Pro Kabaddi 2021: ಮೊದಲ ಪಂದ್ಯವೇ ರಣರೋಚಕ.. ಬಲಿಷ್ಠ ಹೋರಾಟ ನಡೆಸಿ ಸೋತ ಬೆಂಗಳೂರು ಬುಲ್ಸ್​!

ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​(Bengaluru Bulls) ಅಂತ್ಯದಲ್ಲಿ ಎಡವಿದ್ದಾರೆ. ಯು ಮುಂಬಾಗೆ(U Mumba) ಬಲಿಷ್ಠ ಪೈಪೋಟಿ ನೀಡಿದ್ದ ಬೆಂಗಳೂರು ಬುಲ್ಸ್​ ಕೊನೆಯ ಹಂತದಲ್ಲಿ ಸ್ಟ್ಯಾಟರ್ಜಿ ಸರಿಯಿಲ್ಲದೇ ಸೋತಿದೆ. ಪವನ್​ಕುಮಾರ್(Pawan Kumar) ಆರಂಭದಲ್ಲಿ ಅಬ್ಬರಿಸಿದ್ದರೆ, ಸೆಕೆಂಡ್ ಹಾಫ್​(Second Half)ನಲ್ಲಿ ಅವರ ಆಟ ನಡೆಯಲಿಲ್ಲ. 

ಬೆಂಗಳೂರು ಬುಲ್ಸ್​ ನಾಯಕ ಪವನ್​ ಕುಮಾರ್​

ಬೆಂಗಳೂರು ಬುಲ್ಸ್​ ನಾಯಕ ಪವನ್​ ಕುಮಾರ್​

  • Share this:
ಕಬಡ್ಡಿ.. ಕಬಡ್ಡಿ.. ಕಬಡ್ಡಿ.. ಇದನ್ನು ಕೇಳುತ್ತಿದ್ದರೆ ಸಾಕು, ನಾವು ಒಮ್ಮೆ ತೊಡೆ ತಟ್ಟಿ ಎದುರಾಳಿಯ ಹುಟ್ಟಡಗಿಸೋಣ ಎನ್ನುವ ಜೋಶ್(Josh)​ ಬರುತ್ತೆ. ಅಂತಹ ಜೋಶ್​ ನೀಡುವ ಪ್ರೊ ಕಬಡ್ಡಿ(Pro Kabaddi) ಹಬ್ಬಕ್ಕೆ ಇಂದು ಚಾಲನೆ ಸಿಕ್ಕಿದೆ. ಹೌದು, ವಿವೋ ಪ್ರೋ ಕಬಡ್ಡಿ ಲೀಗ್(Vivo Pro Kabaddi) ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ. ಪ್ರೋ ಕಬ್ಬಡಿ ಮೊದಲ ಪಂದ್ಯವೇ ಸಾಕಷ್ಟ ರೋಚಕತೆಯಿಂದ ಕೂಡಿತ್ತು.  ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​(Bengaluru Bulls) ಅಂತ್ಯದಲ್ಲಿ ಎಡವಿದ್ದಾರೆ. ಯು ಮುಂಬಾಗೆ(U Mumba) ಬಲಿಷ್ಠ ಪೈಪೋಟಿ ನೀಡಿದ್ದ ಬೆಂಗಳೂರು ಬುಲ್ಸ್​ ಕೊನೆಯ ಹಂತದಲ್ಲಿ ಸ್ಟ್ಯಾಟರ್ಜಿ ಸರಿಯಿಲ್ಲದೇ ಸೋತಿದೆ. ಪವನ್​ಕುಮಾರ್(Pawan Kumar) ಆರಂಭದಲ್ಲಿ ಅಬ್ಬರಿಸಿದ್ದರೆ, ಸೆಕೆಂಡ್ ಹಾಫ್​(Second Half)ನಲ್ಲಿ ಅವರ ಆಟ ನಡೆಯಲಿಲ್ಲ.  ಕೇವಲ ಪಂದ್ಯ ಮುಗಿಯಲು ಕೇವಲ 5 ನಿಮಿಷ ಇರುವಾಗ ಬೆಂಗಳೂರು ಬುಲ್ಸ್​ ತಂಡ ಯು ಮುಂಬಾಗೆ ಹೆಚ್ಚು ಪಾಯಿಂಟ್ಸ್​ ನೀಡಿತು.  ಹೀಗಾಗಿ ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್​ ತಂಡ ಎಡವಿತು.  ಬೆಂಗಳೂರು ಬುಲ್ಸ್ 30 ಅಂಕ​ ಗಳಿಸಿದ್ರೆ,  ಯು ಮುಂಬಾ 46 ಅಂಕಗಳಿಸಿ ಗೆದ್ದು ಬೀಗಿದೆ. 

ಫಸ್ಟ್​ ಹಾಫ್​ನಲ್ಲಿ ಹಿನ್ನೆಡೆ ಅನುಭವಿಸಿದ ಬುಲ್ಸ್​!

ಓಪೆನಿಂಗ್​ ಪಂದ್ಯದಲ್ಲಿ ಎರಡು ತಂಡದ ಆಟಗಾರರ ರಣರೋಚಕ ಪ್ರದರ್ಶಣ ನೀಡಿದ್ದರು. ಫಸ್ಟ್​ ಹಾಫ್​ ಅಂತ್ಯಕ್ಕೆ ಬೆಂಗಳೂರು ತಂಡ ಒಟ್ಟು 17 ಅಂಕ ಗಳಿಸಿತ್ತು. ಯು ಮುಂಬಾ 24 ಅಂಕ ಗಳಿಸಿ ಮುನ್ನಡೆ ಸಾಧಿಸಿತ್ತು. ಬೆಂಗಳೂರು ಬುಲ್ಸ್​ ಪರವಾಗಿ 6 ಬಾರಿ ರೈಡ್​ ಮಾಡಿ ಚಂದ್ರನ್​ ರಂಜಿತ್​ 9 ಅಂಕಗಳಿಸಿದರೆ, ಅತ್ತ ಯು ಮುಂಬಾ ತಂಡದ ಅಭಿಷೇಕ್​ ಸಿಂಗ್​ 11 ಬಾರಿ ರೈಡ್​ ಮಾಡಿ 14 ಅಂಕಗಳಿಸಿದರು. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡಿಸಿದರು. ಸ್ಟಾರ್​ ಆಟಗಾರರಿದ್ದರೂ ಕೊನೆ ಹಂತದಲ್ಲಿ ಬೆಂಗಳೂರು ಬುಲ್ಸ್​ ಸೋಲು ಕಂಡಿದೆ.

ಇದನ್ನು ಓದಿ : ಲೈವ್​ ಪಂದ್ಯ ನೋಡೋದೆಲ್ಲಿ? ಪ್ರೊ ಕಬ್ಬಡಿ ಲೀಗ್​ ಸೀಸನ್​ 8 ಟೂರ್ನಿಯ ಕಂಪ್ಲೀಟ್ ಮಾಹಿತಿ

ಜೂ.ಎನ್​ಟಿಆರ್​ ಕಾಮೆಂಟರಿ ಹೈಲೆಟ್​!

ಇನ್ನೂ ಪಂದ್ಯದ ಕಾಮೆಂಟರಿಯನ್ನ ಜೂ.ಎನ್​ಟಿಆರ್​ ಮಾಡಿದ್ದು ಕನ್ನಡಿಗರಿಗೆ ಸಖತ್​ ಖುಷಿ ಕೊಟ್ಟಿದೆ.  ಆರ್​ಆರ್​ಆರ್​ ಸಿನಿಮಾದ ಪ್ರಮೋಷನ್​ ಇರಬಹುದು ಎಂದು ಫ್ಯಾನ್ಸ್​ ಸುಮ್ಮನಾಗಿದ್ದರು. ಆದರೆ, ಕಬಡ್ಡಿ ಬಗ್ಗೆ ಜೂ.ಎನ್​ಟಿಆರ್​ ಕಾಮೆಂಟರಿ ಕೊಟ್ಟಿದ್ದಾರೆ. ಕನ್ನಡಕ್ಕೂ, ಅವರ ತಾಯಿಗೂ ಇರುವ ಲಿಂಕ್​ ಬಗ್ಗೆ ಜೂ.ಎನ್​ಟಿಆರ್​ ಹೇಳಿದ್ದಾರೆ. ಸ್ವಲ್ಪ ನಿಮಿಷ ಕಾಮೆಂಟ್ರಿ ಕೊಟ್ಟರು ಅದ್ಭುತವಾಗಿ ಜೂ.ಎನ್​ಟಿಆರ್​ ಕನ್ನಡ ಮಾತನಾಡಿದ್ದಾರೆ. ಈಗಾಗಲೇ ಆರ್​ಆರ್​ಆರ್​ ಸಿನಿಮಾದ ಟ್ರೈಲರ್​ನಲ್ಲೂ ಜೂ.ಎನ್​ಟಿಆರ್​ ಡಬ್ ಮಾಡಿದ್ದರು, ಜೊತೆಗೆ ಇಡೀ ಸಿನಿಮಾಗೆ ತಾನೇ ಡಬ್​ ಮಾಡಿರುವುದಾಗಿ ಹೇಳಿದ್ದರು. ಈಗ ಕನ್ನಡದಲ್ಲಿ ಕಾಮೆಂಟ್ರಿ ಕೊಟ್ಟಿದ್ದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.

12 ತಂಡಗಳ ನಡುವೆ ಕಬಡ್ಡಿ ಕಾಳಗ!

ಈ ಬಾರಿ 12 ತಂಡಗಳ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಯಲಿದೆ. ಅದರಂತೆ ಬೆಂಗಳೂರು ಬುಲ್ಸ್, ಯು ಮುಂಬಾ, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಬೆಂಗಾಲ್ ವಾರಿಯರ್ಸ್, ಯುಪಿ ಯೋಧಾ, ಗುಜರಾತ್ ಜೈಂಟ್ಸ್, ದಬಾಂಗ್ ಡೆಲ್ಲಿ, ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಆದರೆ, ಬಾರಿ ಬೆಂಗಳೂರು ಬುಲ್ಸ್​ ಗೆಲ್ಲುವ ಫೇವರೆಟ್​ ತಂಡ ಎನಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಎಡವಿದರೂ, ಮುಂಬರುವ ಪಂದ್ಯಗಳಲ್ಲಿ ಗೆಲುವಿನ ವಿಶ್ವಾಸ ಹೊಂದಿದೆ.

ಇದನ್ನು ಓದಿ : ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಭಾರತ ಹಾಕಿ ತಂಡ: ಕಂಚಿನ ಪದಕಕ್ಕೆ ಮುತ್ತಿಟ್ಟ ನಮ್​ ಹುಡುಗ್ರು!

ಯಾವ ಚಾನೆಲ್​ನಲ್ಲಿ ಲೈವ್​ ಪ್ರಸಾರ?
ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಮಾ ಗೋಲ್ಡ್ ಮತ್ತು ಸ್ಟಾರ್ ಸುವರ್ಣ ಪ್ಲಸ್.​ ಪ್ರೊ ಕಬಡ್ಡಿ 2021 ರ ಎಲ್ಲಾ ಪಂದ್ಯಗಳನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಹಾಗೆಯೇ ಪ್ರೊ ಕಬಡ್ಡಿ ಲೀಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭಿಮಾನಿಗಳು PKL ಪಂದ್ಯಗಳ ಲೈವ್ ಸ್ಕೋರ್‌ಗಳನ್ನು ವೀಕ್ಷಿಸಬಹುದು. 20 ತಿಂಗಳ ಬಳಿಕ ಇಂದಿನಿಂದ ಪ್ರೊ ಕಬಡ್ಡಿ ಲೀಗ್​ ಆರಂಭವಾಗಿರುವುದು ಕ್ರೀಡಾಭಿಮಾನಿಗಳಿಗೆ ಸಖತ್​ ಖುಷಿ ಕೊಟ್ಟಿದೆ.

Published by:Vasudeva M
First published: