ಕಬಡ್ಡಿ.. ಕಬಡ್ಡಿ.. ಕಬಡ್ಡಿ.. ಇದನ್ನು ಕೇಳುತ್ತಿದ್ದರೆ ಸಾಕು, ನಾವು ಒಮ್ಮೆ ತೊಡೆ ತಟ್ಟಿ ಎದುರಾಳಿಯ ಹುಟ್ಟಡಗಿಸೋಣ ಎನ್ನುವ ಜೋಶ್(Josh) ಬರುತ್ತೆ. ಅಂತಹ ಜೋಶ್ ನೀಡುವ ಪ್ರೊ ಕಬಡ್ಡಿ(Pro Kabaddi) ಹಬ್ಬಕ್ಕೆ ವೇದಿಕೆ ಸಿದ್ಧವಾಗಿದೆ. ವಿವೋ ಪ್ರೋ ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ. ನಾಳೆಯಿಂದ ಟೂರ್ನಿ ಆರಂಭವಾಗಲಿದೆ. ಈ ಬಾರಿ ಬೆಂಗಳೂರು ಬುಲ್ಸ್(Bengaluru Bulls) ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ಟೀಂ ಆಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಯು ಮುಂಬಾ(U Mumba) ಅವರಿಗೆ ಸೋಲಿಣಿಸಲು ಸಜ್ಜಾಗಿದ್ದಾರೆ. ತೊಡೆ ತಟ್ಟಿ ಗುಮ್ಮೋಕೆ ನಮ್ಮ ಬೆಂಗಳೂರು ಬುಲ್ಸ್ ರೆಡಿಯಾಗಿದ್ದಾರೆ. ಕೊರೋನಾ ಕಾರಣದಿಂದ ಹಿಂದಿನ ಎರಡು ವರ್ಷಗಳ ಆವೃತ್ತಿ ನಡೆದಿರಲಿಲ್ಲ. ಸೀಸನ್ 6 ಚಾಂಪಿಯನ್ಸ್(Champions) ಮತ್ತು ಈ ವರ್ಷದ ಫೆವರೇಟ್ ತಂಡ ಬೆಂಗಳೂರು ಬುಲ್ಸ್ ಡಿಸೆಂಬರ್ 22 ರಿಂದ ತವರಿನಿಂದಲೇ ಅಭಿಯಾನ ಆರಂಭಿಸಲಿದೆ. ಬೆಂಗಳೂರಿನಲ್ಲೇ ಸಂಪೂರ್ಣ ಟೂರ್ನಿ ನಡೆಯಲಿದೆ. ಹೀಗಾಗಿ ನಮ್ಮ ಸಿಲಿಕಾನ್ ಸಿಟಿ(Sillicon City) ಮಂದಿಗೆ ಈ ಬಾರಿ ಪ್ರೊ ಕಬಡ್ಡಿ ಟೂರ್ನಿ ನೋಡಿ ಎಂಜಾಯ್(Enjoy) ಮಾಡುವ ಅವಕಾಶ ಸಿಕ್ಕಿದೆ. ಮೊದಲ ಪಂದ್ಯವೇ ಸಾಕಷ್ಟು ರೋಚಕವಾಗಿರಲಿದೆ. ಡಿಸೆಂಬರ್ 22ರಿಂದ ರಾತ್ರಿ 7:30ಕ್ಕೆ ಪ್ರೊ ಕಬಡ್ಡಿ ಸೀಸನ್ 8 ಆರಂಭವಾಗಲಿದೆ.
ಬೆಂಗಳೂರು ಬುಲ್ಸ್ ಎಲ್ಲರ ಫೇವರಿಟ್ಸ್!
ಪ್ರೋ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಸದಾ ಫೇವರಿಟ್ ತಂಡ. ಜನವರಿ 2019 ರಲ್ಲಿ ನಡೆದ ಫೈನಲ್ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು ಸೋಲಿಸುವ ಮೂಲಕ 6ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಎರಡನೇ ಆವೃತ್ತಿಯಲ್ಲಿ ರನ್ನರ್ಸ್ಅಪ್ ಆಗಿದ್ದರೆ, ಮೊದಲ ಮತ್ತು 7ನೇ ಆವೃತ್ತಿಗಳಲ್ಲಿ ಸೆಮಿಫೈನಲ್ಸ್ ಪ್ರವೇಶ ಮಾಡಿತ್ತು. ಟೀಂ ಹೆಸರಿನಲ್ಲೇ ಬೆಂಗಳೂರು ಇದೆ. ಹೀಗಾಗಿ ಈ ತಂಡ ಅಂದರೆ ಸಿಟಿ ಮಂದಿಗೆ ಅಚ್ಚುಮೆಚ್ಚು. ಎಲ್ಲ ಪಂದ್ಯಗಳು ಬೆಂಗಳೂರಿನ ವೈಟ್ ಫೀಲ್ಡ್ನಲ್ಲಿರುವ ಐಶಾರಾಮಿ ಶೆರಟನ್ ಗ್ರ್ಯಾಂಡ್ ಪಂಚತಾರ ಹೋಟೆಲ್ನಲ್ಲಿ ನಡೆಯಲಿವೆ. ಆಯೋಜಕರು ಪಂದ್ಯಾವಳಿಯ ಮೊದಲ ಚರಣದ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಬೆಂಗಳೂರು ಬುಲ್ಸ್ ತಂಡ ಡಿಸೆಂಬರ್ನಲ್ಲಿ 4 ಮತ್ತು ಜನವರಿಯಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಿದೆ.
ಇದನ್ನು ಓದಿ : ನಾಳೆಯಿಂದ ಪ್ರೋಕಬಡ್ಡಿ ಕಲರವ; ಹಿಂದಿನ ಸೀಸನ್ಗಳಲ್ಲಿ ಗೆದ್ದವರು ಇವರು
ಬೆಂಗಳೂರು ಬುಲ್ಸ್ಗೆ ಮತ್ತಷ್ಟು ಬಲ!
ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡೆಸಲಿದ್ದಾರೆ. ಇನ್ನು ಡಿಫೆಂಡರ್ ಮಹೇಂದರ್ ಸಿಂಗ್ ಬೆಂಗಳೂರು ಬುಲ್ಸ್ ಶಕ್ತಿ. ಹೀಗಾಗಿ ಈ ಬಾರಿ ಕಪ್ ನಮ್ದೆ ಅಂತ ಟ್ವೀಟರ್ನಲ್ಲಿ ಟ್ರೆಡಿಂಗ್ ಆಗುತ್ತಿದೆ.
ಇದನ್ನು ಓದಿ : ಐಪಿಎಲ್ ಹರಾಜು ಯಾವಾಗ, ಎಲ್ಲಿ, ಯಾಕೆ ವಿಳಂಬ?; ಇಲ್ಲಿದೆ ವಿವರ
ಬೆಂಗಳೂರು ಬುಲ್ಸ್ಗೆ ಕಿಚ್ಚ ಸಾಥ್!
ಕಿಚ್ಚ ಸುದೀಪ್ ಪ್ರೊ ಕಬ್ಬಡಿ ಪ್ರೊಮೋದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಅದ್ಭುತ ಡೈಲಾಗ್ ಮೂಲಕ ಬೆಂಗಳೂರು ಬುಲ್ಸ್ ತಂಡವನ್ನ ಪ್ರೇರೇಪಿಸಿದ್ದಾರೆ.
ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್.. ಸಪೋರ್ಟ್ ಮಾಡೋಕೆ ರೆಡಿಯಾಗಿ ಕಬಡ್ಡಿ ಫ್ಯಾನ್ಸ್.. ನಿಮ್ಮ ಜೊತೆ @bengalurubulls ಟೀಮ್ ಗೆ ಬೆಂಬಲ ನೀಡೋಕೆ ನಾನೂ ಕೂಡ ಇರ್ತಿನಿ ಎಂದು ಹೇಳುವ ಮೂಲಕ ಸಾಥ್ ಕೊಟ್ಟಿದ್ದಾರೆ. ಇನ್ಯಾಕೆ ತಡ ನುಗ್ತಾ ಇರೋದೆ, ಪಾಯಿಂಟ್ಸ್ ತಗೊಂಡು ಬರ್ತಾ ಇರೋದೆ ಎಂದು ಅಭಿಮಾನಿಗಳು ಕೂಡ ಬೆಂಗಳೂರು ಬುಲ್ಸ್ಗೆ ಜೋಶ್ ತುಂಬಿದ್ದಾರೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ