Vinay BhatVinay Bhat
|
news18 Updated:January 6, 2019, 3:05 PM IST
Pic: Twitter
- News18
- Last Updated:
January 6, 2019, 3:05 PM IST
ಬೆಂಗಳೂರು: ಸೂಪರ್ ಸ್ಟಾರ್ ರೈಡರ್ ಪವನ್ ಶೇರಾವತ್ ಅವರ ಏಕಾಂಗಿ ಹೋರಾಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ 6ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪವನ್ ಅವರು 29 ಅಂಕ ಕಲೆಹಾಕುವ ಮೂಲಕ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ 38-33 ಪಾಯಿಂಟ್ಗಳ ಅಂತರದಲ್ಲಿ ಮಣಿಸಿ ಚೊಚ್ಚಲ ಬಾರಿಗೆ ಗೆದ್ದು ಬೀಗಿದೆ.
ಬೆಂಗಳೂರು ಬುಲ್ಸ್ ತಂಡ ಗೆದ್ದ ಖುಷಿಯಲ್ಲಿ ರಾಜ್ಯದ ಅನೇಕ ಗಣ್ಯರು ಶುಭಕೋರಿದ್ದು, ಈ ಸಲ ಕಮ್ ಸಮ್ದೇ ಎಂದು ಹೇಳಿದ್ದಾರೆ. ಅದರಲ್ಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು 'ಈ ಸಲ ಕಪ್ ನಮ್ದೆ, ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದರೆ.
ಅಂತೆಯೆ ಚಿತ್ರ ನಿರ್ದೇಶಕ ಸಿಂಪಲ್ ಸುನಿ ಅವರು ಕೂಡ ಟ್ವೀಟ್ ಮಾಡಿ 'ಕೊನೆಗೂ
ಈ ಸಲ ಕಪ್ ನಮ್ದಾಯ್ತು' ಎಂದು ಬರೆದುಕೊಂಡಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಬೆಂಗಳೂರು ಗೆಲುವಿಗೆ ಹಾಗೂ ಪವನ್ ಕುಮಾರ್ ಆಟವನ್ನು ಹಾಡಿಗೊಗಳಿದ್ದಾರೆ.
ಇದನ್ನೂ ಓದಿ: ಧೋನಿ ಅಥವಾ ಕೊಹ್ಲಿ: 'ಬೆಸ್ಟ್ ಕ್ಯಾಪ್ಟನ್' ಪ್ರಶ್ನೆಗೆ ರಾಹುಲ್-ಹಾರ್ದಿಕ್ ಉತ್ತರ ಕೇಳಿ ದಂಗಾದ ಕರಣ್
'ಈ ಸಲ ಕಮ್ ನಮ್ದೆ' ಹ್ಯಾಶ್ ಟ್ಯಾಗ್ ಎಲ್ಲ ಕಡೆ ವೈರಲ್ ಆಗುತ್ತಿದೆ. ಇನ್ನೇನು ಕೆಲವೆ ತಿಂಗಳುಗಳಲ್ಲಿ ಐಪಿಎಲ್ ಕೂಡ ಆರಂಭವಾಗುತ್ತಿದೆ. ಪ್ರೋ ಕಬಡ್ಡಿಯಲ್ಲಿ ಚೊಚ್ಚಲ ಬಾರಿಗೆ ಬೆಂಗಳೂರು ಗೆದ್ದರೆ, ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಐಪಿಎಲ್ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಲಿದೆ, ಐಪಿಎಲ್ನಲ್ಲು ಈ ಸಲ ಕಮ್ ನಮ್ದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
First published:
January 6, 2019, 2:55 PM IST