Pro Kabaddi League: ಕಬಡ್ಡಿ ಪ್ರಿಯರಿಗೆ ಗುಡ್‌ ನ್ಯೂಸ್‌, 9ನೇ ಸೀಸನ್​ ಪ್ರೊ ಕಬಡ್ಡಿ ಲೀಗ್‌ ವೇಳಾಪಟ್ಟಿ ಪ್ರಕಟ

Pro Kabaddi League: ಪ್ರೊ ಕಬ್ಬಡ್ಡಿ ಸೀಸನ್​ 9ರ ಆರಂಭಕ್ಕೆ  ಯಾವಾಗ ಚಾಲನೆ ದೊರಕಲಿದೆ ಎನ್ನುವುದರ ಕುರಿತು ಇದೀಗ ಅಧಿಕೃತ ಮಾಹಿತಿ ದೊರಕಿದೆ. ಮಾಶಲ್ ಸ್ಪೋರ್ಟ್ಸ್‌ ಆರ್ಗನೈಸರ್ಸ್‌ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭದ ದಿನಾಂಕವನ್ನು ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರೊ ಕಬಡ್ಡಿ ಲೀಗ್ (Pro Kabaddi League) 9ನೇ ಸೀಸನ್​ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ ನ್ಯೂಸ್. ಹೌದು, ಸೀಸನ್​ 9ರ ಪ್ರೊ ಕಬಡ್ಡಿ ಲೀಗ್ ನ ವೇಳಾಪಟ್ಟಿ ಬಿಡುಗಡೆ ಆಗಿದ್ದು, ಕಬ್ಬಡ್ಡಿ (Kabaddi )ಪ್ರಿಯರಿಗೆ ಸಂತಸ ತಂದಿದೆ. ಬೆಂಗಳೂರು (Bengaluru) ಸೇರಿದಂತೆ ಮೂರು ನಗರಗಳಲ್ಲಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಗಳು ನಡೆಯಲಿವೆ. ಕೆಲ ದಿನಗಳ ಹಿಂದೆಯಷ್ಟೇ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಇದೀಗ ಕಬ್ಬಡ್ಡಿ ಲೀಗ್​ನ ವೇಳಾಪಟ್ಟಿ ಬಿಡುಗಡೆ ಆಗಿದೆ. ಇನ್ನು, ಕಬ್ಬಡ್ಡಿ ಪಂದ್ಯಾವಳಿಯು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ ಎಂದು ಪ್ರೊ ಕಬಡ್ಡಿ ಲೀಗ್‌ನ ಮುಖ್ಯಸ್ಥ ಅನುಪಮ್ ಗೋಸ್ವಾಮಿ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್​ನಿಂದ ಪ್ರೊ ಕಬಡ್ಡಿ ಲೀಗ್ ಆರಂಭ:

ಹೌದು, ಪ್ರೊ ಕಬ್ಬಡ್ಡಿ ಸೀಸನ್​ 9ರ ಆರಂಭಕ್ಕೆ  ಯಾವಾಗ ಚಾಲನೆ ದೊರಕಲಿದೆ ಎನ್ನುವುದರ ಕುರಿತು ಇದೀಗ ಅಧಿಕೃತ ಮಾಹಿತಿ ದೊರಕಿದೆ. ಮಾಶಲ್ ಸ್ಪೋರ್ಟ್ಸ್‌ ಆರ್ಗನೈಸರ್ಸ್‌ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭದ ದಿನಾಂಕವನ್ನು ಪ್ರಕಟಿಸಿದ್ದು, ಬೆಂಗಳೂರು, ಹೈದರಾಬಾದ್​ ಮತ್ತು ಪುಣೆ ನಗರಗಳಲ್ಲಿ 2022ನೇ ಸಾಲಿನ ಪಿಕೆಎಲ್ ಪಂದ್ಯಾವಳಿಗಳು ನಡೆಯಲಿವೆ.





ಇನ್ನು,  12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಅಕ್ಟೋಬರ್ 7ರಿಂದ ಡಿಸೆಂಬರ್ ಮಧ್ಯಭಾಗದ ವರೆಗೂ 2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಆರಂಭವಾಗಲಿದೆ. ಕಳೆದ 8ನೇ ಸೀಸನ್​ ಕೊರೋನಾ ಕಾರಣದಿಂದ ಪ್ರೇಕ್ಷಕರಿಲ್ಲದೇ ಪಂದ್ಯಾವಳಿಗಳನ್ನು ಬೆಂಗಳೂರಿನ ಖಾಸಗಿ ಹೋಟೆಲ್​ ಒಂದರಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಸಂಪೂರ್ಣ ಪ್ರೇಕ್ಷಕರೊಂದಿಗೆ ಈ ಬಾರಿಯ 9ನೇ ಸೀಸನ್​ ನಡೆಯಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Asia Cup 2022: ಕ್ರಿಕೆಟ್ ಪ್ರಿಯರಿಗೆ ಈ ಸಂಡೇ ಸೂಪರ್ ಧಮಾಕಾ! ಭಾರತ-ಪಾಕ್ ಹಣಾಹಣಿಯ ಪಿನ್ ಟು ಪಿನ್ ಡೀಟೇಲ್ಸ್ ಇಲ್ಲಿದೆ

ಪ್ರೇಕ್ಷಕರಿಗೂ ಈ ಬಾರಿ ಅನುಮತಿ:

ಪ್ರೊ ಕಬ್ಬಡ್ಡಿ ಲೀಗ್​ ಕುರಿತು ಮಾತನಾಡಿದ ಲೀಗ್‌ನ ಕಮಿಷನರ್ ಅನುಪಮ್ ಗೋಸ್ವಾಮಿ, ‘ಕಳೆದ ಸೀಸನ್​ ಕೋವಿಡ್​ ಭಯದಿಂದಾಗಿ ಬಯೋ ಬಬಲ್​ನಲ್ಲಿ ನಡೆಸಲಾಗಿತ್ತು. ಆದರೆ ಇ ಬಾರಿ ಅಂದರೆ ಕಬ್ಬಡ್ಡಿ ಲೀಗ್​ನ 9ನೇ ಸೀಸನ್​ ಯಾವುದೇ ತೊಂದರೆ ಇಲ್ಲದೇ ಪ್ರೇಕ್ಷಕರ ನಡುವೆಯೇ ನಡೆಸಲಾಗುವುದು. ಈ ಬಾರಿಯ ಪಂದ್ಯವಳಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಹೆಚ್ಚಿನ ವಿವರಗಳು ಮುಂದಿನ ವಾರಗಳಲ್ಲಿ ತಿಳಿಸಲಾಗುವುದು‘ ಎಂದು ಹೇಳಿದ್ದಾರೆ.

ಆಗಸ್ಟ್ 5 ಮತ್ತು 6ರಂದು ನಡೆದ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಆಟಗಾರರು ಹರಾಜಾಗಿದ್ದಾರೆ. ಹೌದು, ತಮಿಳ್ ತಲೈವಾಸ್ ಪ್ರಾಂಚೈಸಿಯು ಸ್ಟಾರ್ ಕಬಡ್ಡಿ ಆಟಗಾರ ಪವನ್ ಕುಮಾರ್ ಸೆಹ್ರಾವತ್ ಅವರನ್ನು  ಬರೋಬ್ಬರಿ 2.26 ಕೋಟಿ ರೂ. ಗೆ ಖರೀದಿಸುವ ಮೂಲಕ ದಾಖಲೆ ಬರೆಯಿತು. ಇಷ್ಟು ವರ್ಷದ ಹರಾಜಿನಲ್ಲಿ ಇದು ದಾಖಲೆಯ ಹರಾಜಾಗಿದೆ. ಇದಕ್ಕೂ ಮುನ್ನ ಪರ್ದೀಪ್ ನರ್ವಾಲ್​ರನ್ನು ಯುಪಿ ಯೋಧಾ ತಂಡ 1.65 ಕೋಟಿಗೆ ಖರೀದಿಸಿತ್ತು.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೆ ಟೀಂ ಇಂಡಿಯಾ ಭರ್ಜರಿ ತಯಾರಿ! ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಡೀಟೆಲ್ಸ್

ಪ್ರೊ ಕಬ್ಬಡ್ಡಿ ಲೀಗ್​ 2022ನ ಬೆಂಗಳೂರು ಬುಲ್ಸ್ ಆಟಗಾರರು:

ಮಹೇಂದರ್ ಸಿಂಗ್, ಲಾಲ್ ಮೋಹರ್, ಮಹೇಂದ್ರ ಸಿಂಗ್​, ಮೋರ್ ಜಿಬಿ, ನೀರನ್ ನರ್ವಾಲ್, ಸಚಿನ್ ನರ್ವಾಲ್, ಸೌರಭ್ ನಂದಲ್, ಮಯೂರ್ ಜಗನ್ನಾಥ್ ಕದಮ್, ಹರ್ಮನ್ಜೀತ್​ ಸಿಂಗ್​, ಭರತ್, ರೋಹಿತ್ ಕುಮಾರ್, ವಿನೋದ್ ಲಚ್ಮಯ್ಯ ನಾಯಕ್, ಅಮನ್, ರಜನೇಶ್, ಯಶ್ ಹೂಡಾ
Published by:shrikrishna bhat
First published: