Pro Kabaddi 2022: ಬೆಂಗಳೂರು ಬುಲ್ಸ್​​ಗೆ ಹರಿಯಾಣ ಸ್ಟೀಲರ್ಸ್​ ಸವಾಲು! ಇಬ್ಬರಲ್ಲಿ ಯಾರು ಬಲಿಷ್ಠ?

ಇಂದಿನ ಪಂದ್ಯದಲ್ಲಿ ಎರಡನೇ ಸ್ಥಾನಕ್ಕೆ ಯಾರು ಏರುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಬೆಂಗಳೂರು ಬುಲ್ಸ್​ ತಂಡ ನಿನ್ನೆ ತಮಿಳು ತಲೈವಾ ತಂಡ ಎದುರು 20 ಅಂಕಗಳಿಂದ ಗೆದ್ದು ಬೀಗಿದೆ. ಅದೇ ಜೋಶ್​ನಲ್ಲಿ ಇಂದೂ ಕೂಡ ಅಖಾಡಕ್ಕೆ ಇಳಿಯಲಿದೆ.

ಬೆಂಗಳೂರು ಬುಲ್ಸ್​ v/s ಹರಿಯಾಣ ಸ್ಟೀಲರ್ಸ್

ಬೆಂಗಳೂರು ಬುಲ್ಸ್​ v/s ಹರಿಯಾಣ ಸ್ಟೀಲರ್ಸ್

  • Share this:
ಪ್ರೋ ಕಬಡ್ಡಿ 2022 ಟೂರ್ನಿ ಆರಂಭವಾಗಿ ಮುಕ್ಕಾಲು ಪಂದ್ಯಗಳು ನಡೆದಿದೆ. ಹಲವು ಕಾದಾಟ, ರಣ ರೋಚಕ ಪಂದ್ಯಗಳಿಗೆ ಈ ಬಾರಿಯ ಕಬಡ್ಡಿ ಟೂರ್ನಿ(Kabaddi Tournament) ಸಾಕ್ಷಿಯಾಗಿದೆ. ಟೂರ್ನಿ ಕೊನೆಯ ಪಂದ್ಯಗಳು ಸಾಕಷ್ಟು ರೋಚಕತೆಯಿಂದ ಕೂಡಿದೆ


ಇಂದು ಕೂಡ ಎರಡು ರಣರೋಚಕ ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಯುಪಿ ಯೋಧಾ​ ಮತ್ತು ಯು ಮುಂಬ​​​ ತಂಡಗಳು ಸೆಣಸಾಟ ನಡೆಸಿಲಿವೆ. ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ಮತ್ತು ಹರಿಯಾಣ ಸ್ಟೀಲರ್ಸ್​ ತಂಡಗಳು ಸೆಣಸಾಟ ನಡೆಸಲಿವೆ.


ಬೆಂಗಳೂರು ಬುಲ್ಸ್​ ತಂಡ ಇಲ್ಲಿವರೆಗೂ 21 ಪಂದ್ಯಗಳನ್ನು ಆಡಿದೆ. ಅದರಲ್ಲಿ 10 ಪಂದ್ಯಗಳಲ್ಲಿ ಗೆದ್ದು ಬೀಗಿದ್ದಾರೆ. 9 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಇನ್ನೂ ಒಟ್ಟು 61 ಅಂಕಗಳಿಸಿ, 6ನೇ ಸ್ಥಾನದಲ್ಲಿದೆ.


ಹರಿಯಾಣ ಸ್ಟೀಲರ್ಸ್ ತಂಡ ಇಲ್ಲಿವರೆಗೂ 20 ಪಂದ್ಯಗಳನ್ನು ಆಡಿದೆ. ಅದರಲ್ಲಿ10ರಲ್ಲಿ ಜಯ ಸಾಧಿಸಿದೆ. 7ರಲ್ಲಿ ಸೋಲನುಭವಿಸಿದೆ. 3 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಒಟ್ಟು 63 ಅಂಕಗಳಿಸಿ 4ನೇ ಸ್ಥಾನದಲ್ಲಿದೆ.


ಇಂದಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ಗೆ ಹರಿಯಾಣ ಸ್ಟೀಲರ್ಸ್ ಚಾಲೆಂಜ್ ಮಾಡಿದೆ. ಎರಡು ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದಾರೆ. ಕೆಲ ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗೆ ಉಳಿದಿರವುದು ಎರಡು ತಂಡಗಳಿಗೆ ಕಷ್ಟವಾಗಲಿದೆ.


ಇಂದಿನ ಪಂದ್ಯದಲ್ಲಿ ಎರಡನೇ ಸ್ಥಾನಕ್ಕೆ ಯಾರು ಏರುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಬೆಂಗಳೂರು ಬುಲ್ಸ್​ ತಂಡ ನಿನ್ನೆ ತಮಿಳು ತಲೈವಾ ತಂಡ ಎದುರು 20 ಅಂಕಗಳಿಂದ ಗೆದ್ದು ಬೀಗಿದೆ. ಅದೇ ಜೋಶ್​ನಲ್ಲಿ ಇಂದೂ ಕೂಡ ಅಖಾಡಕ್ಕೆ ಇಳಿಯಲಿದೆ
Published by:Vasudeva M
First published: