ಪ್ರೊ ಕಬ್ಬಡಿಯ(Pro Kabaddi) ಲೀಗ್ ಹಂತದ ಪಂದ್ಯಾವಳಿಗಳು)Matches) ಮುಕ್ತಾಯವಾಗಿದ್ದು ಯಾವ ಯಾವ ತಂಡಗಳು ಪ್ಲೇ ಆಫ್ಗೆ(Playoffs) ಪ್ರವೇಶಿಸಬಹುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.. ಅಷ್ಟೇ ಅಲ್ಲದೇ ಬೆಂಗಳೂರು(Bangalore) ಸಹ ಪ್ಲೇ ಆಫ್ಗೆ ತಲುಪಲಿದ್ಯಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಬೆಂಗಳೂರು ಬುಲ್ಸ್(Bengaluru Bulls) ತಂಡ ಉಳಿದ ಐದು ತಂಡಗಳ ಜೊತೆಗೆ ಪ್ಲೇ ಆಫ್ಗೆ ರೇಸ್ಗೆ ಎಂಟ್ರಿ ಕೊಟ್ಟಿದೆ.. ನಿನ್ನೆ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್,ಹರಿಯಾಣ ಸ್ಟೀಲರ್ಸ್, ಪುನೇರಿ ಪಲ್ಟನ್ ಗುಜರಾತ್ ಜೈಂಟ್ಸ್ ,ಜೈಪುರ್ ಪಿಂಕ್ ಪ್ಯಾಂಥರ್ಸ್, ಯು ಮುಂಬಾ ನಡುವೆ ನಡೆದ ಪಂದ್ಯದಲ್ಲಿ ಯಾವ ತಂಡ ಯಾವ ತಂಡವನ್ನು ಮಣಿಸಿ ಆಫ್ಗೆ ಎಂಟ್ರಿ ಪಡೆದುಕೊಂಡಿದ್ದೇ ಮಾಹಿತಿ ಇಲ್ಲಿದೆ.
ಪ್ಲೇ ಆಫ್ಗೆ ಎಂಟ್ರಿ ಕೊಟ್ಟ ಬೆಂಗಳೂರು ಬುಲ್ಸ್
ವಿವೋ ಪ್ರೋ ಕಬ್ಬಡಿ ಲೀಗ್ ನ ಕೊನೆಯ ಪಂದ್ಯಾವಳಿಗಳ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು.ಯಾವ ತಂಡ ಫೈನಲ್ ಪ್ರವೇಶಿಸಬಹುದು ಎಂಬುದಕ್ಕೆ ಸ್ಪಷ್ಟವಾದ ಉತ್ತರ ನೆನ್ನೆ ನಡೆದ ಪಂದ್ಯದಲ್ಲಿ ಸಿಕ್ಕಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹರಿಯಾಣ ಸ್ಟೀಲರ್ಸ್ ತಂಡವನ್ನು ಸೋಲಿಸುವ ಮೂಲಕ ಪ್ಲೇಆಫ್ ಭರವಸೆಯನ್ನು ಮುರಿದಿದೆ. ಹೀಗಾಗಿ ಗುಜರಾತ್ ಜೈಂಟ್ಸ್ ಯು ಮುಂಬಾ ತಂಡವನ್ನು ಸೋಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು.
ಜೈಪುರ ಮತ್ತು ಹರಿಯಾಣದ ಸೋಲಿನಿಂದಾಗಿ ಬೆಂಗಳೂರು ಬುಲ್ಸ್ ಕೂಡ ಪ್ಲೇಆಫ್ಗೆ ಅರ್ಹತೆ ಗಳಿಸಿತು, ನಂತರ ಪುಣೇರಿ ಪಲ್ಟನ್ ಜೈಪುರವನ್ನು ಸೋಲಿಸುವ ಮೂಲಕ ಪ್ಲೇಆಫ್ ತಲುಪಿದ ಕೊನೆಯ ತಂಡವಾಯಿತು.
ಇದನ್ನೂ ಓದಿ: ಕೊಹ್ಲಿ ತಮ್ಮ ಮನೆಗೆ ಬಂದಾಗ ಘಟನೆ ನೆನಪಿಸಿಕೊಂಡು ಭಾವುಕರಾದ ಸಿರಾಜ್
ಪ್ಲೇಆಫ್ಗೆ ಅರ್ಹತೆ ಪಡೆದ ತಂಡಗಳು
ಪಾಟ್ನಾ ಪೈರೇಟ್
ದಬಾಂಗ್ ದೆಹಲಿ ಕೆ.ಸಿ
ಯು ಪಿ ಯೋಧಾ
ಗುಜರಾತ್ ಜೈಂಟ್ಸ್
ಬೆಂಗಳೂರು ಬುಲ್ಸ್
ಪುಣೇರಿ ಪಲ್ಟನ್
ಕಬಡ್ಡಿ ಸೀಸನ್ 8 ರ ಫೈನಲ್ ಪಂದ್ಯವು ಫೆಬ್ರವರಿ 26 ರಂದು ನಡೆಯಲಿದ್ದು, ಇದರಲ್ಲಿ, 1ನೇ ಮತ್ತು 2ನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಸುತ್ತನ್ನು ಆಡಬೇಕಾಗಿಲ್ಲ..ಸೆಮಿ-ಫೈನಲ್ನಲ್ಲಿ ಯಾವ ತಂಡವು ಗೆಲ್ಲುತ್ತದೆಯೋ ಆ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸುತ್ತದೆ.
ಇದಲ್ಲದೇ 3ನೇ ಸ್ಥಾನದಿಂದ 6ನೇ ಸ್ಥಾನದಲ್ಲಿರುವ 4 ತಂಡಗಳು ಕ್ವಾರ್ಟರ್ ಫೈನಲ್ನಲ್ಲಿ ಪರಸ್ಪರ ಮುಖಾಮುಖಿಯಾಗಬೇಕು ಮತ್ತು ಸೋತ ತಂಡ ಪ್ಲೇಆಫ್ನಿಂದ ಹೊರಗುಳಿಯುತ್ತದೆ.
ಅಗ್ರಸ್ಥಾನದಲ್ಲಿಯೇ ಲೀಗ್ ಪಂದ್ಯ ಮುಗಿಸಿದ ಪಾಟ್ನಾ
ಭರ್ಜರಿ ಪ್ರದರ್ಶನ ನೀಡುತ್ತಿರುವ ಪಾಟ್ನಾ ಪೈರೇಟ್ಸ್ ತಂಡ ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಟೂರ್ನಿಯ 132ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮೂರು ಅಂಕಗಳಿಂದ ಮುಣಿಸಿ ಸ್ಥಾನ ಪಡೆಯುವ ಮೂಲಕ ಪ್ರೊ ಕಬಡ್ಡಿ ಲೀಗ್ ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.
ಫೆ.21 ರಂದು ಎಲಿಮಿನೇಟರ್ ಪಂದ್ಯ
ಇನ್ನು ಎಲಿಮಿನೇಟರ್ ಪಂದ್ಯ ಫೆಬ್ರವರಿ 21 ರಂದು ನಡೆಯಲಿದೆ, ಇದರಲ್ಲಿ ಮೂರನೇ ಸ್ಥಾನದಲ್ಲಿರುವ ಯುಪಿ ಯೋಧಾ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಪುಣೇರಿ ಪಲ್ಟಾನ್ ಅನ್ನು ಎದುರಿಸಲಿದೆ. ಆದರೆ ಎರಡನೇ ಎಲಿಮಿನೇಟರ್ನಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ಪರಸ್ಪರ ಮುಖಾಮುಖಿಯಾಗಲಿವೆ.
ಎಲಿಮಿನೇಟರ್-2 ಅನ್ನು ಗೆದ್ದ ತಂಡವು ಸೆಮಿಯಲ್ಲಿ ದಬಾಂಗ್ ದೆಹಲಿಯನ್ನ, ಎಲಿಮಿನೇಟರ್-1 ಗೆದ್ದ ತಂಡವು ಸೆಮಿಯಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಎದುರಿಸಲಿದೆ. ಇನ್ನು ಎರಡೂ ಸೆಮಿಫೈನಲ್ಗಳ ವಿಜೇತ ತಂಡಗಳು ಫೆಬ್ರವರಿ 25 ರಂದು ಪ್ರಶಸ್ತಿ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ
ಒಟ್ಟಾರೆ ಇಲ್ಲಿಯವರೆಗೆ ಪಾಟ್ನಾ ಪೈರೇಟ್ಸ್ ಮೂರು ಬಾರಿ ಪಿಕೆಎಲ್ ಪ್ರಶಸ್ತಿ ಗೆದ್ದಿದ್ದರೆ, ಜೈಪುರ ಪಿಂಕ್ ಪ್ಯಾಂಥರ್ಸ್, ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್ ಒಮ್ಮೆ ಟ್ರೋಫಿ ಎತ್ತಿ ಹಿಡಿದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ