ಫ್ರೋ ಕಬಡ್ಡಿ: ಯುಪಿ ಯೋಧಾ ಮಣಿಸಿದ ಬೆಂಗಳೂರಿಗೆ ಹ್ಯಾಟ್ರಿಕ್ ಜಯ

Vinay Bhat | news18
Updated:November 4, 2018, 2:59 PM IST
ಫ್ರೋ ಕಬಡ್ಡಿ: ಯುಪಿ ಯೋಧಾ ಮಣಿಸಿದ ಬೆಂಗಳೂರಿಗೆ ಹ್ಯಾಟ್ರಿಕ್ ಜಯ
ಬೆಂಗಳೂರು ಬುಲ್ಸ್​ ತಂಡದ ಆಟಗಾರ
  • News18
  • Last Updated: November 4, 2018, 2:59 PM IST
  • Share this:
ನ್ಯೂಸ್ 18 ಕನ್ನಡ

ಶನಿವಾರ ನಡೆದ ಬೆಂಗಳೂರು ಬುಲ್ಸ್​ ಹಾಗೂ ಯುಪಿ ಯೋಧಾ ನಡುವಣ ಪಂದ್ಯದಲ್ಲಿ ಬುಲ್ಸ್​ ತಂಡ 35-29 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 6ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್​​ನಲ್ಲಿ ಬುಲ್ಸ್​ ಹ್ಯಾಟ್ರಿಕ್ ಗೆಲುವು ತನ್ನದಾಗಿಸಿದೆ.

ಇದನ್ನೂ ಓದಿ: ಅಂಬಾಟಿ ಶಾಕ್; ಚುಟುಕು ಕ್ರಿಕೆಟ್​ಗೋಸ್ಕರ ಪ್ರಥಮ ದರ್ಜೆ ಕ್ರಿಕೆಟ್​ಗೆ ರಾಯುಡು ವಿದಾಯ

ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಬುಲ್ಸ್​ ತಂಡಕ್ಕೆ ನಾಯಕ ರೋಹಿತ್ ಕುಮಾರ್ ಅವರ ಅದ್ಭುತ ಆಟದಿಂದ ಮುನ್ನಡೆ ಸಾಧಿಸಲು ನೆರವಾಯಿತು. ರೋಹಿತ್ ಅವರು 14 ಅಂಕ ತಮ್ಮ ಖಾತೆಗೆ ಸೇರಿಸಿಕೊಂಡು ಗೆಲುವಿನ ರುವಾರಿಯಾದರು. ಮೊದಲಾರ್ಧದಲ್ಲಿ 14-17ರ ಹಿನ್ನಡೆಯಲ್ಲಿದ್ದ ಬುಲ್ಸ್​ ದ್ವಿತೀಯಾರ್ಧದಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿತು. ಯುಪಿ ತಂಡವನ್ನು ಆಲೌಟ್ ಬಲೆಗೆ ಬೀಳಿಸಿ 28-25ರ ಮುನ್ನಡೆ ಸಾಧಿಸಿತು. ಇದೇ ಗತಿಯನ್ನು ಕೊನೆಯ ವರೆಗೆ ಕಾಪಾಡುವಲ್ಲಿ ಯಶಸ್ವಿಯಾದ ಬೆಂಗಳೂರು ಬುಲ್ಸ್​ ಅಂತಿಮವಾಗಿ 35-29 ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದಕ್ಕೂ ಮೊದಲು ನಡೆದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡ ಪುಣೇರಿ ಪಲ್ಟನ್ ವಿರುದ್ಧ 31-22 ರಿಂದ ಗೆದ್ದು ಬೀಗಿತು.

First published: November 4, 2018, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading