Pro Kabaddi 2022: ವೀಕೆಂಡ್​ ಮಸ್ತಿ.. ಇಂದು ಒಟ್ಟು 3 ರಣರೋಚಕ ಪಂದ್ಯಗಳಲ್ಲಿ ಗೆಲ್ಲೋದ್ಯಾರು? ಇಲ್ಲಿದೆ ನೋಡಿ

ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 94 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಫೆಬ್ರವರಿ 5) ಒಟ್ಟು 3 ಪಂದ್ಯಗಳು ನಡೆಯಲಿವೆ. ಈ 3 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಯು ಮುಂಬಾ ಮತ್ತು ತಮಿಳ್​ ತಲೈವಾಸ್​​ ತಂಡಗಳು ಸೆಣಸಾಟ ನಡೆಸಿಲಿವೆ.

ಯು ಮುಂಬಾ vs ತಮಿಳ್​ ತಲೈವಾಸ್​

ಯು ಮುಂಬಾ vs ತಮಿಳ್​ ತಲೈವಾಸ್​

  • Share this:
ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್(Bengaluru Bulls) ಮತ್ತು ಯು ಮುಂಬಾ(U Mumba) ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಈ ಬಾರಿಯ ಪ್ರೊ ಕಬಡ್ಡಿ(Pro Kabaddi) ಲೀಗ್​ ಆರಂಭಗೊಂಡಿತ್ತು. ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 94 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಫೆಬ್ರವರಿ 5) ಒಟ್ಟು 3 ಪಂದ್ಯಗಳು ನಡೆಯಲಿವೆ. ಈ 3 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಯು ಮುಂಬಾ ಮತ್ತು ತಮಿಳ್​ ತಲೈವಾಸ್​​ ತಂಡಗಳು ಸೆಣಸಾಟ ನಡೆಸಿಲಿವೆ. ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ತೆಲುಗು ಟೈಟಾನ್ಸ್​ ತಂಡಗಳು ಸೆಣಸಾಟ ನಡೆಸಲಿವೆ. ತೃತೀಯ ಪಂದ್ಯದಲ್ಲಿ ಪಿಂಕ್​ ಪ್ಯಾಂಥರ್ಸ್ ಮತ್ತು ಹರಿಯಾಣ ಸ್ಟೀಲರ್ಸ್​ ಸೆಣಸಾಟ ನಡೆಸಲಿವೆ.  ಎಲ್ಲ ತಂಡಗಳಿಗೆ ಗೆಲುವು ಇಲ್ಲಿ ಅನಿವಾರ್ಯವಾಗಿದೆ. ಈಗಾಗಲೇ ಮೂಕ್ಕಾಲು ಭಾಗದಷ್ಟು ಪಂದ್ಯಗಳು ಮುಗಿದಿವೆ. ಹೀಗಾಗಿ ಲೀಗ್​ ಹಂತದ ಕೊನೆಯ ಪಂದ್ಯಗಳು ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ. ಶನಿವಾರ ಹಿನ್ನೆಲೆ ಇಂದು ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಹೀಗಾಗಿ ಇಂದು ಕಬಡ್ಡಿ ಪ್ರೇಮಿಗಳಿಗೆ ಸಖತ್​ ಥ್ರಿಲ್​ ನೀಡುವುದರಲ್ಲಿ ಅನುಮಾನವೇ ಇಲ್ಲ. 

ಯು ಮುಂಬಾ V/S ತಮಿಳ್​ ತಲೈವಾಸ್​

ಮೊದಲನೇ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಮಣಿಸಲು ತಮಿಳ್​ ತಲೈವಾಸ್​ ಸಜ್ಜಾಗಿದ್ದಾರೆ. ಇಬ್ಬರು ಒಟ್ಟು ತಲಾ 15 ಪಂದ್ಯಗಳನ್ನು ಆಡಿದ್ದಾರೆ.  ತಲಾ  5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ತಮಿಳ್​ ತಲೈವಾಸ್​ 4 ಪಂದ್ಯಗಳಲ್ಲಿ ಸೋತು ಪಾಯಿಂಟ್ಸ್​ ಟೇಬಲ್​ನಲ್ಲಿ 6ನೇ  ಸ್ಥಾನದಲ್ಲಿದ್ದಾರೆ. ಇನ್ನೂ ಯು ಮುಂಬಾ 5 ಪಂದ್ಯಗಳಲ್ಲಿ ಸೋತು 7ನೇ ಸ್ಥಾನದಲ್ಲಿದೆ.

ಯುಪಿ ಯೋಧಾ V/S ತೆಲುಗು ಟೈಟಾನ್ಸ್​

ತೆಲುಗು ಟೈಟಾನ್ಸ್ ಒಟ್ಟು 15 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಟ್ಟು 11 ಪಂದ್ಯಗಳಲ್ಲಿ ಸೋತು ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆ ಸ್ಥಾನದಲ್ಲಿದೆ. ಯುಪಿ ಯೋಧಾ ತಂಡ ಒಟ್ಟು 16 ಪಂದ್ಯಗಳಲ್ಲಿ, 5ರಲ್ಲಿ ಗೆದ್ದು, 8 ಪಂದ್ಯಗಳಲ್ಲಿ ಸೋಲುಂಡಿದೆ.

ಪಿಂಕ್​ ಪ್ಯಾಂಥರ್ಸ್​ V/S ಹರಿಯಾಣ ಸ್ಟೀಲರ್ಸ್​

ಹರಿಯಾಣ ಸ್ಟೀಲರ್ಸ್​ ಒಟ್ಟು 16 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. 6 ಪಂದ್ಯಗಳಲ್ಲಿ ಸೋತಿದೆ. ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನೂ ಪಿಂಕ್  ಫ್ಯಾಂಥರ್ಸ್ 15 ಪಂದ್ಯಗಳನ್ನು ಆಡಿದ್ದು, 7 ರಲ್ಲಿ ಗೆದ್ದು 6 ಪಂದ್ಯದಲ್ಲಿ ಸೋತಿದೆ. 5ನೇ ಸ್ಥಾನದಲ್ಲಿದೆ. ಇನ್ನೂ ಇಬ್ಬರ ನಡುವೆ ಕಾದಾಟ ಹೆಚ್ಚು ನಡೆಯಲಿದೆ.

ಇದನ್ನೂ ಓದಿ: ಈ ಬಾರಿ ಚಾಂಪಿಯನ್ಸ್​ ಆಗೋ ಎಲ್ಲ ಅರ್ಹತೆ ಇರೋದು ಈ ಟೀಮ್​ಗೆ ಮಾತ್ರ ಅಂತೆ!

ಬೆಂಗಳೂರು ಬುಲ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ!

ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡೆಸುತ್ತಿದ್ದಾರೆ. ಇನ್ನು ಡಿಫೆಂಡರ್ ಮಹೇಂದರ್ ಸಿಂಗ್ ಬೆಂಗಳೂರು ಬುಲ್ಸ್ ಶಕ್ತಿ.  ಹೀಗಾಗಿ ಈ ಬಾರಿ ಕಪ್​ ನಮ್ದೆ ಅಂತ ಟ್ವೀಟರ್​ನಲ್ಲಿ ಟ್ರೆಡಿಂಗ್​ ಆಗುತ್ತಿದೆ.

ಇದನ್ನೂ ಓದಿ: ಇಂದು ಇಂಡೋ- ಇಂಗ್ಲೆಂಡ್​ ನಡುವೆ ಫೈನಲ್​ ಫೈಟ್​! ಯಾರಿಗೆ ಒಲಿಯಲಿದೆ ವಿಶ್ವಕಪ್ ಕಿರೀಟ?

ಯಾರ‍್ಯಾರಿಗೆ ಎಷ್ಟು ಅಂಕ? ಟಾಪ್​ 2 ಯಾರು?
 ಮೊದನಿಂದಲೂ ಆಕ್ರಮಣಕಾರಿ ಆಟವಾಡಿಕೊಂಡು ಬಂದ ದಬಾಂಗ್ ಡೆಲ್ಲಿ 57 ಪಾಯಿಂಟ್ಸ್​​ಗಳೊಂದಿಗೆ ಮೊದಲ ಸ್ಥಾನದಲ್ಲಿ ಇದ್ದಾರೆ. ಆಡಿದ 17 ಪಂದ್ಯಗಳಲ್ಲಿ 9 ಪಂದ್ಯಗಳಲ್ಲಿ ದಂಬಾಗ್​ ಡೆಲ್ಲಿ ಗೆದ್ದಿದ್ದಾರೆ.  5 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಇನ್ನೂ 3ನೇ ಸ್ಥಾನದಲ್ಲಿ ನಮ್ಮ ಬೆಂಗಳೂರು ಬುಲ್ಸ್​ ಇದ್ದಾರೆ. ಇಲ್ಲಿವರೆಗೂ 18 ಪಂದ್ಯಗಳಾಡಿದ್ದು, 9 ರಲ್ಲಿ ನಮ್ಮ ಹುಡುಗರು ಗೆದ್ದು ಬೀಗಿದ್ದಾರೆ. 7 ಪಂದ್ಯಗಳಲ್ಲಿ ಸೋತಿದ್ದಾರೆ.
Published by:Vasudeva M
First published: