Pro Kabaddi- ಬೆಂಗಳೂರಿನ ಶೆರಟಾನ್ ಹೋಟೆಲ್​ನಲ್ಲಿ ಪ್ರೋಕಬಡ್ಡಿ ಪಂದ್ಯಾವಳಿ; ಇಲ್ಲಿದೆ ವೇಳಾಪಟ್ಟಿ

Pro Kabaddi Match Schedule- ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್​ನ ಸ್ಥಳದಲ್ಲಿ ಪ್ರೋಕಬಡ್ಡಿಯ ಎಲ್ಲಾ ಪಂದ್ಯಗಳು ನಡೆಯಲಿವೆ. ಡಿ. 22ರಿಂದ ಜ. 20ರವರೆಗೆ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ.

ಪ್ರೋಕಬಡ್ಡಿ ಟ್ರೋಫಿ

ಪ್ರೋಕಬಡ್ಡಿ ಟ್ರೋಫಿ

  • News18
  • Last Updated :
  • Share this:
ಬೆಂಗಳೂರು, ಡಿ. 1: ಮನರಂಜನೆಯ ಮಹಾಪೂರವನ್ನೇ ಒದಗಿಸುವ ಪ್ರೋಕಬಡ್ಡಿ (VIVO Pro Kabaddi-8) ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟವಾಗಿದೆ. ಎರಡು ಹಂತದಲ್ಲಿ (Pro Kabaddi Tournament in 2 phases) ಈ ಎಂಟನೇ ಸೀಸನ್​ನ ಪ್ರೋಕಬಡ್ಡಿ ಪಂದ್ಯಗಳನ್ನ ನಡೆಸಲಾಗುತ್ತಿದೆ. ಡಿಸೆಂಬರ್ 22ಕ್ಕೆ ಪ್ರಾರಂಭವಾಗುವ ಮೊದಲ ಹಂತದಲ್ಲಿ ಪಂದ್ಯಗಳು ಜ. 20ರವರೆಗೆ ನಾನ್-ಸ್ಟಾಪ್ ನಡೆಯಲಿದೆ. 30 ದಿನ ವಿರಾಮ ಇಲ್ಲದೇ ನಿತ್ಯವೂ ಪಂದ್ಯಗಳು ನಡೆಯಲಿವೆ. ಈ ಮೊದಲ ಹಂತದಲ್ಲಿ ಎಲ್ಲಾ 12 ತಂಡಗಳೂ ಕೂಡ ತಲಾ 11 ಪಂದ್ಯಗಳನ್ನ ಆಡಲಿವೆ.

ಎರಡನೇ ಹಂತದ ವೇಳಾಪಟ್ಟಿ ಪ್ರಕಟವಾಗಬೇಕಿದ್ದು, ಅದರಲ್ಲೂ ಎಲ್ಲಾ ತಂಡಗಳು 11 ಪಂದ್ಯಗಳನ್ನ ಆಡಲಿವೆ. ಅಲ್ಲಿಗೆ ಪ್ರತಿಯೊಂದು ತಂಡವೂ 22 ಪಂದ್ಯಗಳನ್ನ ಆಡಲಿದೆ. ಎರಡನೇ ಹಂತದ ವೇಳಾಪಟ್ಟಿ ಮುಂದಿನ ತಿಂಗಳು, ಅಂದರೆ ಜನವರಿ ಮಧ್ಯಭಾಗದಲ್ಲಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಸ್ಥಳ ವೈಟ್​ಫೀಲ್ಡ್:

ಮೊದಲೇ ನಿಗದಿಯಾದಂತೆ ಬೆಂಗಳೂರಿನಲ್ಲೇ ಎಲ್ಲಾ ಪ್ರೋಕಬಡ್ಡಿ ಪಂದ್ಯಗಳು ನಡೆಯುವುದು ನಿಶ್ಚಿತವಾಗಿದೆ. ಎರಡೂ ಹಂತದ ಪಂದ್ಯಗಳೂ ಇಲ್ಲೇ ನಡೆಯುತ್ತವೆ ಕಂಠೀರವ ಸ್ಟೇಡಿಯಂನಲ್ಲಿ ಪಂದ್ಯಾವಳಿ ನಡೆಯುತ್ತದೆಂದು ಹೇಳಲಾಗುತ್ತಿತ್ತು. ಆದರೆ, ವೈಟ್​ಫೀಲ್ಡ್​ನಲ್ಲಿರುವ ಶೆರಟಾನ್ ಹೋಟೆಲ್​ನ ಒಳಾಂಣದಲ್ಲಿ (Sheraton Grand Bengaluru Whitefield Hotel & Convention Centre) ಪಂದ್ಯಗಳನ್ನ ಆಯೋಜಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Kabaddi Moves- ಡುಬ್ಕಿ, ಫ್ರಾಗ್ ಜಂಪ್, ಸ್ಕಾರ್ಪಿಯನ್ ಕಿಕ್… 6 ಸಖತ್ ಕಬಡ್ಡಿ ರೇಡಿಂಗ್ ಕಲೆಗಳು

ಪ್ರೇಕ್ಷಕರಿಲ್ಲದೆ ಪಂದ್ಯಗಳು:

ಆದರೆ, ಕಬಡ್ಡಿ ಪಂದ್ಯಗಳನ್ನ ವೀಕ್ಷಿಸಲು ಪ್ರೇಕ್ಷಕರು ಇರುವುದಿಲ್ಲ. ಟಿವಿಯಲ್ಲಿ ಮತ್ತು ಇಂಟರ್ನೆಟ್​ನಲ್ಲಿ ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಇರುತ್ತದೆ. ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್ ಈ ಪಂದ್ಯಗಳನ್ನ ಪ್ರಸಾರ ಮಾಡುತ್ತದೆ.

ಪ್ರೋಕಬಡ್ಡಿ-8 ಮೊದಲ ಭಾಗದ ಪಂದ್ಯಗಳು:



























































































































































































































































































































































































































ಸಂ. ದಿನ ವಾರ ಪಂದ್ಯ
 1 ಡಿ. 22 ಬುಧವಾರ ಬೆಂಗಳೂರು ಬುಲ್ಸ್ vs ಯು ಮುಂಬಾ
 2 ತೆಲುಗು ಟೈಟಾನ್ಸ್ VS ತಮಿಳ್ ತಲೈವಾಸ್
 3 ಬಂಗಾಲ್ ವಾರಿಯರ್ಸ್ VS ಯುಪಿ ಯೋದ್ಧಾ
 4 ಡಿ. 23 ಗುರುವಾರ ಗುಜರಾತ್ ಜೈಂಟ್ಸ್ VS ಜೈಪುರ್ ಪಿಂಕ್ ಪ್ಯಾಂಥರ್ಸ್
 5 ದಬಾಂಬ್ ಡೆಲ್ಲಿ VS ಪುಣೇರಿ ಪಲ್ಟಾನ್
 6 ಹರ್ಯಾಣ ಸ್ಟೀಲರ್ಸ್ VS ಪಾಟ್ನಾ ಪೈರೇಟ್ಸ್
 7 ಡಿ. 24 ಶುಕ್ರವಾರ ಯು ಮುಂಬಾ VS ದಬಾಂಗ್ ಡೆಲ್ಲಿ
 8 ತಮಿಳ್ ತಲೈವಾಸ್ VS ಬೆಂಗಳೂರು ಬುಲ್ಸ್
 9 ಬಂಗಾಲ್ ವಾರಿಯರ್ಸ್ VS ಗುಜರಾತ್ ಜೈಂಟ್ಸ್
 10 ಡಿ. 25 ಶನಿವಾರ ಪಾಟ್ನಾ ಪೈರೇಟ್ಸ್ VS ಯುಪಿ ಯೋದ್ಧಾ
11 ಪುಣೇರಿ ಪಲ್ಟಾನ್ VS ತೆಲುಗು ಟೈಟಾನ್ಸ್
 12 ಜೈಪುರ್ ಪಿಂಕ್ ಪ್ಯಾಂಥರ್ಸ್ VS ಹರ್ಯಾಣ ಸ್ಟೀಲರ್ಸ್
 13 ಡಿ. 26 ಭಾನುವಾರ ಗುಜರಾತ್ ಜೈಂಟ್ಸ್ VS ದಬಾಂಬ್ ಡೆಲ್ಲಿ
 14 ಬೆಂಗಳೂರು ಬುಲ್ಸ್ VS ಬಂಗಾಲ್ ವಾರಿಯರ್ಸ್
 15 ಡಿ. 27 ಸೋಮವಾರ ತಮಿಳ್ ತಲೈವಾಸ್ VS ಯು ಮುಂಬಾ
 16 ಯುಪಿ ಯೋದ್ಧಾ VS ಜೈಪುರ್ ಪಿಂಕ್ ಪ್ಯಾಂಥರ್ಸ್
 17 ಡಿ. 28 ಮಂಗಳವಾರ ಪುಣೇರಿ ಪಲ್ಟಾನ್ VS ಪಾಟ್ನಾ ಪೈರೇಟ್ಸ್
 18 ತೆಲುಗು ಟೈಟಾನ್ಸ್ VS ಹರ್ಯಾಣ ಸ್ಟೀಲರ್ಸ್
 19 ಡಿ. 29 ಬುಧವಾರ ದಬಾಂಗ್ ಡೆಲ್ಲಿ VS ಬಂಗಾಲ್ ವಾರಿಯರ್ಸ್
 20 ಯುಪಿ ಯೋದ್ಧಾ VS ಗುಜರಾತ್ ಜೈಂಟ್ಸ್
 21 ಡಿ. 30 ಗುರುವಾರ ಜೈಪುರ್ ಪಿಂಕ್ ಪ್ಯಾಂಥರ್ಸ್ VS ಯು ಮುಂಬಾ
 22 ಹರ್ಯಾಣ ಸ್ಟೀಲರ್ಸ್ VS ಬೆಂಗಳೂರು ಬುಲ್ಸ್
 23 ಡಿ. 31 ಶುಕ್ರವಾರ ತಮಿಳ್ ತಲೈವಾಸ್ VS ಪುಣೇರಿ ಪಲ್ಟಾನ್
 24 ಪಾಟ್ನಾ ಪೈರೇಟ್ಸ್ VS ಬಂಗಾಲ್ ವಾರಿಯರ್ಸ್
 25 ಜ. 1 ಶನಿವಾರ ಯು ಮುಂಬಾ VS ಯುಪಿ ಯೋದ್ಧಾ
 26 ಬೆಂಗಳೂರು ಬುಲ್ಸ್ VS ತೆಲುಗು ಟೈಟಾನ್ಸ್
 27 ದಬಾಂಬ್ ಡೆಲ್ಲಿ VS ತಮಿಳ್ ತಲೈವಾಸ್
 28 ಜ. 2 ಭಾನುವಾರ ಗುಜರಾತ್ ಜೈಂಟ್ಸ್ VS ಹರ್ಯಾಣ ಸ್ಟೀಲರ್ಸ್
 29 ಪುಣೇರಿ ಪಲ್ಟಾನ್ VS ಬೆಂಗಳೂರು ಬುಲ್ಸ್
 30 ಜ. 3 ಸೋಮವಾರ ಬಂಗಾಲ್ ವಾರಿಯರ್ಸ್ VS ಜೈಪುರ್ ಪಿಂಕ್ ಪ್ಯಾಂಥರ್ಸ್
 31 ತೆಲುಗು ಟೈಟಾನ್ಸ್ VS ಪಾಟ್ನಾ ಪೈರೇಟ್ಸ್
 32 ಜ. 4 ಮಂಗಳವಾರ ಹರ್ಯಾಣ ಸ್ಟೀಲರ್ಸ್ VS ಯು ಮುಂಬಾ
 33 ಯುಪಿ ಯೋದ್ಧಾ VS ತಮಿಳ್ ತಲೈವಾಸ್
 34 ಜ. 5 ಬುಧವಾರ ಪುಣೇರಿ ಪಲ್ಟಾನ್ VS ಗುಜರಾತ್ ಜೈಂಟ್ಸ್
 35 ದಬಾಂಬ್ ಡೆಲ್ಲಿ VS ತೆಲುಗು ಟೈಟಾನ್ಸ್
 36 ಜ. 6 ಗುರುವಾರ ಪಾಟ್ನಾ ಪೈರೇಟ್ಸ್ VS ತಮಿಳ್ ತಲೈವಾಸ್
 37 ಬೆಂಗಳೂರು ಬುಲ್ಸ್ VS ಜೈಪುರ್ ಪಿಂಕ್ ಪ್ಯಾಂಥರ್ಸ್
 38 ಜ. 7 ಶುಕ್ರವಾರ ಬಂಗಾಲ್ ವಾರಿಯನ್ಸ್ VS ಹರ್ಯಾಣ ಸ್ಟೀಲರ್ಸ್
 39 ಜೈಪುರ್ ಪಿಂಕ್ ಪ್ಯಾಂಥರ್ಸ್ VS ಪುಣೇರಿ ಪಲ್ಟಾನ್
 40 ಜ. 8 ಶನಿವಾರ ಯುಪಿ ಯೋದ್ಧಾ VS ದಬಾಂಬ್ ಡೆಲ್ಲಿ
 41 ಯು ಮುಂಬಾ VS ತೆಲುಗು ಟೈಟಾನ್ಸ್
 42 ಗುಜರಾತ್ ಜೈಂಟ್ಸ್ VS ಪಾಟ್ನಾ ಪೈರೇಟ್ಸ್
 43 ಜ. 9 ಭಾನುವಾರ ಪುಣೇರಿ ಪಲ್ಟಾನ್ VS ಬಂಗಾಲ್ ವಾರಿಯರ್ಸ್
 44 ಬೆಂಗಳೂರು ಬುಲ್ಸ್ VS ಯುಪಿ ಯೋದ್ಧಾ
 45 ಜ. 10 ಸೋಮವಾರ ತಮಿಳ್ ತಲೈವಾಸ್ VS ಹರ್ಯಾಣ ಸ್ಟೀಲರ್ಸ್
 46 ಜೈಪುರ್ ಪಿಂಕ್ ಪ್ಯಾಂಥರ್ಸ್ VS ದಬಾಂಗ್ ಡೆಲ್ಲಿ
 47 ಜ. 11 ಮಂಗಳವಾರ ಪಾಟ್ನಾ ಪೈರೇಟ್ಸ್ VS ಯು ಮುಂಬಾ
 48 ತೆಲುಗು ಟೈಟಾನ್ಸ್ VS ಗುಜರಾತ್ ಜೈಂಟ್ಸ್
 49 ಜ. 12 ಬುಧವಾರ ಹರ್ಯಾಣ ಸ್ಟೀಲರ್ಸ್ VS ಯುಪಿ ಯೋದ್ಧಾ
 50 ದಬಾಂಗ್ ಡೆಲ್ಲಿ VS ಬೆಂಗಳೂರು ಬುಲ್ಸ್
 51 ಜ. 13 ಗುರುವಾರ ಬಂಗಾಲ್ ವಾರಿಯನ್ಸ್ VS ತಮಿಳ್ ತಲೈವಾಸ್
 52 ಯು ಮುಂಬಾ VS ಪುಣೇರಿ ಪಲ್ಟಾನ್
 53 ಜ. 14 ಶುಕ್ರವಾರ ಜೈಪುರ್ ಪಿಂಕ್ ಪ್ಯಾಂಥರ್ಸ್ VS ಪಾಟ್ನಾ ಪೈರೇಟ್ಸ್
 54 ಗುಜರಾತ್ ಜೈಂಟ್ಸ್ VS ಬೆಂಗಳೂರು ಬುಲ್ಸ್
 55 ಜ. 15 ಶನಿವಾರ ಹರ್ಯಾಣ ಸ್ಟೀಲರ್ಸ್ VS ದಬಾಂಗ್ ಡೆಲ್ಲಿ
 56 ಯುಪಿ ಯೋದ್ಧಾ VS ತೆಲುಗು ಟೈಟಾನ್ಸ್
 57 ಯು ಮುಂಬಾ VS ಬಂಗಾಲ್ ವಾರಿಯರ್ಸ್
 58 ಜ. 16 ಭಾನುವಾರ ತಮಿಳ್ ತಲೈವಾಸ್ VS ಜೈಪುರ್ ಪಿಂಕ್ ಪ್ಯಾಂಥರ್ಸ್
 59 ಪಾಟ್ನಾ ಪೈರೇಟ್ಸ್ VS ಬೆಂಗಳೂರು ಬುಲ್ಸ್
 60 ಜ. 17 ಸೋಮವಾರ ಪುಣೇರಿ ಪಲ್ಟಾನ್ VS ಯುಪಿ ಯೋದ್ಧಾ
 61 ತೆಲುಗು ಟೈಟಾನ್ಸ್ VS ಬಂಗಾಲ್ ವಾರಿಯರ್ಸ್
 62 ಜ. 18 ಮಂಗಳವಾರ ದಬಾಂಗ್ ಡೆಲ್ಲಿ VS ಪಾಟ್ನಾ ಪೈರೇಟ್ಸ್
 63 ಗುಜರಾತ್ ಜೈಂಟ್ಸ್ VS ಯು ಮುಂಬಾ
 64 ಜ. 19 ಬುಧವಾರ ಹರ್ಯಾಣ ಸ್ಟೀಲರ್ಸ್ VS ಪುಣೇರಿ ಪಲ್ಟಾನ್
 65 ಜೈಪುರ್ ಪಿಂಕ್ ಪ್ಯಾಂಥರ್ಸ್ VS ತೆಲುಗು ಟೈಟಾನ್ಸ್
 66 ಜ. 20 ಗುರುವಾರ ತಮಿಳ್ ತಲೈವಾಸ್ VS ಗುಜರಾತ್ ಜೈಂಟ್ಸ್
 67 -

ಇದನ್ನೂ ಓದಿ: PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

ಎರಡನೇ ಹಂತದ ಪಂದ್ಯಗಳ ಪಟ್ಟಿ ಮುಂದಿನ ತಿಂಗಳು: 

ಇವು ಮೊದಲ ಹಂತದ ಪಂದ್ಯಾವಳಿಯ ವೇಳಾಪಟ್ಟಿಯಾಗಿದೆ. ಎರಡನೇ ಹಂತದ ಪಂದ್ಯಾವಳಿಯ ವೇಳಾಪಟ್ಟಿ ಜನವರಿ ಮಧ್ಯ ಭಾಗದಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ತಂಡಗಳು ಕಾರ್ಯತಂತ್ರ, ರಣತಂತ್ರಗಳನ್ನ ಹೆಣೆಯಲು ಮೊದಲ ಹಂತದ ಬಳಿಕ ಟೂರ್ನಿಗೆ ಅಲ್ಪವಿರಾಮ ಕೊಡಲಾಗುತ್ತದೆ ಎಂದು ಟೂರ್ನಿ ಆಯೋಜಕರಾದ ಮಾಶಾಲ್ ಸ್ಪೋರ್ಟ್ಸ್ (Mashal Sports) ಸಂಸ್ಥೆ ತಿಳಿಸಿದೆ.
Published by:Vijayasarthy SN
First published: