Pro Kabaddi: ಪ್ರೊ ಕಬ್ಬಡಿ ಸೆಮಿಫೈನಲ್- ಎಲ್ಲರ ಚಿತ್ತ ಬೆಂಗಳೂರು ಬುಲ್ಸ್​​​ನತ್ತ

Kabaddi Semi Final: ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿಸಿದ್ದ ಬೆಂಗಳೂರು ಬುಲ್ಸ್ ತಂಡ ಇಂದು ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡವನ್ನು ಎದುರಿಸಲಿದೆ. ಇನ್ನು ಮತ್ತೊಂದು ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವು ಯು.ಪಿ.ಯೋಧಾ ವಿರುದ್ಧ ಕಾದಾಡಲಿದೆ.

ಪವನ್ ಸೆಹ್ರಾವತ್

ಪವನ್ ಸೆಹ್ರಾವತ್

 • Share this:
  ತೀವ್ರ ರೋಚಕತೆಯಿಂದ ಕೂಡಿದ್ದ ವಿವೋ ಪ್ರೊ ಕಬಡ್ಡಿ(Pro kabaddi) ಲೀಗ್ ಅಂತಿಮ ಹಂತಕ್ಕೆ(Final Stage) ತಲುಪಿದೆ. ಪಂದ್ಯಾವಳಿಗಳಲ್ಲಿ(matches) ಎಲ್ಲಾ ತಂಡಗಳ (team)ಅಬ್ಬರ ಕಾದಾಟಕ್ಕೆ ಬ್ರೇಕ್ ಬಿದ್ದು,ಎಲಿಮಿನೇಟರ್ ಪಂದ್ಯದಲ್ಲಿ ಎರಡು ತಂಡಗಳು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ತಂಡಗಳ ವಿರುದ್ಧ ಇಂದು ಸೆಣಸಾಡಿ ಫೈನಲ್ ಹಾದಿಯನ್ನು ಖಚಿತಪಡಿಸಿಕೊಳ್ಳಲಿವೆ. ಹೀಗಾಗಿ ಇಂದು ರಾತ್ರಿ ಉದ್ಯಾನನಗರಿ ಬೆಂಗಳೂರಿನ(Bengaluru) ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದ ಮೇಲೆ ಕಬ್ಬಡಿ ಅಭಿಮಾನಿಗಳ ಚಿತ್ತ ನೆಟ್ಟಿದೆ

  ಫೈನಲ್ ಪಂದ್ಯಕ್ಕಾಗಿ ನಾಲ್ಕು ತಂಡಗಳ ನಡುವೆ ಕಾದಾಟ

  ಟೂರ್ನಿಯಲ್ಲಿ ಆರಂಭದಿಂದಲೂ ಸ್ಥಿರ ಪ್ರದರ್ಶನ ನೀಡಿರುವ ಪಟ್ನಾ ಪೈರೇಟ್ಸ್ ಮೊದಲ ತಂಡವಾಗಿದೆ ಸೆಮಿಫೈನಲ್ ಪ್ರವೇಶಿಸಿತ್ತು.ದಬಾಂಗ್ ದೆಹಲಿ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು ನೇರವಾಗಿ ಸೆಮಿಫೈನಲ್ಸ್ ಗೆ ಪ್ರವೇಶ ಪಡೆದುಕೊಂಡಿತ್ತು . ಮೊನ್ನೆ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಮಣಿಸುವ ಮೂಲಕ ಯು ಪಿ ಯೋಧಾ ಸಹ ಸೆಮಿಫೈನಲ್ ಪ್ರವೇಶಿಸಿದೆ.ಇತ್ತ ಪ್ರೊ ಕಬ್ಬಡಿ ಲೀಗ್ ಆರಂಭದಲ್ಲಿ ಭರ್ಜರಿ ಪ್ರದರ್ಶನ ತೋರಿ ಎರಡನೇ ಭಾಗದಲ್ಲಿ ಕೊಂಚ ಮಂಕಾಗಿದ್ದಾ ಬೆಂಗಳೂರು ಬುಲ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆಲುವಿನ ಗುಟುರು ಹಾಕುವ ಮೂಲಕ ಉಪಾಂತ್ಯ ಪ್ರವೇಶಿಸಿದೆ.. ಹೀಗಾಗಿ ಈ ನಾಲ್ಕು ತಂಡಗಳಲ್ಲಿ ಯಾವ ತಂಡಗಳು ಗೆದ್ದು ಫೈನಲ್ ಪ್ರವೇಶ ಮಾಡಲಿದೆ ಎಂಬುದು ಇಂದು ರಾತ್ರಿ ತಿಳಿಯಲಿದೆ.

  ಇದನ್ನೂ ಓದಿ: 30 ವರ್ಷದ ಚೆಸ್​ ಕಿಂಗ್​ನನ್ನು ಸೋಲಿಸಿದ ಭಾರತ 16ರ ಪೋರ..!

  ದೆಹಲಿ v/s ಬುಲ್ಸ್, ಪಾಟ್ನಾ v/s ಯೋಧ

  ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿಸಿದ್ದ ಬೆಂಗಳೂರು ಬುಲ್ಸ್ ತಂಡ ಇಂದು ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡವನ್ನು ಎದುರಿಸಲಿದೆ.ಇನ್ನು ಮತ್ತೊಂದು ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವು ಯು.ಪಿ.ಯೋಧಾ ವಿರುದ್ಧ  ತಂಡಗಳು ಕಾದಾಡಲಿವೆ.
  .
  ಬೆಂಗಳೂರು ಬುಲ್ಸ್ - ದಬಾಂಗ್ ಡೆಲ್ಲಿ ನಡುವೆ ಟಫ್ ಫೈಟ್

  ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡಗಳು ಆಗಿರುವ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ನಡುವೆ ಇಂದು ರಾತ್ರಿ ರಣ ರೋಚಕತೆಯ ನಡೆಯುವ ಸಾಧ್ಯತೆ ಇದೆ. ಎರಡು ತಂಡಗಳಲ್ಲಿ ಬಲಿಷ್ಠ ಆಟಗಾರರು ಇದ್ದು ಯಾರು ಬರಿಸುತ್ತಾರೆ ಎನ್ನುವ ಕುತೂಹಲ ಕಬ್ಬಡಿ ಅಭಿಮಾನಿಗಳಲ್ಲಿ ಇದೆ. ಬೆಂಗಳೂರು ಪರ ಪವನ್ ಸೆಹ್ರವಾತ್ ದಬಾಂಗ್ ಡೆಲ್ಲಿ ಪರ ನವೀನ್ ಕುಮಾರ್ ಟೂರ್ನಿಯ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

  ಪವನ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಎಲ್ಲರ ಗಮನ ಸೆಳಿದಿದ್ದಾರೆ. ಪವನ್ ಸೆಹ್ರಾವತ್ ದಾಳಿಯಲ್ಲಿ 23 ಪಂದ್ಯಗಳಲ್ಲಿ 286 ಅಂಕಗಳನ್ನು ಕಲೆ ಹಾಕಿದ್ದಾರೆ. ಇವರು ಒಟ್ಟಾರೆ 17 ಬಾರಿ ಹತ್ತಕ್ಕೂ ಹೆಚ್ಚು ಅಂಕ ಕಲೆ ಹಾಕಿ ಮಿಂಚಿದ್ದಾರೆ.ಪವನ್ ಅವರೊಂದಿಗೆ ದಾಳಿಯಲ್ಲಿ ಭರತ್ ಸಾಥ್ ನೀಡಬೇಕಿದೆ. ಇನ್ನು ದಬಾಂಗ್ ತಂಡದ ಪರ ನವೀನ್ ಕುಮಾರ್ ಆಡಿದ 15 ಪಂದ್ಯಗಳಲ್ಲಿ 180 ಅಂಕ ಸೇರಿಸಿದ್ದಾರೆ. ನವೀನ್ ಎಂಟನೇ ಆವೃತ್ತಿಯ ಪಂದ್ಯದಲ್ಲಿ 10ಕ್ಕೂ ಹೆಚ್ಚು ಬಾರಿ 10ಕ್ಕೂ ಅಧಿಕ ಅಂಕ ಬಾಚಿಕೊಂಡಿದ್ದಾರೆ. ಇವರಿಗೆ ವಿಜಯ್ ಉತ್ತಮ ಸಾಥ್ ನೀಡಬಲ್ಲರು.

  ಬೆಂಗಳೂರು ತಂಡದ ರಕ್ಷಣಾ ವಿಭಾಗಕ್ಕೆ ಸೌರಭ್ ನಂದಲ್ ಬಲ ತುಂಬಿದ ಆಟಗಾರ. ಇವರು 23 ಪಂದ್ಯಗಳಲ್ಲಿ 65 ಬಾರಿ ಎದುರಾಳಿ ರೈಡರ್ ನ್ನು ಕಟ್ಟಿ ಹಾಕುವಲ್ಲಿ ಸಫಲರಾಗಿದ್ದಾರೆ. ಲೆಫ್ಟ್ ಕಾರ್ನರ್ ಡಿಫೆಂಡರ್ ಅಮನ್ 51 ಅಂಕ ಸೇರಿಸಿದ್ದಾರೆ. ರಕ್ಷಣಾ ವಿಭಾಗದಲ್ಲಿ ಬುಲ್ಸ್ ತಂಡ ದೆಹಲಿಗಿಂತಲೂ ಮುಂಚೂಣಿಯಲ್ಲಿ ಕಾಣುತ್ತಿದೆ. ದೆಹಲಿ ತಂಡದ ರಕ್ಷಣಾ ವಿಭಾಗಕ್ಕೆ ಮಂಜೀತ್ ಚಿಲ್ಲರ್ ಆನೆ ಬಲ. ಇವರ ಅನುಭವವನ್ನು ತಂಡಕ್ಕೆ ಧಾರೆ ಎರೆದು ಜಯದ ಮಾಲೆ ತೊಡಿಸಬಲ್ಲರು

  ಇದನ್ನೂ ಓದಿ: ಬೂಮ್​.. ಬೂಮ್​.. ಬುಮ್ರಾ ದಾಖಲೆ ಉಡೀಸ್​ ಮಾಡೋಕೆ ತುದಿಗಾಲಲ್ಲಿ ನಿಂತ ಚಹಾಲ್​!

  ಲೀಗ್ ಹಂತದ 2 ಮುಖಾಮುಖಿಗಳಲ್ಲಿ ಅತ್ಯಂತ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದ್ದ ಪಟನಾ-ಯೋಧಾ ತಂಡಗಳು ತಲಾ 1ರಲ್ಲಿ ಅಲ್ಪ ಅಂತರದ ಗೆಲುವು ಕಂಡಿದ್ದವು. ಹೀಗಾಗಿ ಈ ಸಲವೂ ಫೈನಲ್‌ಗೇರಲು ನಿಕಟ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಆದ್ರೆ ಸ್ಟಾರ್​ ರೈಡರ್‌ ಪ್ರದೀಪ್‌ ನರ್ವಾಲ್‌ ಸೇರಿ ಪ್ರಮುಖ ಆಟಗಾರರಿರುವ ಯೋಧಾ ಟೀಂ ಚೊಚ್ಚಲ ಫೈನಲ್‌ ಮೇಲೆ ಕಣ್ಣಿಟ್ಟಿರುವುದರಿಂದ ಕನ್ನಡಿಗ ಪ್ರಶಾಂತ್‌ ಕುಮಾರ್‌ ನೇತೃತ್ವದ ಪಾಟ್ನಾ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡುವ ಸಾಧ್ಯತೆ ಇದೆ.
  Published by:ranjumbkgowda1 ranjumbkgowda1
  First published: