Bengaluru Bulls vs Jaipur Pink Panthers: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್

Pro Kabaddi League: ಇನ್ನು ಬೆಂಗಳೂರು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯಗಳನ್ನು ಹರಿಯಾಣ ಸ್ಟೀಲರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ನಡುವೆ ಆಡಲಿದೆ. ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರಷ್ಟೇ ಬೆಂಗಳೂರು ಪ್ಲೇಆಫ್ ಪ್ರವೇಶಿಸುವ ಕನಸು ನನಸಾಗಿ ಉಳಿಯಲಿದೆ.

ಬೆಂಗಳೂರು ಬುಲ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್

ಬೆಂಗಳೂರು ಬುಲ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್

  • Share this:
    ವಿವೋ ಪ್ರೊ ಕಬಡ್ಡಿ ಲೀಗ್(Vivo Pro Kabaddi League) ಸೂಪರ್ ಸಂಡೇಯಲ್ಲಿ(Super Sunday), ಐಪಿಎಲ್ ಹರಾಜು ಪ್ರಕ್ರಿಯೆಯ ನಡುವೆ ನಡೆದ ಟ್ರಿಪಲ್ ಹೆಡರ್ ಪಂದ್ಯಾವಳಿಗಳು ಮುಕ್ತಾಯವಾಗಿದ್ದು, ಪ್ಲೇ ಆಫ್(Play-off) ಪ್ರವೇಶಿಸಲು ಅಗತ್ಯವಾಗಿದ್ದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್(Bengaluru Bulls) ತಂಡ ಜೈಪುರ ಪಿಂಕ್ ಪ್ಯಾಂಥರ್ಸ್(Jaipur Pink Panthers) ವಿರುದ್ಧ ಗೆಲುವು ಸಾಧಿಸಿದೆ.. ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 45-37 ಅಂತರದಿಂದ ಜೈಪುರ್‌ ಪಿಂಕ್‌ ಪ್ಯಾಂಥರ್ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದೆ... ಅಲ್ಲದೆ ಈ ಗೆಲುವಿನ ಮೂಲಕ
    ಪ್ಲೇ ಆಫ್ ಕನಸನ್ನು ಬೆಂಗಳೂರು ಜೀವಂತವಾಗಿ ಇಟ್ಟುಕೊಂಡಿದೆ.

    ಪ್ರೊ ಕಬ್ಬಡ್ಡಿ ಲೀಗ್ 114 ನೇ ಪಂದ್ಯದಲ್ಲಿ ಬೆಂಗಳೂರು ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವೆ ಭಾರಿ ಕದನ ಏರ್ಪಟ್ಟಿತು..ಪಂದ್ಯದ ಆರಂಭಿಕ ಹಂತಗಳಲ್ಲಿ ಜೈಪುರ ಮೇಲುಗೈ ಸಾಧಿಸಿತು. ಬೆಂಗಳೂರು ನಾಯಕ
    ಸೆಹ್ರಾವತ್ ಅವರನ್ನು ಸಂದೀಪ್ ಧುಲ್ ಅವರನ್ನ ಮಾಡುವ ಮೂಲಕ ಉತ್ತಮ ಆರಂಭ ಪಡೆದ ಜೈಪುರ
    ಬೆಂಗಳೂರು ತಂಡವನ್ನು all-out ಮಾಡಿತು.. ಆದರೆ ಭರತ್‌ನ ಬಹು-ಪಾಯಿಂಟ್ ದಾಳಿಗಳ ಸಹಾಯದಿಂದ ಬೆಂಗಳೂರು ಉತ್ತಮ ಲಯಕ್ಕೆ ಮರಳಲು ಸಾಧ್ಯವಾಯಿತು. ಅಂತಿಮವಾಗಿ ಪಂದ್ಯದ ಮೊದಲಾರ್ಧದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು all- out ಮಾಡಲು ಬೆಂಗಳೂರು ಬುಲ್ಸ್ ತಂಡ ಯಶಸ್ವಿಯಾಯಿತು..ಹೀಗಾಗಿ ಪಂದ್ಯದ ಮೊದಲಾರ್ಧದಲ್ಲಿ 22 ಹಾಗೂ 19 ಅಂಕಗಳೊಂದಿಗೆ ಬುಲ್ಸ್ ತಂಡ ಮುನ್ನಡೆ ಕಾಯ್ದುಕೊಂಡಿತ್ತು.

    ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಮ್ಯಾಕ್ಸ್‌ವೆಲ್

    ಇನ್ನು ಪಂದ್ಯದ ಎರಡನೆಯ ಹಂತದಲ್ಲಿ ಮತ್ತೆ ಆಟ ಶುರು ಮಾಡಿದ ಬೆಂಗಳೂರು ಬುಲ್ಸ್ ತಂಡ ಮತ್ತೊಮ್ಮೆ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು all out ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಪಂದ್ಯದ ಕೊನೆಯ ಕೆಲವು ನಿಮಿಷಗಳಲ್ಲಿ ಮತ್ತೆ ಉತ್ತಮ ಲಯಕ್ಕೆ ಮರಳಿದ ಜೈಪುರ್ ಬೆಂಗಳೂರು ಬುಲ್ಸ್ ವಿರುದ್ಧ ಪ್ರಾಬಲ್ಯ ಮೆರೆಯಲು ಶುರು ಮಾಡಿತು. ಆದರೆ ಅಂತಿಮವಾಗಿ ಪವನ್ ಹಾಗೂ ಭರತ್ ಅವರ ಯಶಸ್ವಿ ಪ್ರದರ್ಶನ ದಿಂದ ಬೆಂಗಳೂರು ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 2 ನಿಮಿಷ ಬಾಕಿ ಇರುವಂತೆಯೇ 8 ಅಂಕಗಳ ಮುನ್ನಡೆ ಸಾಧಿಸಿತ್ತು. ಕೊನೆಗೆ ನಾಯಕ ಪವನ್ ಅವರ ಯಶಸ್ವಿ ರೈತನೊಂದಿಗೆ 2 ಅಂಕ ಪಡೆಯುವ ಮೂಲಕ ಜೈಪುರ್ ಪಿಂಕ್ ಪ್ಯಾಂಥರ್ಸ್ ನ್ನು ಬೆಂಗಳೂರು ಬುಲ್ಸ್‌ 45-37 ಅಂತರದಿಂದ ಸೋಲಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ.

    ಬೆಂಗಳೂರು ಪರ ಭರತ್, ಪವನ್‌ ಉತ್ತಮ ಪ್ರದರ್ಶನ

    ಇನ್ನು ಬೆಂಗಳೂರು ಬುಲ್ಸ್ ಪರ , ಭರತ್ 15 ಅಂಕ ಮತ್ತು ಪವನ್ 10 ಅಂಕಗಳನ್ನು ಗಳಿಸುವ ಮೂಲಕ ಬೆಂಗಳೂರು ಬುಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಇನ್ನು ಜೈಪುರ್ ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ 16 ಅಂಕ ಗಳಿಸುವ ಮೂಲಕ ಏಕಾಂಗಿಯಾಗಿ ಜೈಪುರ್ ತಂಡಕ್ಕೆ ಆಸರೆಯಾದರು.

    ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಬೆಂಗಳೂರು

    ಇನ್ನು ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಬೆಂಗಳೂರು ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಈವರೆಗೂ 10 ಗೆಲುವು 8 ಸೋಲುಗಳು ಹಾಗೂ ಎರಡು ಟೈ ಪಂದ್ಯಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು
    ಜೈಪುರ ಪಿಂಕ್ ಪ್ಯಾಂಥರ್ಸ್‌ ಎಂಟು ಗೆಲುವುಗಳು, 9 ಸೋಲುಗಳು ಮತ್ತು ಎರಡು ಟೈ ಪಂದ್ಯಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಪ್ಯಾಂಥರ್ಸ್ ತಮ್ಮ ಹಿಂದಿನ ಸ್ಪರ್ಧೆಯಲ್ಲಿ ಯುಪಿ ಯೋಧಾ ವಿರುದ್ಧ 34-41 ಸೋಲು ಕಂಡಿತ್ತು.

    ಇದನ್ನೂ ಓದಿ: KKR ಪರ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡ ಶಾರುಖ್, ಜೂಹಿ ಚಾವ್ಲಾ ಮಕ್ಕಳು

    ಇನ್ನು ಬೆಂಗಳೂರು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯಗಳನ್ನು ಹರಿಯಾಣ ಸ್ಟೀಲರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ನಡುವೆ ಆಡಲಿದೆ.. ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರಷ್ಟೇ ಬೆಂಗಳೂರು ಪ್ಲೇಆಫ್ ಪ್ರವೇಶಿಸುವ ಕನಸು ನನಸಾಗಿ ಉಳಿಯಲಿದೆ.
    Published by:ranjumbkgowda1 ranjumbkgowda1
    First published: