• Home
  • »
  • News
  • »
  • sports
  • »
  • Pro Kabaddi League: ನಾಳೆಯಿಂದ ಪ್ರೊ ಕಬಡ್ಡಿ ಲೀಗ್​ ಆರಂಭ; ಇಲ್ಲಿದೆ ವೇಳಾಪಟ್ಟಿ, ಸಮಯದ​ ಸಂಪೂರ್ಣ ವಿವರ

Pro Kabaddi League: ನಾಳೆಯಿಂದ ಪ್ರೊ ಕಬಡ್ಡಿ ಲೀಗ್​ ಆರಂಭ; ಇಲ್ಲಿದೆ ವೇಳಾಪಟ್ಟಿ, ಸಮಯದ​ ಸಂಪೂರ್ಣ ವಿವರ

ಪ್ರೊ ಕಬಡ್ಡಿ

ಪ್ರೊ ಕಬಡ್ಡಿ

Pro Kabaddi League: ಪ್ರೊ ಕಬ್ಬಡ್ಡಿ ಸೀಸನ್​ 9 2022 ಅಕ್ಟೋಬರ್‌ 7ರಂದು ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಪಂದ್ಯದ ವೇಳಾಪಟ್ಟಿ, ಸಯಮ ಎಲ್ಲದರ ಸಂಪೂರ್ಣ ವಿವರ.

  • Share this:

ಪ್ರೊ ಕಬಡ್ಡಿ ಲೀಗ್ (Pro Kabaddi League) 9ನೇ ಸೀಸನ್​ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಾಳೆಯಿಂದ ಭರ್ಜರಿ ಹಬ್ಬ ಆರಂಭವಾಗಲಿದೆ. ಹೌದು, ಸೀಸನ್​ 9ರ ಪ್ರೊ ಕಬಡ್ಡಿ ಲೀಗ್ ನಾಳೆಯಿಂದ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ಅದರಲ್ಲಿಯೂ ಮೊದಲ ದಿನವೇ ಬೆಂಗಳೂರು ಬುಲ್ಸ್ (Bengaluru Bulls) ತಂಡದ ಪಂದ್ಯ ಇರುವುದರಿಂದ ಮತ್ತಷ್ಟು ಕ್ರೇಜ್​ ಹೆಚ್ಚಿದ್ದು, ಕಬ್ಬಡ್ಡಿ (Kabaddi )ಪ್ರಿಯರಿಗೆ ಸಂತಸ ತಂದಿದೆ. ಬೆಂಗಳೂರು (Bengaluru) ಸೇರಿದಂತೆ ಮೂರು ನಗರಗಳಲ್ಲಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಗಳು ನಡೆಯಲಿವೆ. ಕಬ್ಬಡ್ಡಿ ಪಂದ್ಯಾವಳಿಯು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ. ಉಳಿದ ಸಂಪೂರ್ಣ ವಿರವ ಈ ಕೆಳಗಿನಂತಿದೆ.


ಪ್ರೊ ಕಬಡ್ಡಿ ಲೀಗ್​ ವೇಳಾಪಟ್ಟಿ:


ಕಳೆದ ಸೀಸನ್​ನ ಚಾಂಪಿಯನ್​ಗಳಾದ ದಬಾಂಗ್ ಡೆಲ್ಲಿ ಕೆಸಿ ಮತ್ತು ಯು ಮುಂಬಾ ಫೈಟ್‌ ಸೀಸನ್​ 9ರ ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿದೆ.  2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ಹಾಗೂ 3ನೇ ಪಂದ್ಯದಲ್ಲಿ ಯುಪಿ ಯೋಧಾಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಸೆಣಸಾಡಲಿದೆ. ಉಳಿದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ.ಉದ್ಘಾಟನಾ ದಿನವೇ ಬೆಂಗಳೂರು ಬುಲ್ಸ್  ತಂಡದ ಪಂದ್ಯ ಇರುವುದರಿಂದ ಟೂರ್ನಿಯು ಮತ್ತಷ್ಟು ಮಹತ್ವವನ್ನು ಪಡೆದುಕೊಂಡಿದೆ.ಕನ್ನಡದ ಕೂಸು ರಾಕೇಶ್ ಈಗ ನಮ್ಮವ ಎಂದು ರಾಕೇಶ್ ಗೌಡ ಅವರಿಗೆ ಬೆಂಗೂರು ಬುಲ್ಸ್ ತಂಡವು ಭರ್ಜರಿಯಾಗಿ ಸ್ವಾಗತಿಸಿದೆ. ಇನ್ನು, ಬುಲ್ಸ್ ತಂಡವನ್ನು ಈ ಬಾರಿ ಮಹೇಂದರ್‌ ಸಿಂಗ್‌ ಮುನ್ನೆಡೆಸಲಿದ್ದಾರೆ.ಪಂದ್ಯಾವಳಿಗಳು ಎಲ್ಲೆಲ್ಲಿ ನಡೆಯಲಿವೆ?:


ಸೀಸನ್‌ನ ಆರಂಬಿಕ ಪಂದ್ಯಗಳು ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಹಂತ  ಹೈದರಾಬಾದ್‌ನಲ್ಲಿ ಅಂತಿಮ ಹಂತಕ್ಕೆ ಆಕ್ಷನ್ ಶಿಫ್ಟ್ ಆಗುವ ಮೊದಲು ಪುಣೆಯ ಬಾಳೆವಾಡಿಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಅಂದರೆ  ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ (ಬೆಂಗಳೂರು), ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣ (ಪುಣೆ) ಮತ್ತು ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ (ಹೈದರಾಬಾದ್).


ಇದನ್ನೂ ಓದಿ: IND vs SA ODI: ಇಂದು ಭಾರತ-ಆಫ್ರಿಕಾ ಮೊದಲ ಏಕದಿನ ಪಂದ್ಯ, ಪ್ಲೇಯಿಂಗ್​ 11ನಲ್ಲಿ RCB ಸ್ಟಾರ್​ ಪ್ಲೇಯರ್​?


ಪ್ರೇಕ್ಷಕರಿಗೂ ಈ ಬಾರಿ ಅನುಮತಿ:


ಕಳೆದ ಸೀಸನ್​ ಕೋವಿಡ್​ ಭಯದಿಂದಾಗಿ ಬಯೋ ಬಬಲ್​ನಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ ಅಂದರೆ ಕಬ್ಬಡ್ಡಿ ಲೀಗ್​ನ 9ನೇ ಸೀಸನ್​ ಯಾವುದೇ ತೊಂದರೆ ಇಲ್ಲದೇ ಪ್ರೇಕ್ಷಕರ ನಡುವೆಯೇ ನಡೆಯಲಿದೆ.


ಲೈವ್​ ಸ್ಟ್ರೀಮಿಂಗ್​ ಮತ್ತು ಸಮಯ:


ಪ್ರೊ ಕಬಡ್ಡಿ ಸೀಸನ್ 9ರ ನೇರ ಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡದಲ್ಲಿ ವೀಕ್ಷಿಸಬಹುದು. ಲೈವ್ ಸ್ಟ್ರೀಮಿಂಗ್ Disney+HotStar ಮತ್ತು Jio TV ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಟ್ರಿಪಲ್ ಹೆಡರ್ ದಿನಗಳಲ್ಲಿ, ಮೊದಲ ಪಂದ್ಯವು ರಾತ್ರಿ 7:30ಕ್ಕೆ ಪ್ರಾರಂಭವಾಗುತ್ತದೆ, ಆದರೆ ಎರಡನೇ ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ 8:30ಕ್ಕೆ ಮತ್ತು 9:30ಕ್ಕೆ ಪ್ರಾರಂಭವಾಗುತ್ತವೆ . ಇತರ ದಿನಗಳಲ್ಲಿ , ಎರಡು ಪಂದ್ಯಗಳು ನಡೆಯಲಿದ್ದು ಮೊದಲನೆಯದು 7:30ಕ್ಕೆ ಮತ್ತು ಎರಡನೆಯದು ರಾತ್ರಿ 8:30ಕ್ಕೆ ಪ್ರಾರಂಭವಾಗುತ್ತದೆ.


ಇದನ್ನೂ ಓದಿ: Ajinkya Rahane: ರಹಾನೆ ಮನೆಗೆ ಹೊಸ ಅತಿಥಿ ಆಗಮನ, ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ


ಪ್ರೊ ಕಬಡ್ಡಿ-9ಕ್ಕೆ ಬೆಂಗಳೂರು ಬುಲ್ಸ್‌ ತಂಡ:


ರೈಡರ್‌: ವಿಕಾಸ್ ಖಂಡೋಲಾ, ಭರತ್, ನೀರಜ್ ನರ್ವಾಲ್, ಮೋರೆ ಜಿ.ಬಿ, ಹರ್ಮನ್‌ಜಿತ್ ಸಿಂಗ್, ನಾಗೇಶರ್ ಥಾರು, ಲಾಲ್ ಮೊಹಾರ್ ಯಾದವ್.
ಡಿಫೆಂಡರ್ಸ್‌: ಮಯೂರ್ ಕದಂ, ಮಹೇಂದರ್ ಸಿಂಗ್, ಆಮನ್, ಸೌರಭ್ ನಂದಲ್, ರಜನೀಶ್, ಯಶ್ ಹೂಡಾ, ವಿನೋದ್ ಲಚ್‌ಮಯ್ಯ ನಾಯ್ಕ್, ರೋಹಿತ್ ಕುಮಾರ್.
ಆಲ್​ರೌಂಡರ್​: ರಾಹುಲ್ ಕಾರ್ತಿಕ್‌, ಸಚಿನ್ ನರ್ವಾಲ್‌.

Published by:shrikrishna bhat
First published: