PKL 8: ಮೊದಲ ದಿನ ಅಭಿಷೇಕ್ ಸಿಂಗ್ ಹೀರೋ, ಎರಡನೇ ದಿನದ ಪಂದ್ಯಗಳ ನಿರೀಕ್ಷೆ, ಟೈಮಿಂಗ್

Pro Kabaddi League 2021: ಇಂದು ಎರಡನೇ ದಿನ ಮೂರು ಪಂದ್ಯಗಳಿವೆ. ಗುಜರಾತ್ ಜೈಂಟ್ಸ್ vs ಜೈಪುರ್ ಪಿಂಕ್ ಪ್ಯಾಂಥರ್ಸ್ ಮಧ್ಯೆ ಮೊದಲ ಪಂದ್ಯ, ದಬಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟಾನ್ ಮಧ್ಯೆ ಎರಡನೇ ಪಂದ್ಯ, ಹಾಗು ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನ ಪೈರೇಟ್ಸ್ ಮಧ್ಯೆ ಇವತ್ತಿನ ಮೂರನೇ ಪಂದ್ಯ ನಡೆಯಲಿದೆ.

ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್ ಪಂದ್ಯದ ಒಂದು ದೃಶ್ಯ

ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್ ಪಂದ್ಯದ ಒಂದು ದೃಶ್ಯ

 • News18
 • Last Updated :
 • Share this:
  ಬೆಂಗಳೂರು, ಡಿ. 23: ಎಂಟನೇ ಆವೃತ್ತಿಯ ಪ್ರೋಕಬಡ್ಡಿ ಲೀಗ್ (Pro Kabaddi League) ನಿನ್ನೆ ಭರ್ಜರಿಯಾಗಿ ಚಾಲನೆಗೊಂಡಿದೆ. ಮೊದಲ ದಿನ ನಡೆದ ಮೂರೂ ಪಂದ್ಯಗಳು ರಸವತ್ತಾಗಿದ್ದವು. ಅನೇಕ ಭಾವೋದ್ವೇಗ ಕ್ಷಣಗಳನ್ನ ಉಣಬಡಿಸಿದ್ದವು. ಮೊದಲ ಪಂದ್ಯದಲ್ಲಿ ಯು ಮುಂಬಾ ಎದುರು ಬೆಂಗಳೂರು ಬುಲ್ಸ್ (Bengaluru Bulls vs U Mumba) 16 ಅಂಕಗಳ ಅಂತರದಿಂದ ಸೋತರೂ ಒಳ್ಳೆಯ ಕಬಡ್ಡಿ ಆಟ ನೀಡಿತು. ಅಂಕಗಳ ಅಂತರ ತೋರ್ಪಡಿಸುವಷ್ಟ ಪಂದ್ಯ ನೀರಸವಾಗಿರಲಿಲ್ಲ. ಯು ಮುಂಬಾ ತಂಡದ ಬಲಿಷ್ಠ ಆಟಗಾರ ಅಭಿಷೇಕ್ ಸಿಂಗ್ (Abhishek Singh) ಅವರೊಬ್ಬರೇ 19 ಅಂಕ ಅಂಕ ಗಳಿಸಿ ಬುಲ್ಸ್ ಅನ್ನ ಕಟ್ಟಿಹಾಕಿದರು. ಬುಲ್ಸ್​ನ ಸ್ಟಾರ್ ಆಟಗಾರ ಪವನ್ ಶೆರಾವತ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರದೇ ಇದ್ದದ್ದು ತಂಡದ ಸೋಲಿಗೆ ಒಂದು ಕಾರಣ.

  ಬೆಂಗಳೂರು ಬುಲ್ಸ್ ಯು ಮುಂಬಾ ನಂತರ ನಡೆದ ಬೇರೆ ಎರಡು ಪಂದ್ಯಗಳು ರಣರೋಚಕ ಎನಿಸಿದ್ದವು. ಸೌತ್ ಡರ್ಬಿ (South Derby) ಎಂದು ಪರಿಗಣಿಸಲಾದ ತೆಲುಗು ಟೈಟಾನ್ಸ್ ಮತ್ತು ತಮಿಳ್ ತಲೈವಾಸ್ ನಡುವಿನ ಪಂದ್ಯ 40-40 ಅಂಕಗಳಿಂದ ಟೈ ಆಗಿದ್ದು ಪಂದ್ಯದ ಪೈಪೋಟಿಗೆ ಕನ್ನಡಿ ಹಿಡಿದಂತಿತ್ತು. ಟೈಟಾನ್ಸ್ ತಂಡದ ಸಿದ್ಧಾರ್ಥ್ ದೇಸಾಯಿ 11 ಅಂಕ ಗಳಿಸಿದರೆ ಮತ್ತು ತಮಿಳ್ ತಲೈವಾಸ್ ತಂಡದ ಮಂಜೀತ್ 12 ಪಾಯಿಂಟ್ಸ್ ಕಲೆಹಾಕಿ ಸೈ ಎನಿಸಿದರು.

  ಮೂರನೇ ಪಂದ್ಯದಲ್ಲಿ ಬಿ.ಸಿ. ರಮೇಶ್ (Coach B C Ramesh) ಕೋಚಿಂಗ್ ಗರಡಿಯಲ್ಲಿ ಪಳಗಿರುವ ಹಾಲಿ ಚಾಂಪಿಯನ್ಸ್ ಬಂಗಾಳ್ ವಾರಿಯರ್ಸ್ ತಂಡ ಯು ಪಿ ಯೋದ್ಧಾವನ್ನು 38-33 ಅಂಕಗಳಿಂದ ಮಣಿಸಿತು. ಇರಾನಿ ಆಟಗಾರ ಮೊಹಮ್ಮದ್ ನಬಿಬಕ್ಷ್ 11 ಅಂಕ ಗಳಿಸಿ ನಂಬರ್ ಒನ್ ಎನಿಸಿದರು. ಕನ್ನಡಿಗ ಸುಕೇಶ್ ಹೆಗ್ಡೆ 8 ಅಂಕ ಗಳಿಸಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿದರು. ನಾಯಕ ಮಣಿಂದರ್ ಸಿಂಗ್ 7 ಅಂಕ ಗಳಿಸಿದರು. ಯುಪಿ ತಂಡದ ಪ್ರಬಲ ರೇಡರ್ ಪ್ರದೀಪ್ ನರವಾಲ್ 8 ಅಂಕ ಗಳಿಸಿ ಟಾಪ್ ಸ್ಕೋರರ್ ಎನಿಸಿದರು. ಸುರೇಂದರ್ ಗಿಲ್ (5) ಮತ್ತು ಸಬ್ಸ್​ಟಿಟ್ಯೂಟ್ ಆಗಿ ಬಂದ ರೋಹಿತ್ ತೋಮರ್ (4) ಉತ್ತಮ ಪ್ರದರ್ಶನ ನೀಡಿದರು.

  ಇದನ್ನೂ ಓದಿ: Pro Kabaddi 2021: ಮೊದಲ ಪಂದ್ಯವೇ ರಣರೋಚಕ.. ಬಲಿಷ್ಠ ಹೋರಾಟ ನಡೆಸಿ ಸೋತ ಬೆಂಗಳೂರು ಬುಲ್ಸ್​!

  ಜೂ. ಎನ್​ಟಿಆರ್ ಕನ್ನಡದಲ್ಲಿ ಕಾಮೆಂಟರಿ:

  ಪ್ರೋ ಕಬಡ್ಡಿ ಲೀಗ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ಜಾಲದ ವಿವಿಧ ವಾಹಿನಿಗಳಲ್ಲಿ ನೇರ ಪ್ರಸಾರ ಇವೆ. ನಿನ್ನೆ ಮೊದಲ ದಿನ ಆರ್ ಆರ್ ಆರ್ (RRR Movie) ಸಿನಿಮಾದ ಪ್ರೊಮೋಶನ್ ಗಮನ ಸೆಳೆಯಿತು. ಸಿನಿಮಾದ ನಾಯಕನಟ ಜೂನಿಯರ್ ಎನ್​ಟಿಆರ್ (Jr. NTR) ಕನ್ನಡದಲ್ಲಿ ಕಬಡ್ಡಿಯ ಕಾಮೆಂಟರಿ ಮಾಡಿ ಸೈ ಎನಿಸಿದರು. ಆರ್ ಆರ್ ಆರ್ ಸಿನಿಮಾದ ಟ್ರೇಲರ್​ನಲ್ಲಿ ಅವರು ಮತ್ತು ಮತ್ತೊಬ್ಬ ನಾಯಕನಟ ರಾಮಚರಣ್ ತೇಜ (Ramcharan Teja) ಇಬ್ಬರೂ ಕನ್ನಡದಲ್ಲಿ ಧ್ವನಿ ನೀಡಿದ್ದರು. ಇಡೀ ಸಿನಿಮಾದಲ್ಲಿ ಎನ್​ಟಿಆರ್ ಕನ್ನಡದಲ್ಲೇ ಡಬ್ ಮಾಡಿದ್ಧಾರಂತೆ. ಎನ್​ಟಿಆರ್ ತಾಯಿ ಕನ್ನಡಿಗರಾಗಿದ್ದಾರೆ.

  ಇನ್ನು, ಆರ್ ಆರ್ ಸಿನಿಮಾದ ನಿರ್ದೇಶಕ, ಬಾಹುಬಲಿ ಖ್ಯಾತಿಯ ರಾಜಮೌಳಿ (Director Rajamouli) ಕೂಡ ಕಬಡ್ಡಿ ಕಾಮೆಂಟರಿ ನೀಡಿದರು. ರಾಜಮೌಳಿ ಕೂಡ ಮೂಲತಃ ರಾಯಚೂರಿನವರು. ಬೆಂಗಳೂರು ಬುಲ್ಸ್ ತಂಡವನ್ನ ನಿನ್ನೆ ಅವರು ಬೆಂಬಲಿಸಿದರು.

  ಇದನ್ನೂ ಓದಿ: Pro Kabaddi 2021: ಇಂದು ದಬಂಗ್​​​ ಡೆಲ್ಲಿV/S ಪುಣೇರಿ ಪಲ್ಟನ್​: ಪಂದ್ಯ ಗೆಲ್ಲೋದ್ಯಾರು? ಪಕ್ಕಾ ಪ್ರೆಡಿಕ್ಷನ್‌ ಇಲ್ಲಿದೆ..

  ಇವತ್ತಿನ ಪಂದ್ಯಗಳು:

  ನಿನ್ನೆಯಂತೆ ಇವತ್ತೂ ಮೂರು ಪಂದ್ಯಗಳು ನಡೆಯುತ್ತಿವೆ. ವೈಟ್​ಫೀಲ್ಡ್​ನ ಶೆರಟಾನ್ ಗ್ರ್ಯಾಂಡ್ ಹೋಟೆಲ್​ನ ಒಳಾಂಗಣದಲ್ಲಿ ಸಿದ್ಧಪಡಿಸಿರುವ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯುತ್ತಿವೆ.

  1) ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ಹಣಾಹಣಿ ನಡೆಸಲಿವೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗುತ್ತದೆ.

  ಇದನ್ನೂ ಓದಿ: PKL 2021: ಲೈವ್​ ಪಂದ್ಯ ನೋಡೋದೆಲ್ಲಿ? ಪ್ರೊ ಕಬ್ಬಡಿ ಲೀಗ್​ ಸೀಸನ್​ 8 ಟೂರ್ನಿಯ ಕಂಪ್ಲೀಟ್ ಮಾಹಿತಿ

  2) ರಾತ್ರಿ 8:30ಕ್ಕೆ ಡಬಾಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟಾನ್ ನಡುವೆ ಎರಡನೇ ಪಂದ್ಯ ನಡೆಯಲಿದೆ. ಇದರಲ್ಲಿ ಅಜಯ್ ಠಾಕೂರ್, ಮಂಜೀತ್ ಚಿಲ್ಲರ್, ನವೀನ್ ಕುಮಾರ್, ರಾಹುಲ್ ಚೌಧರಿ, ನಿತಿನ್ ತೋಮರ್, ಜೋಗಿಂದರ್ ನರ್ವಾಲ್, ವಿಶಾಲ್ ಭಾರದ್ವಜ್, ಸಂದೀಪ್ ನರ್ವಾಲ್ ಮೊದಲಾದ ಘಟನಾಘಟಿಗಳು ಕಣದಲ್ಲಿದ್ದಾರೆ.

  3) ಮೂರನೇ ಪಂದ್ಯ ರಾತ್ರಿ 9:30ಕ್ಕೆ ನಡೆಯಲಿದ್ದು ಹರಿಯಾಣ ಸ್ಟೀಲರ್ಸ್ ಮ ತ್ತು ಮೂರು ಬಾರಿ ಚಾಂಪಿಯನ್ಸ್ ಪಟ್ನಾ ಪೈರೇಟ್ಸ್ ಹಣಾಹಣಿ ಇದೆ.
  Published by:Vijayasarthy SN
  First published: