• Home
  • »
  • News
  • »
  • sports
  • »
  • Prithvi Shaw: ರಣಜಿ ಟ್ರೋಫಿಯಲ್ಲಿ 379 ರನ್​ ಸಿಡಿಸಿದ ಪೃಥ್ವಿ, ರಣಜಿಯ ಟಾಪ್ 10 ಗರಿಷ್ಠ ಸ್ಕೋರರ್​ ಇವರೇ ನೋಡಿ!

Prithvi Shaw: ರಣಜಿ ಟ್ರೋಫಿಯಲ್ಲಿ 379 ರನ್​ ಸಿಡಿಸಿದ ಪೃಥ್ವಿ, ರಣಜಿಯ ಟಾಪ್ 10 ಗರಿಷ್ಠ ಸ್ಕೋರರ್​ ಇವರೇ ನೋಡಿ!

ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ತ್ರಿಶತಕ

ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ತ್ರಿಶತಕ

ಅಸ್ಸಾಂ ವಿರುದ್ಧ ಆರಂಭದಿಂದಲೂ ಅಬ್ಬರಿಸಿ ಪೃಥ್ವಿ ಶಾ ಶತಕವನ್ನು 107 ಎಸೆತಗಳಲ್ಲಿ, ಪೂರ್ಣಗೊಳಿಸಿದರೆ, ದ್ವಿಶತಕವನ್ನು 235 ಎಸೆತಗಳಲ್ಲಿ ಪೂರೈಸಿದರು. ದ್ವಿಶತಕದಿಂದ ತ್ರಿಶತಕಕ್ಕೆ ಮುಂಬೈ ಆರಂಭಿಕ ಬ್ಯಾಟರ್ ತೆಗೆದುಕೊಂಡಿದ್ದು ಕೇವಲ 91 ಎಸೆತಗಳು ಮಾತ್ರ. ಒಟ್ಟಾರೆ 379 ರನ್​ಗಳಿಸಿದ ಪೃಥ್ವಿ ಶಾ ರಣಜಿ ಕ್ರಿಕೆಟ್​ ಇತಿಹಾಸದ 2ನೇ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಮಹಾರಾಷ್ಟ್ರ  ಬಿ.ಬಿ. ನಿಂಬಾಳ್ಕರ್ 443 ರನ್​ಗಳಿಸಿರುವುದು ರಣಜಿ ಕ್ರಿಕೆಟ್​ನಲ್ಲಿ ದಾಖಲೆಯಾಗಿ ಉಳಿದುಕೊಂಡಿದೆ.

ಮುಂದೆ ಓದಿ ...
  • Share this:

ಭಾರತದ ಭವಿಷ್ಯದ ಸಚಿನ್​ ತೆಂಡೂಲ್ಕರ್ (sachin Tendulkar) ಎಂದೇ ಬಿಂಬಿಸಿಕೊಳ್ಳುತ್ತಿದ್ದ ಯುವ ಆಟಗಾರ ಪೃಥ್ವಿ ಶಾ (Prithvi Shaw)ಬುಧವಾರ ರಣಜಿ ಟ್ರೋಫಿಯ (Ranji Trophy) ಲೀಗ್ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮೂಲಕ ಮತ್ತೊಂದು ದಾಖಲೆ ಸಿಡಿಸಿದ್ದಾರೆ. ಗುವಾಹಟಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಸ್ಸಾಂ ಬೌಲರ್​ಗಳನ್ನು ಚೆಂಡಾಡಿದ್ದ ಪೃಥ್ವಿ 383 ಎಸೆತಗಳಲ್ಲಿ ಬರೋಬ್ಬರಿ 49 ಬೌಂಡರಿ ಹಾಗೂ 4 ಸಿಕ್ಸರ್​ಗಳ ನೆರವಿನಿಂದ 379 ರನ್​ ಸಿಡಿಸಿ ರಣಜಿ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ ಸಿಡಿಸಿದ 2ನೇ ಬ್ಯಾಟರ್​ ಎನಿಸಿಕೊಂಡರು.


ಕಳೆದ ಎರಡು ವರ್ಷಗಳಿಂದ ದೇಶಿ ಕ್ರಿಕೆಟ್​ನ ಎಲ್ಲಾ ವಿಭಾಗಗಳಲ್ಲೂ ಭರ್ಜರಿ ಫಾರ್ಮ್​ನಲ್ಲಿರುವ ಪೃಥ್ವಿ ಶಾ ತಮ್ಮ ಪ್ರದರ್ಶನವನ್ನು ರಣಜಿ ಕ್ರಿಕಟ್​ನಲ್ಲೂ ಮುಂದುವರಿಸುತ್ತಿದ್ದಾರೆ. ಅಸ್ಸಾಂ ವಿರುದ್ಧ ಕೇವಲ ತಮ್ಮ ವೈಯಕ್ತಿಕ ದಾಖಲೆಯನ್ನಷ್ಟೇ ಅಲ್ಲದೆ ಸಂಜಯ್ ಮಂಜ್ರೇಕರ್, ಸುನಿಲ್ ಗವಾಸ್ಕರ್​ ಹಾಗೂ ವಿವಿಎಸ್​ ಲಕ್ಷ್ಮಣ್​ ಅಂತಹ ದೈತ್ಯರ ಹೆಸರಿನಲ್ಲಿದ್ದ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.


ರಣಜಿ ಇತಿಹಾಸದ 2ನೇ ಗರಿಷ್ಠ ಸ್ಕೋರರ್


ಅಸ್ಸಾಂ ವಿರುದ್ಧ ಆರಂಭದಿಂದಲೂ ಅಬ್ಬರಿಸಿ ಪೃಥ್ವಿ ಶಾ ಶತಕವನ್ನು 107 ಎಸೆತಗಳಲ್ಲಿ, ಪೂರ್ಣಗೊಳಿಸಿದರೆ, ದ್ವಿಶತಕವನ್ನು 235 ಎಸೆತಗಳಲ್ಲಿ ಪೂರೈಸಿದರು. ದ್ವಿಶತಕದಿಂದ ತ್ರಿಶತಕಕ್ಕೆ ಮುಂಬೈ ಆರಂಭಿಕ ಬ್ಯಾಟರ್ ತೆಗೆದುಕೊಂಡಿದ್ದು ಕೇವಲ 91 ಎಸೆತಗಳು ಮಾತ್ರ. ಒಟ್ಟಾರೆ 379 ರನ್​ಗಳಿಸಿದ ಪೃಥ್ವಿ ಶಾ ರಣಜಿ ಕ್ರಿಕೆಟ್​ ಇತಿಹಾಸದ 2ನೇ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಮಹಾರಾಷ್ಟ್ರ  ಬಿಬಿ ನಿಂಬಾಳ್ಕರ್ 443 ರನ್​ಗಳಿಸಿರುವುದು ದಾಖಲೆಯಾಗಿದೆ.


ಇದನ್ನೂ ಓದಿ:Prithvi Shaw: 49 ಬೌಂಡರಿ, 4 ಸಿಕ್ಸರ್, 400 ಜಸ್ಟ್ ಮಿಸ್! ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ ಆಟಗಾರ


ದಿಗ್ಗಜರ ದಾಖಲೆಗಳು ಬ್ರೇಕ್


ಪೃಥ್ವಿ ಶಾ ತ್ರಿಶತಕ ಸಿಡಿಸುವ ಮೂಲಕ ರಣಜಿ ಕ್ರಿಕೆಟ್​ನಲ್ಲಿ ವೈಯಕ್ತಿಕರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಅವರು ಸಂಜಯ್ ಮಂಜ್ರೇಕರ್​ ದಾಖಲೆಯನ್ನು ಹಿಂದಿಕ್ಕುವ ಮೂಲಕ ಈ ದಾಖಲೆಗೆ ಪಾತ್ರರಾದರು. ಮಂಜ್ರೇಕರ್ 1990-91ರಲ್ಲಿ ಹೈದರಾಬಾದ್​ ವಿರುದ್ಧ 377 ರನ್​ಗಳಿಸಿದ್ದರು. ಶಾ ಕೇವಲ ಮಂಜ್ರೇಕರ್ ದಾಖಲೆಯನ್ನಲ್ಲದೆ ಲೆಜೆಂಡರಿ ಬ್ಯಾಟರ್​ಗಳಾದ ಸುನೀಲ್ ಗವಾಸ್ಕರ್ (340), ವಿವಿಎಸ್​ ಲಕ್ಷ್ಮಣ್(353) ದಾಖಲೆಗಳನ್ನು ಬ್ರೇಕ್ ಮಾಡಿದರು.


ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ತ್ರಿಶತಕ


ರಣಜಿ ಕ್ರಿಕೆಟ್​ನ ಟಾಪ್​ 10 ಗರಿಷ್ಠ ಸ್ಕೋರರ್​


ಬಿಬಿ ನಿಂಬಾಳ್ಕರ್​( ಮಹಾರಾಷ್ಟ್ರ)- 443
ಪೃಥ್ವಿ ಶಾ (ಮುಂಬೈ)- 379
ಸಂಜಯ್ ಮಂಜ್ರೇಕರ್ (ಮುಂಬೈ)- 377
ಎಂ.ವಿ. ಶ್ರೀಧರ್ (ಹೈದರಾಬಾದ್​)- 366
ವಿಜಯ್ ಮರ್ಚೆಂಟ್ (ಮುಂಬೈ) - 359
ಸಮಿತ್ ಗೋಯಲ್ (ಗುಜರಾತ್) - 359
ವಿವಿಎಸ್​ ಲಕ್ಷ್ಮಣ್ (ಹೈದರಾಬಾದ್​)- 353
ಚೇತೇಶ್ವರ್ ಪೂಜಾರ (ಸೌರಾಷ್ಟ್ರ) - 352
ಸ್ವಪ್ನಿಲ್ ಗೂಗಲೆ (ಮಹಾರಾಷ್ಟ್ರ)- 351
ಪುನೀತ್ ಬಿಸ್ತ್​ (ಮೇಘಾಲಯ) - 343


ಮುಂಬೈ ಬೃಹತ್ ಮೊತ್ತ


ಪೃಥ್ವಿ ಶಾ(379) ತ್ರಿಶಕ ಹಾಗೂ ನಾಯಕ ಅಜಿಂಕ್ಯಾ ರಹಾನೆ (191) ಶತಕದ ನೆರವಿನಿಂದ ಮುಂಬೈ ತಂಡ 138.4 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 687 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ. ಈ ಬೃಹತ್ ಮೊತ್ತವನ್ನು ಹಿಂಬಾಲಿಸುತ್ತಿರುವ ಅಸ್ಸಾಂ 85 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 283 ರನ್​ಗಳಿಸಿದೆ.


ಮುಂಬೈಗೆ ರಣಜಿ ಗೆದ್ದುಕೊಡುವ ಗುರಿ


ದೇಶಿ ಕ್ರಿಕೆಟ್​ನಲ್ಲಿ ರನ್​ಗಳ ಮಳೆ ಸುರಿಸುತ್ತಿರುವ ಪೃಥ್ವಿ ಶಾ ಸದ್ಯಕ್ಕೆ ಭಾರತ ತಂಡಕ್ಕೆ ಮರಳುವ ಬಗ್ಗೆ ಹೆಚ್ಚು ಯೊಚನೆ ಮಾಡುತ್ತಿಲ್ಲ. ಪ್ರಸ್ತುತ ತಮ್ಮ ಗುರಿ ಏನಿದ್ದರು ತಮ್ಮ ಮುಂಬೈ ತಂಡಕ್ಕೆ ರಣಜಿ ಟ್ರೋಫಿ ಗೆದ್ದು ಕೊಡುವುದು ಎಂದು ಹೇಳಿದ್ದಾರೆ. ತಮ್ಮ ಇನ್ನಿಂಗ್ಸ್​ ಮೆಚ್ಚಿ ಸಾಕಷ್ಟು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನನ್ನ ಆಟ ಬಹಳಷ್ಟು ಜನರಿಗೆ ಖುಷಿ ಕೊಟ್ಟಿರುವುದು ನನಗೆ ತುಂಬಾ ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.

Published by:Rajesha B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು