Pro Kabaddi: ಈ ಸೀಸನ್​ ಸಖತ್​ ಡಲ್​ ಹೊಡೆದ ರೆಕಾರ್ಡ್ ಬ್ರೇಕರ್​ ಪರ್ದೀಪ್​.. ಇವ್ರ ದಾಖಲೆ ಮುರಿಯೋಕೆ ಕಾಯ್ತಿದ್ದಾರೆ 3 ಪ್ಲೇಯರ್ಸ್​!

ಈ ಸೀಸನ್‌ನಲ್ಲಿ ಪರ್ದೀಪ್ ನರ್ವಾಲ್ ಅಷ್ಟಾಗಿ ಫಾರ್ಮ್‌(Form)ನಲ್ಲಿ ಇಲ್ಲ. ಇದೇ ರೀತಿ ಆಟ ಮುಂದುವರಿದರೆ ಇನ್ನುಳಿದ ಕಬ್ಬಡಿ ಕಲಿಗಳು ನರ್ವಾಲ್ ದಾಖಲೆಗಳನ್ನು ಬ್ರೇಕ್(Break) ಮಾಡಲು ಹತ್ತಿರದಲ್ಲಿದ್ದಾರೆ.

ಪರ್ದೀಪ್​ ನರ್ವಾಲ್

ಪರ್ದೀಪ್​ ನರ್ವಾಲ್

  • Share this:
ಪ್ರೋ ಕಬಡ್ಡಿ(Pro Kabaddi) ಲೀಗ್‌ ಪಂದ್ಯಗಳನ್ನು ಕೆಲ ವರ್ಷಗಳಿಂದ ನೋಡುತ್ತಿರುವವರೆಲ್ಲರಿಗೂ ರೆಕಾರ್ಡ್ ಬ್ರೇಕರ್(Record Breaker) ಎಂದೇ ಖ್ಯಾತನಾಗಿರುವ ಪರ್ದೀಪ್ ನರ್ವಾಲ್(Pardeep Narwal) ಕಬಡ್ಡಿ ಜಗತ್ತಿನ ದೈತ್ಯ. ಸ್ಟಾರ್ ಆಟಗಾರ ಪರ್ದೀಪ್ ನರ್ವಾಲ್ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ದುಬಾರಿ ಆಟಗಾರ(Costly Player) ಮತ್ತು ಅತಿ ಹೆಚ್ಚು ಸೂಪರ್ 10 ಅಂಕ ಪಡೆದಿರುವ ದಾಖಲೆ ಕೂಡ ಅವರ ಹೆಸರಿನಲ್ಲಿದೆ. ಈವರೆಗೆ 123 ಪಂದ್ಯಗಳನ್ನು ಆಡಿ 1,267 ಪಾಯಿಂಟ್ ಪಡೆದಿದ್ದು, ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ರೈಡರ್(Successful Rider) ಆಗಿ ದಾಖಲೆ ಬರೆದಿದ್ದಾರೆ. ಆದರೆ ಈ ಸೀಸನ್‌ನಲ್ಲಿ ಪರ್ದೀಪ್ ನರ್ವಾಲ್ ಅಷ್ಟಾಗಿ ಫಾರ್ಮ್‌(Form)ನಲ್ಲಿ ಇಲ್ಲ. ಇದೇ ರೀತಿ ಆಟ ಮುಂದುವರಿದರೆ ಇನ್ನುಳಿದ ಕಬ್ಬಡಿ ಕಲಿಗಳು ನರ್ವಾಲ್ ದಾಖಲೆಗಳನ್ನು ಬ್ರೇಕ್(Break) ಮಾಡಲು ಹತ್ತಿರದಲ್ಲಿದ್ದಾರೆ.

ಈ ಸೀಸನ್​ ಡಲ್​ ಹೊಡೆದ ರೆಕಾರ್ಡ್ ಬ್ರೇಕರ್​!

ನರ್ವಾಲ್ ಪಾಟ್ನಾ ಪೈರೇಟ್ಸ್ ಜೊತೆಗೆ ಪ್ರೋ ಕಬಡ್ಡಿಗೆ ಇಳಿದರು. ಭಾರಿ 1.65 ಕೋಟಿಗೆ ಸೇಲ್ ಆದ ನರ್ವಾಲ್ ಯುಪಿ ಯೋಧ ತಂಡದಲ್ಲಿ VIVO ಪ್ರೊ ಕಬಡ್ಡಿ ಲೀಗ್ ಆಡುತ್ತಿದ್ದಾರೆ. ಆದರೆ,ಈ ಸೀಸನ್‌ನಲ್ಲಿ ರೆಕಾರ್ಡ್ ಬ್ರೇಕರ್ ಅಬ್ಬರ ಕೊಂಚ ಕಡಿಮೆಯಾದಂತೆ ಕಾಣುತ್ತಿದೆ. 16 ಪಂದ್ಯಗಳನ್ನು ಆಡಿ 107 ರೇಡ್ ಪಾಯಿಂಟ್ಸ್ ಗಳಿಸಿದ್ದಾರೆ. ಪಾಟ್ನಾ ಪೈರೇಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಪರ್ದೀಪ್ ನರ್ವಾಲ್ ಅವರನ್ನು 35 ನಿಮಿಷಗಳ ಕಾಲ ಬೆಂಚ್ ಮೇಲೆ ಕೂರಿಸಲಾಗಿತ್ತು. ಪರ್ದೀಪ್ ಪ್ರಸ್ತುತ ಹೆಚ್ಚಿನ ರೈಡ್ ಪಾಯಿಂಟ್‌ಗಳಲ್ಲಿ 9ನೇ ಸ್ಥಾನದಲ್ಲಿದ್ದಾರೆ.

ಕಳಪೆ ಪ್ರದರ್ಶನ ತೋರಿರುವ ಪರ್ದೀಪ್​ ನರ್ವಾಲ್​!

ಪರ್ದೀಪ್ ಹೀಗೆ ತಮ್ಮ ಕಳಪೆ ಫಾರ್ಮ್ ಅನ್ನು ಪ್ರದರ್ಶಿಸುತ್ತಿದ್ದರೆ, ಕಬ್ಬಡಿಯ ಈ ಮೂರು ಆಟಗಾರರು ಅವರ ದಾಳಲೆಯನ್ನು ಮುರಿದು ರೇಡ್ ಪಾಯಿಂಟ್‌ಗಳ ಲೀಡರ್‌ ಬೋರ್ಡ್‌ನಲ್ಲಿ ರೆಕಾರ್ಡ್ ಬ್ರೇಕರ್‌ನನ್ನು ಹಿಂದಿಕ್ಕ ಬಹುದು. ಹಾಗಾದರೆ ಯಾರು ಆ ಸ್ಟಾರ್ ಆಟಗಾರರು, ಇಲ್ಲಿದೆ ಡೀಟೇಲ್ಸ್.

1) ಪವನ್ ಕುಮಾರ್ ಸೆಹ್ರಾವತ್, ಬೆಂಗಳೂರು ಬುಲ್ಸ್

ತಂಡದ ಸ್ಟಾರ್ ಆಟಗಾರ ಪವನ್ ಕುಮಾರ್ ಸೆಹ್ರಾವತ್ ಉತ್ತುಂಗದ ಫಾರ್ಮ್‌ನಲ್ಲಿದ್ದಾರೆ. ಪ್ರಸ್ತುತ PKL 8 ರಲ್ಲಿ ನಂ. 1 ರೈಡರ್ ಆಗಿದ್ದಾರೆ. ಈ ಸೀಸನ್‌ನಲ್ಲಿ 200 ರೇಡ್ ಅಂಕಗಳನ್ನು ಗಳಿಸಿದ ಏಕೈಕ ಆಟಗಾರ. ಪವನ್ 898 ರೇಡ್ ಪಾಯಿಂಟ್‌ಗಳೊಂದಿಗೆ ಸಾರ್ವಕಾಲಿಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಹೈ ಫ್ಲೈಯರ್‌ ಸೆಹ್ರಾವತ್‌ ಎಂದೇ ಖ್ಯಾತಿ ಹೊಂದಿರುವ ಪವನ್ ರೇಡಿಂಗ್ ವೇಳೆ ಮಾಡುವ ಜಿಗಿತ. ಡಿಫೆಂಡರ್‌ಗಳಿಂದ ತಪ್ಪಿಸಿಕೊಳ್ಳುವ ಅವರ ಆಟದ ಪರಿ ನಿಜಕ್ಕೂ ಅದ್ಭುತವಾಗಿರುತ್ತದೆ. ಪರ್ದೀಪ್ ನರ್ವಾಲ್ ಅವರ ದಾಖಲೆ ಮುರಿಯಲು ಇನ್ನೂ 369 ರೇಡ್ ಪಾಯಿಂಟ್‌ಗಳನ್ನು ಪವನ್ ಗಳಿಸಬೇಕಾಗಿದೆ. ಪರ್ದೀಪ್ ಅವರ ಆಟ ಹೀಗೆ ಮುಂದುವರೆದರೆ ಪವನ್ ರೆಕಾರ್ಡ್ ಬ್ರೇಕ್ ಮಾಡುವ ಎಲ್ಲಾ ಸಾಧ್ಯತೆಗಳಿವೆ.

ಇದನ್ನೂ ಓದಿ: ಇಂದು `ಹಿಟ್​ಮ್ಯಾನ್’​ ಜೊತೆ ಓಪನಿಂಗ್​ಗೆ ಬರ್ತಿರೋದು ಇವ್ರೇ.. ಟೆನ್ಶನ್​ ಬೇಡ ಚಿಂದಿ ಉಡಾಯಿಸ್ತಾನೆ ಎಂದ ಫ್ಯಾನ್ಸ್​!

2) ಮಣಿಂದರ್ ಸಿಂಗ್, ಬೆಂಗಾಲ್ ವಾರಿಯರ್ಸ್

ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್ ಸಿಂಗ್ ಅವರು ತಮ್ಮ PKL ವೃತ್ತಿಜೀವನದಲ್ಲಿ 918 ರೇಡ್ ಪಾಯಿಂಟ್‌ಗಳೊಂದಿಗೆ ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಿಂಗ್ ಅವರು ಎಲ್ಲಾ ಸೀಸನ್‌ನಲ್ಲಿ ಆಡಿದ್ದರೆ ಹೆಚ್ಚು ಅಂಕಗಳನ್ನು ಗಳಿಸಬಹುದಿತ್ತು, ಆದರೆ ಅವರು ಇನ್ನೂ ನಂ.1 ರೈಡರ್ ಆಗುವ ಅವಕಾಶವನ್ನು ಹೊಂದಿದ್ದಾರೆ. ಸಿಂಗ್ ಕಳೆದ ಮೂರು ಕಬ್ಬಡಿ ಸೀಸನ್‌ನಲ್ಲಿ ಬಂಗಾಳದ ಪರ ಒಳ್ಳೆಯ ಫಾರ್ಮ್‌ನಲ್ಲಿ ಆಡಿದ್ದಾರೆ. ಇದೇ ಪ್ರದರ್ಶನ ಮುಂದುವರಿದರೆ ಮುಂದೊಂದು ದಿನ ಅಗ್ರಸ್ಥಾನಕ್ಕೇರಬಹುದು.

ಇದನ್ನೂ ಓದಿ: ವೀಕೆಂಡ್​ ಮಸ್ತಿ.. ಇಂದು ಒಟ್ಟು 3 ರಣರೋಚಕ ಪಂದ್ಯಗಳಲ್ಲಿ ಗೆಲ್ಲೋದ್ಯಾರು? ಇಲ್ಲಿದೆ ನೋಡಿ

3) ನವೀನ್ ಕುಮಾರ್, ದಬಾಂಗ್ ದೆಹಲಿ
ನವೀನ್ ಕುಮಾರ್ ಪ್ರೋ ಕಬಡ್ಡಿಯಲ್ಲಿ ಕೇವಲ 55 ಪಂದ್ಯಗಳನ್ನು ಆಡಿದ್ದಾರೆ, ಆದರೆ ಈಗಾಗಲೇ 608 ರೇಡ್ ಅಂಕಗಳನ್ನು ಗಳಿಸಿದ್ದಾರೆ. ನವೀನ್ ಕೌಶಲ್ಯಕ್ಕೆ ಡಿಫೆಂಡರ್‌ಗಳು ತತ್ತರಿಸಿ ಹೋಗಿದ್ದಾರೆ. ನವೀನ್ ಸ್ವಲ್ಪ ಸಮಯದ ಹಿಂದೆ PKL 8 ನಲ್ಲಿ ನಂ. 1 ರೈಡರ್ ಆಗಿದ್ದರು. ಆದಾಗ್ಯೂ, ಗಾಯದ ಕಾರಣ, ನವೀನ್ ಕೆಲ ಮ್ಯಾಚ್‌ಗಳಲ್ಲಿ ಆಡಲಿಲ್ಲ. ಅವರ ಸದ್ಯದ ಆಟದ ವೈಖರಿ ನೋಡಿದರೆ, ಸಾರ್ವಕಾಲಿಕ ಮೋಸ್ಟ್ ರೈಡ್ ಪಾಯಿಂಟ್‌ಗಳ ಪಟ್ಟಿಯಲ್ಲಿ ನವೀನ್‌ ನಂ.1 ಸ್ಥಾನ ಪಡೆದರೂ ಅಚ್ಚರಿ ಇಲ್ಲ.
Published by:Vasudeva M
First published: