ಪೃಥ್ವಿ ಷಾ ಬಿರುಸಿನ ಆಟ: ಎರಡನೇ ಇನ್ನಿಂಗ್ಸ್​​ನಲ್ಲಿ ಕಮ್​​ಬ್ಯಾಕ್ ಮಾಡಿದ ಭಾರತ 'ಎ'

news18
Updated:July 6, 2018, 7:38 PM IST
ಪೃಥ್ವಿ ಷಾ ಬಿರುಸಿನ ಆಟ: ಎರಡನೇ ಇನ್ನಿಂಗ್ಸ್​​ನಲ್ಲಿ ಕಮ್​​ಬ್ಯಾಕ್ ಮಾಡಿದ ಭಾರತ 'ಎ'
news18
Updated: July 6, 2018, 7:38 PM IST
ನ್ಯೂಸ್ 18 ಕನ್ನಡ

ಬೆಕೆನ್​​ಹ್ಯಾಮ್ (ಜುಲೈ. 06): ಭಾರತ 'ಎ' ಹಾಗೂ ವೆಸ್ಟ್​ ಇಂಡೀಸ್ 'ಎ' ತಂಡಗಳ ನಡುವೆ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಕಮ್​ಬ್ಯಾಕ್ ಮಾಡಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ ಎರಡರಲ್ಲೂ ಕಳಪೆ ಪ್ರದರ್ಶನ ತೋರಿದ ಭಾರತ 'ಎ' ಕೇವಲ 133 ರನ್​ಗೆ ಸರ್ವಪತನ ಕಂಡಿತ್ತು. ಇದಕ್ಕೆ ಪ್ರತಿಯಾಗಿ ವೆಸ್ಟ್​ ಇಂಡೀಸ್ 'ಎ' 383 ರನ್​​​ಗೆ ಆಲೌಟ್ ಆಗಿತ್ತು. ಬಳಿಕ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ 'ಎ' ತಂಡಕ್ಕೆ ಪೃಥ್ವಿ ಷಾ ಅವರ ಶತಕ ಹಾಗೂ ಮಮಾಂಕ್ ಅಗರ್ವಾಲ್ ಅವರ ಅರ್ಧಶತಕದ ನೆರವಿನಿಂದ ಚೇತರಿಕೆ ಕಂಡಿದೆ. ಮೊದಲ ವಿಕೆಟ್​ಗೆ 181 ರನ್​ಗಳ ಜೊತೆಯಾಟ ನೀಡಿದ ಈ ಜೋಡಿ, ಅಗರ್ವಾಲ್ 68 ರನ್​ಗೆ ಔಟ್ ಆದರು. ಬಳಿಕ ಸಮರ್ಥ್​​ ಜೊತೆಗೂಡಿದ ಷಾ ವೆಸ್ಟ್​​ ಇಂಡೀಸ್ ಬೌಲರ್​ಗಳ ಬೆವರಿಳಿಸಿದರು. 169 ಎಸೆತಗಳಲ್ಲಿ 188 ರನ್​ ಕಲೆಹಾಕಿದ ಷಾ ದ್ವಿಶತಕದ ಅಂಚಿನಲ್ಲಿ ಎಡವಿದರು. ಸದ್ಯ ಭಾರತ 'ಎ' ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಆಟ ಪ್ರರ್ಶಿಸುತ್ತಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಡುತ್ತಿದೆ.
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...