PKL 8: ಪ್ರೋಕಬಡ್ಡಿಯಲ್ಲಿ 15ಕ್ಕೂ ಹೆಚ್ಚು ಕನ್ನಡಿಗರು; ಇಬ್ಬರು ಕ್ಯಾಪ್ಟನ್ಸ್; ಮೂವರು ಕೋಚ್

Pro Kabaddi League 2021: ಕರ್ನಾಟಕದಿಂದ 15ಕ್ಕೂ ಹೆಚ್ಚು ಆಟಗಾರರು ಈ ಬಾರಿ ಪ್ರೋಕಬಡ್ಡಿ ಲೀಗ್​ನ 9 ತಂಡಗಳಲ್ಲಿ ಇದ್ದಾರೆ. ಇವರಲ್ಲಿ ಇಬ್ಬರು ಕ್ಯಾಪ್ಟನ್ಗಳಾಗಿದ್ಧಾರೆ. ಮೂರು ಪಿಕೆಎಲ್ ತಂಡಗಳಿಗೆ ಕನ್ನಡಿಗರೇ ತರಬೇತುದಾರರಾಗಿದ್ದಾರೆ.

ತೆಲುಗು ಟೈಟಾನ್ಸ್ ಮತ್ತು ತಮಿಳ್ ತಲೈವಾಸ್ ನಡುವಿನ ಪಂದ್ಯದ ದೃಶ್ಯ

ತೆಲುಗು ಟೈಟಾನ್ಸ್ ಮತ್ತು ತಮಿಳ್ ತಲೈವಾಸ್ ನಡುವಿನ ಪಂದ್ಯದ ದೃಶ್ಯ

 • News18
 • Last Updated :
 • Share this:
  ಬೆಂಗಳೂರು: ಪ್ರೋಕಬಡ್ಡಿ ಲೀಗ್​ನ (Pro Kabaddi League) ಎಂಟನೇ ಆವೃತ್ತಿ ನಿನ್ನೆ ಆರಂಭಗೊಂಡಿದೆ. ಕ್ಷಣಕ್ಷಣವೂ ರೋಚಕತೆ ಹುಟ್ಟಿಸುವ ಕಬಡ್ಡಿಯ ರಸದೌತಣ ಎರಡು ತಿಂಗಳವರೆಗೆ ಇರುವುದು ಖಾತ್ರಿ ಆಗಿದೆ. ಕ್ರಿಕೆಟ್ ಬಿಟ್ಟರೆ ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಎಂದರೆ ಅದು ಕಬಡ್ಡಿಯೇ. ಭಾರತದ ಪ್ರಬಲ ಕಬಡ್ಡಿ ತಂಡಗಳಲ್ಲಿ ಕರ್ನಾಟಕವೂ ಒಂದು. ಇಲ್ಲಿ ಸ್ಥಳೀಯ ಮಟ್ಟದಲ್ಲಿ ರಾಜ್ಯಾದ್ಯಂತ ಅಲ್ಲಲ್ಲಿ ಕಬಡ್ಡಿ ಟೂರ್ನಿಗಳು ನಡೆಯುತ್ತಲೇ ಇರುತ್ತವೆ. ವಿವಿಧ ಸಂಘ ಸಂಸ್ಥೆಗಳು ಕಬಡ್ಡಿ ತಂಡಗಳನ್ನ ಪೋಷಿಸುತ್ತವೆ.  ಹೀಗಾಗಿ, ಕರ್ನಾಟಕದಲ್ಲಿ ಕಬಡ್ಡಿ ಇನ್ನೂ ಜೀವಂತವಾಗಿದೆ.

  ಪ್ರೋಕಬಡ್ಡಿ ಲೀಗ್​ನಲ್ಲಿ ಹಲವು ಕನ್ನಡಿಗರು ಛಾಪು ಮೂಡಿಸಿದ್ದಾರೆ. ರಿಷಾಂಕ್ ದೇವಾಡಿಗ, ಸುಕೇಶ್ ಹೆಗ್ಡೆ, ಜೀವ, ಪ್ರಶಾಂತ್ ರೈ ಇವರು ಪ್ರೋಕಬಡ್ಡಿ ಲೀಗ್​ನಲ್ಲಿ ಬಹಳ ಚಿರಪರಿಚಿತ ಇರುವ ಹೆಸರು. ಈ ಸೀಸನ್​ನ ಪ್ರೋಕಬಡ್ಡಿಯಲ್ಲಿ 15ಕ್ಕೂ ಹೆಚ್ಚು ಮಂದಿ ಕನ್ನಡಿಗರು ಅಥವಾ ಕರ್ನಾಟಕ ಮೂಲದ ಕಬಡ್ಡಿ ಆಟಗಾರರು ಕಣದಲ್ಲಿದ್ದಾರೆ. ಅವರಲ್ಲಿ ಇಬ್ಬರು ಆಟಗಾರರು ಕ್ಯಾಪ್ಟನ್ ಕೂಡ ಆಗಿದ್ಧಾರೆ.

  ಭಾರತ ಕಂಡ ಅತ್ಯಂತ ಶ್ರೇಷ್ಠ ಕಬಡ್ಡಿ ಆಟಗಾರರಲ್ಲೊಬ್ಬರೆನಿಸಿರುವ ಕರ್ನಾಟಕದ ಬಿ.ಸಿ. ರಮೇಶ್ ಅವರು ಬೆಂಗಾಳ್ ವಾರಿಯರ್ಸ್ ತಂಡದ ಕೋಚ್ ಆಗಿದ್ದಾರೆ. ಅವರು ಕೋಚ್ ಆದ ಪರಿಣಾಮವೋ ಎಂಬಂತೆ ಆ ತಂಡದಲ್ಲಿ ಆರು ಮಂದಿ ಕನ್ನಡಿಗರು ಇದ್ದಾರೆ. ರಿಷಾಂಕ್ ದೇವಾಡಿಗ ಮಹಾರಾಷ್ಟ್ರ ರಾಜ್ಯದವರಾದರೂ ಉಡುಪಿ ಮೂಲದವರು. ಅವರನ್ನ ಬಿಟ್ಟರೆ ಬೆಂಗಾಲ್ ವಾರಿಯರ್ಸ್ ತಂಡದಲ್ಲಿರುವ ಇತರ ಐವರು ಕನ್ನಡಿಗರು ಕರ್ನಾಟಕದ ಆಟಗಾರರೇ ಆಗಿದ್ದಾರೆ.

  ಇದನ್ನೂ ಓದಿ: PKL 8: ಮೊದಲ ದಿನ ಅಭಿಷೇಕ್ ಸಿಂಗ್ ಹೀರೋ, ಎರಡನೇ ದಿನದ ಪಂದ್ಯಗಳ ನಿರೀಕ್ಷೆ, ಟೈಮಿಂಗ್

  ಪ್ರೋಕಬಡ್ಡಿ ತಂಡಗಳಲ್ಲಿರುವ ಕನ್ನಡಿಗರು:

  ಬೆಂಗಾಲ್ ವಾರಿಯನ್ಸ್: ಸುಕೇಶ್ ಹೆಗ್ಡೆ, ಸಚಿನ್ ವಿಟ್ಲ, ಮನೋಜ್ ಗೌಡ, ಆನಂದ್ ವಿ, ಜೆ ದರ್ಶನ್. ರಿಷಾಂಕ್ ದೇವಾಡಿಗ
  ದಬಂಗ್ ಡೆಲ್ಲಿ: ಜೀವ ಕುಮಾರ್
  ಗುಜರಾತ್ ಫಾರ್ಚೂನ್ ಜೈಂಟ್ಸ್: ರತನ್ ಕೆ
  ಜೈಪುರ್ ಪಿಂಕ್ ಪ್ಯಾಂಥರ್ಸ್: ಪವನ್ ಕುಮಾರ್
  ಪಾಟ್ನಾ ಪೈರೇಟ್ಸ್: ಪ್ರಶಾಂತ್ ಕುಮಾರ್ ರೈ
  ಪುಣೇರಿ ಪಲ್ಟಾನ್ಸ್: ಚೇತನ್, ವಿಶ್ವಾಸ್
  ತಮಿಳ್ ತಲೈವಾಸ್: ಕೆ ಪ್ರಪಂಚನ್
  ತೆಲುಗು ಟೈಟಾನ್ಸ್: ರಾಕೇಶ್ ಕುಮಾರ್
  ಯು ಮುಂಬಾ: ಸಚಿನ್ ಪ್ರತಾಪ್

  ಇವರ ಪೈಕಿ ರಿಷಾಂಕ್ ದೇವಾಡಿಗ, ಜೀವ ಕುಮಾರ್, ಸುಕೇಶ್ ಹೆಗ್ಡೆ, ಪ್ರಶಾಂತ್ ಕುಮಾರ್ ರೈ, ಕೆ ಪ್ರಪಂಚನ್, ರಾಕೇಶ್ ಕುಮಾರ್ ಗೌಡ ಅವರು ಅನುಭವಿಗಳೆನಿಸಿದ್ದಾರೆ.

  ಪ್ರಶಾಂತ್ ಕುಮಾರ್ ರೈ ಅವರು ಪಾಟ್ನಾ ಪೈರೇಟ್ಸ್ ತಂಡದ ನಾಯಕರಾಗಿರುವುದು ವಿಶೇಷ. ಹಾಗೆಯೇ, ಕೆ ಪ್ರಪಂಚನ್ ಅವರು ತಮಿಳ್ ತಲೈವಾಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಪ್ರಪಂಚನ್ ಅವರು ತಮಿಳುನಾಡು ಮೂಲದವರಾದರೂ ಬೆಂಗಳೂರಿನ ಕಸ್ಟಮ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ತಂಡ ಕಬಡ್ಡಿ ತಂಡದ ಆಟಗಾರರೂ ಆಗಿದ್ಧಾರೆ. ದೇಶದ ಅತ್ಯುತ್ತಮ ರೇಡರ್​ಗಳ ಪೈಕಿ ಅವರೂ ಒಬ್ಬರೆನಿಸಿದ್ದಾರೆ.

  ಇದನ್ನೂ ಓದಿ: PKL 2021: ಲೈವ್​ ಪಂದ್ಯ ನೋಡೋದೆಲ್ಲಿ? ಪ್ರೊ ಕಬ್ಬಡಿ ಲೀಗ್​ ಸೀಸನ್​ 8 ಟೂರ್ನಿಯ ಕಂಪ್ಲೀಟ್ ಮಾಹಿತಿ

  ಮೂವರು ಕೋಚ್​ಗಳು:

  ಕರ್ನಾಟಕದ ಬಿ.ಸಿ. ರಮೇಶ್, ರಾಜಗುರು ಮತ್ತು ರವಿ ಶೆಟ್ಟಿ ಅವರು ವಿವಿಧ ಪಿಕೆಎಲ್ ತಂಡಗಳಿಗೆ ಕೋಚ್ ಆಗಿದ್ದಾರೆ.

  1) ಈ ಹಿಂದೆ ಬೆಂಗಳೂರು ಬುಲ್ಸ್ ತಂಡದ ಸಹಾಯಕ ಕೋಚ್ ಆಗಿದ್ದ ಬಿ.ಸಿ. ರಮೇಶ್ ಅವರು ಬಂಗಾಳ ವಾರಿಯರ್ಸ್ ತಂಡದ ಕೋಚ್ ಆಗಿದ್ಧಾರೆ.

  2) ಯು ಮುಂಬಾದ ಮಾಜಿ ಆಟಗಾರ ರಾಜಗುರು ಅವರು ಅದೇ ತಂಡದ ಕೋಚ್ ಆಗಿ ಕೆಲಸ ಮಾಡುತ್ತಿದ್ಧಾರೆ.

  3) ಇನ್ನು, ಯು ಮುಂಬಾದ ಮಾಜಿ ಕೋಚ್ ರವಿ ಶೆಟ್ಟಿ ಅವರು ಮಾಜಿ ಮುಂಬೈ ಆಟಗಾರ ಅನೂಪ್ ಕುಮಾರ್ ಜೊತೆ ಪುಣೇರಿ ಪಲ್ಟಾನ್ಸ್ ತಂಡದ ಕೋಚ್ ಆಗಿದ್ದಾರೆ.
  Published by:Vijayasarthy SN
  First published: