PKL 8: ಅಗ್ರಸ್ಥಾನದತ್ತ ಬೆಂಗಳೂರು ಬುಲ್ಸ್ ಚಿತ್ತ; ದಬಂಗ್ ಡೆಲ್ಲಿ ಭರ್ಜರಿ ಓಟ ಮುಂದುವರಿಯುತ್ತಾ….

Pro Kabaddi League 2022: ಇಂದು ಪುಣೇರಿ ಪಲ್ಟಾನ್ vs ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್ vs ಯುಪಿ ಯೋದ್ಧಾ ನಡುವೆ ಹಣಾಹಣಿ ನಡೆಯಲಿದೆ. ಮೂರನೇ ಸ್ಥಾನಕ್ಕೆ ಕುಸಿದಿರುವ ಬೆಂಗಳೂರು ಬುಲ್ಸ್ ತಂಡ ಇಂದು ಗೆದ್ದರೆ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಲಿದೆ.

ಬೆಂಗಳೂರು ಬುಲ್ಸ್ ತಂಡ

ಬೆಂಗಳೂರು ಬುಲ್ಸ್ ತಂಡ

  • News18
  • Last Updated :
  • Share this:
    ಬೆಂಗಳೂರು, ಜ. 9: ಪ್ರೋಕಬಡ್ಡಿ ಲೀಗ್​ನ ಮೂರನೇ ಒಂದು ಭಾಗದ ಪಂದ್ಯಗಳು ಮುಕ್ತಾಯವಾಗಿವೆ. ಪ್ರತಿಯೊಂದು ತಂಡವೂ ತಮ್ಮ ಪಾಲಿನ 22 ಪಂದ್ಯಗಳ ಪೈಕಿ ಏಳನ್ನ ಆಡಿ ಮುಗಿಸಿವೆ. ಟೂರ್ನಿಯಲ್ಲಿ ಒಟ್ಟು 42 ಪಂದ್ಯಗಳು ಮುಕ್ತಾಯಗೊಂಡಿವೆ. ಇಂದು 43 ಮತ್ತು 44ನೇ ಪಂದ್ಯಗಳು ನಡೆಯಲಿವೆ. ಈ ಹಂತದಲ್ಲಿ ದಬಂಗ್ ಡೆಲ್ಲಿ ಮತ್ತು ಮೂರು ಬಾರಿ ಚಾಂಪಿಯನ್ಸ್ ಪಟ್ನಾ ಪೈರೇಟ್ಸ್ ಮೊದಲೆರಡು ಸ್ಥಾನಗಳನ್ನ ಅಲಂಕರಿಸಿವೆ. ಕೆಲ ದಿನಗಳ ಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಬೆಂಗಳೂರು ಬುಲ್ಸ್ 3ನೇ ಸ್ಥಾನದಲ್ಲಿದೆ.

    ಅಗ್ರಸ್ಥಾನದಲ್ಲಿರುವ ದಬಂಗ್ ಡೆಲ್ಲಿ 31 ಅಂಕಗಳನ್ನ ಹೊಂದಿದ್ದರೆ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್ 10 ಅಂಕಗಳನ್ನ ಹೊಂದಿದೆ. ಈಗ ಪ್ರತೀ ತಂಡಕ್ಕೂ ಇನ್ನೂ 15 ಪಂದ್ಯಗಳು ಬಾಕಿ ಇರುವುದರಿಂದ ಅಂಕಪಟ್ಟಿಯಲ್ಲಿ ತಳದಲ್ಲಿರುವ ತೆಲುಗು ಟೈಟಾನ್ಸ್, ಪುಣೇರಿ ಪಲ್ಟಾನ್, ಯುಪಿ ಯೋದ್ಧಾ, ಗುಜರಾತ್ ಜೈಂಟ್ಸ್ ಮೊದಲಾದ ತಂಡಗಳು ಅಂತಿಮವಾಗಿ ಅಗ್ರಸ್ಥಾನಕ್ಕೆ ಬರುವ ಎಲ್ಲಾ ಅವಕಾಶಗಳನ್ನ ಹೊಂದಿವೆ.

    ಇಂದಿನ ಪಂದ್ಯಗಳು:

    1) ಪುಣೇರಿ ಪಲ್ಟಾನ್ vs ಬೆಂಗಾಲ್ ವಾರಿಯರ್ಸ್, ಸಮಯ ಸಂಜೆ 7:30ಕ್ಕೆ

    2) ಬೆಂಗಳೂರು ಬುಲ್ಸ್ vs ಯು ಪಿ ಯೋದ್ಧಾ, ಸಮಯ ರಾತ್ರಿ 8:30ಕ್ಕೆ

    ನಿನ್ನೆ ಏಳು ಸುತ್ತುಗಳ ಬಳಿಕ ಬೆಂಗಳೂರು ಬುಲ್ಸ್ 3ನೇ ಸ್ಥಾನಕ್ಕೆ ಕುಸಿದಿದೆ. ನಿನ್ನೆ ದಬಂಗ್ ಡೆಲ್ಲಿ ಎದುರು ವೀರೋಚಿತ ಸೋಲುಂಡಿದ್ದ ಯುಪಿ ಯೋದ್ಧಾ ಇಂದು ಬೆಂಗಳೂರು ಬುಲ್ಸ್ ತಂಡಕ್ಕೆ ಸವಾಲು ಹಾಕುತ್ತಿದೆ. ಬುಲ್ಸ್ ಗೆದ್ದರೆ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಲಿದೆ.

    ಇದನ್ನೂ ಓದಿ: Harshal patel: ಮತ್ತೆ IPL ನಲ್ಲಿ ಬೆಂಗಳೂರು ಪರ ಆಡಬೇಕು ಎಂದ ಸ್ಟಾರ್ ಬೌಲರ್

    ನಿನ್ನೆ ಪಂದ್ಯಗಳ ಫಲಿತಾಂಶ:

    ನಿನ್ನೆ ನಡೆದ ಮೂರು ಪಂದ್ಯಗಳಲ್ಲಿ ಪಟ್ನಾ ಪೈರೇಟ್ಸ್, ಯು ಮುಂಬಾ ಮತ್ತು ದಬಂಗ್ ಡೆಲ್ಲಿ ತಂಡಗಳು ಗೆಲುವು ಸಾಧಿಸಿವೆ. ಗುಜರಾತ್ ಜೈಂಟ್ಸ್ ಮತ್ತು ಯುಪಿ ಯೋದ್ಧಾ ತಂಡಗಳು ಸೋಲುವ ಮುನ್ನ ಕಠಿಣ ಪೈಪೋಟಿ ನೀಡಿದವು. ಯು ಮುಂಬಾ ಎದುರು ತೆಲುಗು ಟೈಟಾನ್ಸ್ 10 ಅಂಕಗಳಿಂದ ಸುಲಭವಾಗಿ ಶರಣಾಯಿತು.

    1) ಗುಜರಾತ್ ಜೈಂಟ್ಸ್ ವಿರುದ್ಧ ಪಟ್ನಾ ಪೈರೇಟ್ಸ್​ಗೆ 27-26 ಅಂಕಗಳಿಂದ ಜಯ

    2) ತೆಲುಗು ಟೈಟಾನ್ಸ್ ವಿರುದ್ಧ ಯು ಮುಂಬಾಗೆ 48-38 ಅಂಕಗಳಿಂದ ಜಯ

    3) ಯುಪಿ ಯೋದ್ಧಾ ವಿರುದ್ಧ ದಬಂಗ್ ಡೆಲ್ಲಿಗೆ 37-33 ಅಂಕಗಳಿಂದ ಜಯ.

    ನವೀನ್ ಮೇಲೆ ಅವಲಂಬಿತ ದಬಂಗ್ ಡೆಲ್ಲಿ:

    ನವೀನ್ ಕುಮಾರ್ ಅಕಾ ಪಿಕೆಎಲ್ ಎಕ್ಸ್​ಪ್ರೆಸ್ ಈ ಸೀಸನ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಆಡಿದ ಎಲ್ಲಾ 7 ಪಂದ್ಯಗಳಲ್ಲೂ ಸೂಪರ್-10 ಗಳಿಸಿದ್ದಾರೆ. ನಿನ್ನೆ ಯು ಪಿ ಯೋದ್ಧಾ ವಿರುದ್ಧದ ಪಂದ್ಯದಲ್ಲಿ ಅವರು 18 ಅಂಕಗಳನ್ನ ಗಳಿಸಿದರು. ಆದರೆ, ನಿನ್ನೆ ಅವರ ಆಟ ಅದ್ಯಾಕೋ ಎಂದಿನ ಲಯದಲ್ಲಿರಲಿಲ್ಲ. ಕಳೆಗುಂದಿದಂತಿತ್ತು. 27 ಬಾರಿ ರೇಡ್ ಮಾಡಿದ ಅವರಿಂದ 12 ಟಚ್ ಪಾಯಿಂಟ್ಸ್ ಮಾತ್ರ ಗಳಿಸಲು ಸಾಧ್ಯವಾಯಿತು. 5 ಬೋನಸ್ ಅಂಕಗಳನ್ನ ಗಳಿಸಿದುರ. ಯೋದ್ಧಾ ಡಿಫೆಂಡರ್​ಗಳು ಆರು ಬಾರಿ ನವೀನ್ ಕುಮಾರ್ ಅವರನ್ನ ಹಿಡಿದುಹಾಕಿದರು. ಈ ಸೀಸನ್​ನಲ್ಲಿ ಒಂದು ಪಂದ್ಯದಲ್ಲಿ ನವೀನ್ ಕುಮಾರ್ ರೇಡಿಂಗ್​ನಲ್ಲಿ ಆರು ಬಾರಿ ಸಿಕ್ಕಿಬಿದ್ದಿದ್ದು ಇದೇ ಮೊದಲು.

    ಇದನ್ನೂ ಓದಿ: PKL 8: ಅರ್ಜುನ್ ದೇಶವಾಲ್ ಮತ್ತೊಂದು ಸೂಪರ್-10; ಜೈಪುರ್, ಹರ್ಯಾಣ ತಂಡಗಳಿಗೆ ಗೆಲುವು

    ನವೀನ್ ಕುಮಾರ್ ಅವರನ್ನ ಬಿಟ್ಟುಬಿಟ್ಟರೆ ದಬಂಗ್ ಡೆಲ್ಲಿ ತಂಡ ಮಂಕಾದಂತೆ ಕಾಣುತ್ತದೆ. ಬೇರೆ ಪರಿಣಾಮಕಾರಿ ರೇಡರ್ ಡೆಲ್ಲಿಯಲ್ಲಿ ಇಲ್ಲವೇನೋ ಎಂಬ ಭಾವನೆ ಮೂಡುತ್ತದೆ. ಅಶು ಮಲಿಕ್, ವಿಜಯ್ ಮೊದಲಾದವರು ಇದ್ದಾರಾದರೂ ನವೀನ್ ಮೇಲೆಯೇ ಡೆಲ್ಲಿ ಬಹುತೇಕ ಅವಲಂಬಿತವಾದಂತಿದೆ. ಹೀಗಾಗಿ, ನವೀನ್ ಲಯ ಕಳೆದುಕೊಂಡಲ್ಲಿ ದಬಂಗ್ ಡೆಲ್ಲಿ ಗೆಲುವಿನ ಓಟಕ್ಕೆ ತೊಡರುಗಾಲು ಬೀಳಬಹುದು.

    ಬೆಂಗಳೂರು ಬುಲ್ಸ್ ತಂಡವೂ ಕೂಡ ರೇಡಿಂಗ್​ನಲ್ಲಿ ಪವನ್ ಶೆರಾವತ್ ಮೇಲೆಯೇ ಅತಿಹೆಚ್ಚು ಅವಲಂಬಿತವಾಗಿದೆ. ಚಂದ್ರನ್ ರಂಜಿತ್ ನಿರೀಕ್ಷಿತ ಪರಿಣಾಮಕಾರಿ ಎನಿಸಿಲ್ಲ. ಇದು ಬಹುತೇಕ ಎಲ್ಲಾ ತಂಡಗಳ ಸ್ಥಿತಿಯೂ ಇದೇ ಇರಬಹುದು. ಫಾರ್ಮ್​ನಲ್ಲಿರುವ ಒಬ್ಬ ರೇಡರ್ಸ ಸುತ್ತವೇ ತಂಡದ ಕಾರ್ಯತಂತ್ರ ರೂಪಿಸಲಾಗುತ್ತದೆ. ಆತನಿಗೇ ರೇಡಿಂಗ್​ನಲ್ಲಿ ಸಿಂಹಪಾಲು ನೀಡಲಾಗುತ್ತದೆ. ಹೀಗಾಗಿ, ಆ ಆಟಗಾರನ ಮೇಲೆ ತಂಡ ಅವಲಂಬಿತವಿದ್ದಂತೆ ಭಾಸವಾಗಬಹುದು ಎಂಬ ಅಭಿಪ್ರಾಯಗಳಿವೆ.

    ಇದನ್ನೂ ಓದಿ: Virat Kohli: ಅಬ್ಬಾ..! ಒಂದು Instagram Postನಿಂದ ಎಷ್ಟೊಂದು ಹಣ ಸಂಪಾದನೆ ಮಾಡ್ತಾರೆ ಗೊತ್ತಾ...?

    ಅಂಕಪಟ್ಟಿ (ಎಲ್ಲಾ ತಂಡಗಳು 7 ಪಂದ್ಯಗಳನ್ನ ಆಡಿವೆ):

    1) ದಬಂಗ್ ಡೆಲ್ಲಿ: 31 ಅಂಕ
    2) ಪಟ್ನಾ ಪೈರೇಟ್ಸ್: 29 ಅಂಕ
    3) ಬೆಂಗಳೂರು ಬುಲ್ಸ್: 28 ಅಂಕ
    4) ಯು ಮುಂಬಾ: 25 ಅಂಕ
    5) ತಮಿಳ್ ತಲೈವಾಸ್: 22 ಅಂಕ
    6) ಹರ್ಯಾಣ ಸ್ಟೀಲರ್ಸ್: 20 ಅಂಕ
    7) ಜೈಪುರ್ ಪಿಂಕ್ ಪ್ಯಾಂಥರ್ಸ್: 18 ಅಂಕ
    8) ಬೆಂಗಾಲ್ ವಾರಿಯರ್ಸ್: 17 ಅಂಕ
    9) ಗುಜರಾತ್ ಜೈಂಟ್ಸ್: 16 ಅಂಕ
    10) ಯುಪಿ ಯೋದ್ಧಾ: 15 ಅಂಕ
    11) ಪುಣೇರಿ ಪಲ್ಟಾನ್: 11 ಅಂಕ
    12) ತೆಲುಗು ಟೈಟಾನ್ಸ್: 10 ಅಂಕ
    Published by:Vijayasarthy SN
    First published: