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಆಟಗಾರರನ್ನು ಕರೆ ತರಲು ಸಕಲ ಪ್ರಯತ್ನವನ್ನು ಮಾಡುತ್ತಿದೆ. ಒಂದು ಮೂಲದ ಪ್ರಕಾರ ಪಾಕಿಸ್ತಾನದ ಕ್ರಿಕೆಟ್​ ಪ್ರೇಮಿಗಳು ಪಿಎಸ್​ಎಲ್​ಗಿಂತ ಐಪಿಎಲ್​ ಪಂದ್ಯಗಳನ್ನು ಹೆಚ್ಚು ವೀಕ್ಷಿಸುತ್ತಿದ್ದಾರೆ.​ ಇದು ಕೂಡ ಪಿಎಸ್​ಎಲ್​ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಐಪಿಎಲ್​ಗೆ ಪರ್ಯಾಯವಾಗಿ ಹುಟ್ಟಿಕೊಂಡ ತನ್ನ ನೆಲದ ಲೀಗ್​ ಅನ್ನು ಐಪಿಎಲ್​ ಸಂದರ್ಭದಲ್ಲಿ ಏರ್ಪಡಿಸಲು ಮುಂದಾಗುತ್ತಿಲ್ಲ ಎಂಬ ಮಾತುಗಳಿವೆ.

ಆರಂಭದಲ್ಲಿ ಒಂದಷ್ಟು ಸದ್ದು ಸುದ್ದಿ ಮಾಡಿದ್ದ ಪಿಎಸ್​ಎಲ್ ಫ್ರಾಂಚೈಸಿಗಳು ಈಗ ತಂಡಕ್ಕಾಗಿ ಬಂಡವಾಳ ಹೂಡಲು ಹಿಂದೆ ಮುಂದೆ ನೋಡುತ್ತಿದ್ದಾರಂತೆ. ಎಲ್ಲಿಯವರೆಗೆ ಪಾಕಿಸ್ತಾನ್ ಸೂಪರ್​ ಲೀಗ್ ಹೈರಾಣವಾಗಿದೆ ಎಂದರೆ ಐಪಿಎಲ್​ನಲ್ಲಿ ಒಬ್ಬ ಆಟಗಾರನಿಗೆ ನೀಡುವ ಮೊತ್ತದಲ್ಲಿ ಪಿಎಸ್​ಎಲ್​ನ ಒಂದು ತಂಡವನ್ನೇ ಖರೀದಿಸಬಹುದು. ಅಚ್ಚರಿಯಾದರೂ ಇದರಲ್ಲಿ ಸತ್ಯಾಂಶವಿದೆ. ಏಕೆಂದರೆ 2019 ರ ಐಪಿಎಲ್​ ಹರಾಜಿನಲ್ಲಿ ಜಯದೇವ್ ಉನಾದ್ಕತ್ ಗರಿಷ್ಠ ಬೆಲೆಗೆ ಮಾರಾಟವಾಗಿದ್ದರು. ಅವರಿಗೆ ನೀಡಲಾದ ಒಟ್ಟು ಮೊತ್ತದಲ್ಲಿ ಪಿಎಸ್​ಎಲ್​ನ ಒಂದು ತಂಡವನ್ನು ಖರೀದಿಸಬಹುದು.

ಇದನ್ನೂ ಓದಿ: IPL​ vs PSL: ಐಪಿಎಲ್​ನ ಒಬ್ಬ ಆಟಗಾರನಿಗೆ ಸಿಗುವ ಮೊತ್ತಕ್ಕೆ ಇಡೀ ಪಾಕ್ ತಂಡವನ್ನೇ ಖರೀದಿಸಬಹುದು..!

ರಾಜಸ್ತಾನ್ ರಾಯಲ್ಸ್​ ತಂಡವು ಎಡಗೈ ವೇಗಿ ಉನಾದ್ಕತ್​ರನ್ನು 8.40 ಕೋಟಿಗೆ ಖರೀದಿ ಮಾಡಿತ್ತು. ಪಾಕಿಸ್ತಾನದ ಸೂಪರ್​ ಲೀಗ್​ನಲ್ಲಿ ಕಾಣಿಸಿಕೊಳ್ಳುವ ಹೆಚ್ಚಿನ ತಂಡಗಳು ಹೂಡುವ ಒಟ್ಟು ಮೊತ್ತ ಕೂಡ 8 ಕೋಟಿಯಿಂದ 20 ಕೋಟಿಯಷ್ಟು ಮಾತ್ರ ಎಂದು ಹೇಳಲಾಗಿದೆ. ವಿರಾಟ್ ಕೊಹ್ಲಿ, ಧೋನಿಯಂತಹ ಭಾರತದ ಸ್ಟಾರ್​ ಆಟಗಾರಿಗೆ ನೀಡುವ ಮೊತ್ತಕ್ಕಿಂತ ಕಡಿಮೆಯಲ್ಲಿದೆ ಪಿಎಸ್​ಎಲ್​ನ ಒಂದು ತಂಡದ ಒಟ್ಟು ಹೂಡಿಕೆ.

ಹಾಗೆಯೇ 2019ರ ಐಪಿಎಲ್​ ಹರಾಜಿನಲ್ಲಿ 60 ಆಟಗಾರರಿಗೆ 106.80 ಕೋಟಿ ವ್ಯಯಿಸಲಾಗಿದೆ. ಆದರೆ ಪಿಎಸ್​ಎಲ್​ನ ಒಟ್ಟು ತಂಡಗಳ ಮೊತ್ತ ನೂರು ಕೋಟಿಯನ್ನು ದಾಟುವುದಿಲ್ಲ ಎಂಬುದೇ ಅಚ್ಚರಿ. ಅಂದರೆ ಐಪಿಎಲ್ ಮತ್ತು ಪಿಎಸ್​ಎಲ್​ನ ಬಜೆಟ್​ಗಳಿಗೆ ಬಾನು ಮತ್ತು ಭೂಮಿಯಷ್ಟು ಅಜಗಜಾಂತರ ವ್ಯತ್ಯಾಸವಿದೆ.
Loading...

ಇದನ್ನೂ ಓದಿ: ಮನೆ ಖರೀದಿಸುವವರಿಗೆ ಶುಭ ಸುದ್ದಿ: ಮುಂದಿನ ತಿಂಗಳು ಮೋದಿ ಸರ್ಕಾರ ನೀಡಲಿದೆ ಸಿಹಿ ಸುದ್ದಿ

2019 ರಲ್ಲಿ ಪಾಕಿಸ್ತಾನ್​ ಸೂಪರ್​ ಲೀಗ್​ನಲ್ಲಿ ಪ್ರತಿ ತಂಡವು 1.2 ಮಿಲಿಯನ್ ಡಾಲರ್ (ಸುಮಾರು 8.64 ಕೋಟಿ)​ ಹೂಡಿಕೆ ಮಾಡಿದರೆ, ಇಂಡಿಯನ್ ಪ್ರೀಮಿಯರ್​ ಲೀಗ್​ನ ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಸುಮಾರು 80 ಕೋಟಿಯಷ್ಟು ಬಂಡವಾಳ ಹೂಡಿದ್ದಾರೆ. ಈ ಮೊತ್ತವು ಪಿಎಸ್​ಎಲ್​ಗಿಂತ 10 ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: ವೈರಲ್ ವೀಡಿಯೊ: ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಭವಿಷ್ಯ ನುಡಿದಿದ್ದ ಅನಿಲ್ ಕುಂಬ್ಳೆ..!

ಪರ್ಯಾಯ ಲೀಗ್ ಎಂಬ ಘೋಷಣೆಯೊಂದಿಗೆ ಆರಂಭವಾದ ಪಾಕಿಸ್ತಾನ್ ಕ್ರಿಕೆಟ್​ ಲೀಗ್​ನ ಮುಂದಿನ ವರ್ಷದಿಂದ  ನಡೆಯಲಿದೆಯೇ ಎಂಬುದು ಕೂಡ ಈ ವರ್ಷದ ಆದಾಯವನ್ನು ಅವಲಂಭಿಸಿ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ. ಮಾರ್ಚ್​ 23 ರಿಂದ ಆರಂಭವಾಗಲಿರುವ ಐಪಿಎಲ್​ ಅನ್ನು ಪಾಕ್​ ಕ್ರಿಕೆಟ್​ ಪ್ರೇಮಿಗಳು ಕೂಡ ಕಾತುರದಿಂದ ಕಾಯುತ್ತಿದ್ದು, ಇದರ ಪರಿಣಾಮ ಪಾಕ್​ ಪ್ರೀಮಿಯರ್ ಲೀಗ್ ಬೀಳಲಿದೆಯೇ ಎಂಬುದು ಮಾತ್ರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: ರೈಲ್ವೆ ನೇಮಕಾತಿ: ವಿವಿಧ ಹುದ್ದೆಗಳಿಗೆ 10ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ